ನಿಪ್ಪಾಣಿ: 50 ಸಾವಿರ ಶರ್ಯತ್ತು ರಸಿಕರ ಹುಯ್ಯೋ ಎಂಬ ಧ್ವನಿಯೊಂದಿಗೆ ಉರಿದುಂಬಿಸಿ ಕಣ್ಮನ ಸೆಳೆದ ನಿಪ್ಪಾಣಿ ತಾಲೂಕಿನ ಬೊರಗಾವ ಪಟ್ಟಣದ ನಾಗರಿಕ ಸಂಘಟನೆ ವತಿಯಿಂದ ಮಕರ ಸಂಕ್ರಾಂತಿ ಪ್ರಯುಕ್ತ ಏರ್ಪಡಿಸಿದ್ದ ಜೋಡೆತ್ತುಗಳ ಚಕ್ಕಡಿ ಸ್ಪರ್ಧೆಯಲ್ಲಿ ದಾನವಾಡ ಗ್ರಾಮದ ಪ್ರಕಾಶ್ ಪಾಟೀಲರ ಎತ್ತುಗಳು ಪ್ರಥಮ ಕ್ರಮಾಂಕ ಆಗಮಿಸಿ 1 ಲಕ್ಷ ನಗದು ಬಹುಮಾನ ದೊಂದಿಗೆ ಬೋರಗಾವ ಕೇಸರಿ ಪದಕ ತನ್ನದಾಗಿಸಿಕೊಂಡವು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಜಿಲ್ಲಾ ಕಾಂಗ್ರೆಸ ಉಪಾಧ್ಯಕ್ಷ ಅಣ್ಣಾಸಾಹೇಬ ಹವಲೇ ಅವರ ನೇತೃತ್ವದಲ್ಲಿ ನಾಗರಿಕ ಸಂಘಟನೆ ವತಿಯಿಂದ ಏರ್ಪಡಿಸಲಾದ ವಿರಾಟ ಎತ್ತುಗಳ ಚಕ್ಕಡಿ ಓಡಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು.
ಸ್ಪರ್ಧೆಯಲ್ಲಿ ದಾನವಾಡ ಗ್ರಾಮದ ಪ್ರಕಾಶ್ ಪಾಟೀಲರ ಎತ್ತುಗಳು ಪ್ರಥಮ ಬಾಳು ಹಜಾರೆಯವರ ಎತ್ತುಗಳು ದ್ವಿತೀಯ ಹಾಗೂ ಪ್ರಮೋದ್ ಥೋರಾತ ಎತ್ತುಗಳು ತೃತೀಯ ಕ್ರಮಾಂಕ ಪಡೆದುಕೊಂಡವು.ಸ್ಪರ್ದೆಯಲ್ಲಿಯ ವಿವಿಧ ಗುಂಪುಗಳ ಕುದುರೆ ಎತ್ತುಗಳ ಸ್ಪರ್ಧಕರ ವಿಜೇತರಿಗೆ ಶಾಸಕ ಗಣೇಶ್ ಹುಕ್ಕೇರಿ ಮಾಜಿ ಇಂಧನ ಸಚಿವ ವೀರಕುಮಾರ್ ಪಾಟಿಲ ಮಾಜಿ ಶಾಸಕರಾದ ಸುಭಾಷ ಜೋಷಿ,ಕಾಕಾಸಾಹೇಬ ಪಾಟೀಲ ನಿಪ್ಪಾಣಿ ತಾಲೂಕ ಕಾಂಗ್ರೆಸ್ ಅಧ್ಯಕ್ಷ ರಾಜೇಶ ಕದಂ ಗ್ರಾಮೀಣ ಅಧ್ಯಕ್ಷ ಬಸವರಾಜ ಪಾಟೀಲ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ರಾಜೇಂದ್ರ ವಡ್ಡರ್ ಅವರ ಹಸ್ತದಿಂದ ಬಹುಮಾನ ವಿತರಿಸಲಾಯಿತು. ಬಹುಮಾನ ವಿತರಣೆ ಸಮಾರಂಭದಲ್ಲಿ ಶಿವಾಜಿ ಮಾಳಿ, ಸಂಜಯ ಹವಲೆ ರಾಜು ಖಿಚಡೇ ವಿದ್ಯಾಧರ ಅಮ್ಮನವರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಸ್ಪರ್ದೆ ವೀಕ್ಷಿಸಲು ಕರ್ನಾಟಕ ಮಹಾರಾಷ್ಟ್ರ ದಿಂದ ಸಾವಿರಾರು ಪ್ರೇಕ್ಷಕರು ಉಪಸ್ಥಿತರಿದ್ದರು.
ಮಹಾವೀರ ಚಿಂಚನೆ