Ad imageAd image

ಖರ್ಜೂರ ತಿನ್ನೋದ್ರಿಂದ,ಎಷ್ಟೊಂದು ಲಾಭ….ಅದರ ಉಪಯೋಗ

Bharath Vaibhav
ಖರ್ಜೂರ ತಿನ್ನೋದ್ರಿಂದ,ಎಷ್ಟೊಂದು ಲಾಭ….ಅದರ  ಉಪಯೋಗ
WhatsApp Group Join Now
Telegram Group Join Now

ಖರ್ಜೂರವನ್ನು ಯಾವ ಕಾಲದಲ್ಲಿ ತಿಂದರೂ ಆರೋಗ್ಯಕ್ಕೆ ತುಂಬಾ ಒಳ್ಳೆಯ ಪರಿಣಾಮಗಳಿವೆ. ಅದರಲ್ಲೂ ಚಳಿಗಾಲದಲ್ಲಿ ಖರ್ಜೂರ ಸೇವನೆಯಿಂದ ದೇಹಕ್ಕೆ ಯಾವೆಲ್ಲಾ ಪ್ರಯೋಜನಗಳು ದೊರೆಯುತ್ತವೆ ಎಂಬುದನ್ನು ಇಲ್ಲಿ ನೋಡೋಣ.

ಚಳಿಗಾಲದಲ್ಲಿ ಜನರು ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಆದ್ದರಿಂದ ಈ ಋತುವಿನಲ್ಲಿ ಅವರು ತಮ್ಮ ದೇಹವನ್ನು ಆರೋಗ್ಯವಾಗಿಡಲು ಆಹಾರದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿಕೊಳ್ಳಭೇಕು. ಋತುವಿಗೆ ಅನುಗುಣವಾಗಿ ಕೆಲವು ವಸ್ತುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ತುಂಬಾ ಒಳ್ಳೆಯದು.

ಆ ರೀತಿ ಚಳಿಗಾಲದಲ್ಲಿ ಖರ್ಜೂರ ಸೇವಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿರುವ ಪೋಷಕಾಂಶಗಳು ದೇಹದಲ್ಲಿರುವ ಹಲವಾರು ಸಮಸ್ಯೆಗಳಿಗೆ ಪರಿಹಾರವನ್ನು ನೀಡಲು ಸಹಾಯ ಮಾಡುತ್ತದೆ. ಆದ್ದರಿಂದ ಚಳಿಗಾಲದಲ್ಲಿ ಖರ್ಜೂರ ಸೇವಿಸುವುದರಿಂದ ಯಾವೆಲ್ಲಾ ಪ್ರಯೋಜನಗಳು ದೊರೆಯುತ್ತವೆ ಎಂಬುದನ್ನು  ನೋಡೋಣ ಬನ್ನಿ

ಎಲುಬುಗಳಿಗೆ ಒಳ್ಳೆಯದು:-ಚಳಿಗಾಲದಲ್ಲಿ ಹೆಚ್ಚಿನವರು ಆಗಾಗ್ಗೆ ಕೀಲು ನೋವಿನಿಂದ ಬಳಲುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಪ್ರತಿದಿನ ಕನಿಷ್ಠ ಪ್ರಮಾಣದ ಖರ್ಜೂರವನ್ನು ಸೇವಿಸಬಹುದು. ಚಳಿಗಾಲದಲ್ಲಿ ಸೂರ್ಯನ ಬೆಳಕು ಪಡೆಯುವುದು ಕಷ್ಟಕರವಾದ್ದರಿಂದ, ದೇಹದಲ್ಲಿ ವಿಟಮಿನ್ ಡಿ ಕೊರತೆಯನ್ನು ನೀಗಿಸಲು ಖರ್ಜೂರ ನಿಮಗೆ ಸಹಾಯ ಮಾಡುತ್ತದೆ. ಇದರಲ್ಲಿರುವ ಕ್ಯಾಲ್ಸಿಯಂ ಎಲುಬುಗಳು ಮತ್ತು ಹಲ್ಲುಗಳನ್ನು ಬಲಪಡಿಸುತ್ತದೆ. ಇದಲ್ಲದೆ, ಇದರಲ್ಲಿ ಪೊಟ್ಯಾಸಿಯಮ್, ಫಾಸ್ಫರಸ್, ಮೆಗ್ನೀಸಿಯಮ್ ಮುಂತಾದ ಪೋಷಕಾಂಶಗಳಿವೆ. ಇದು ಎಲುಬುಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.

ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ:-ಚಳಿಗಾಲದಲ್ಲಿ ಹೃದಯಾಘಾತದ ಅಪಾಯ ಹೆಚ್ಚಾಗಿರುತ್ತದೆ. ಆದ್ದರಿಂದ ಚಳಿಗಾಲದಲ್ಲಿ ನಿಮ್ಮ ಹೃದಯವನ್ನು ಆರೋಗ್ಯವಾಗಿಡಲು ಖರ್ಜೂರ ಸೇವಿಸಿ. ಇದು ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!