ಬೆಂಗಳೂರು: ಆರ್‌ಬಿ ತಿಮ್ಮಾಪೂರ ನಾನು ಸಿಎಂ ಆಕಾಂಕ್ಷಿ ಎಂದು ಹೇಳಿರುವುದರಲ್ಲಿ ತಪ್ಪೇನಿಲ್ಲ. ಅವರು 30 ವರ್ಷ ರಾಜಕೀಯ ಮಾಡಿದ್ದಾರೆ. ಅವರಿಗೂ ಸಾಮರ್ಥ್ಯ ಇದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಆಗಲು ತಿಮ್ಮಾಪೂರ ಅವರು ರೆಡಿ ಇದ್ದೇನೆ ಎಂದಿದ್ದರು.ಸಿಎಂ ಸ್ಥಾನವನ್ನು ಯಾರು ಬೇಕಾದರೂ ಕೇಳಬಹುದು. ಅವರು ಆಕಾಂಕ್ಷಿಯಾಗಬಹುದು. ಅದನ್ನು ಕೇಳುವುದರಲ್ಲಿ ತಪ್ಪೇನಿಲ್ಲ ಎಂದು ಹೇಳಿದರು.
ದಲಿತರ ಸಭೆ ಬಗ್ಗೆ ಸುರ್ಜೇವಾಲಾ ಬೇಸರ ವ್ಯಕ್ತಪಡಿಸಿದ ವಿಚಾರವಾಗಿ ಮಾತನಾಡಿದ ಅವರು, ಪ್ರಧಾನ ಕಾರ್ಯದರ್ಶಿಗಳು ಹೇಳಿ ಹೋಗಿದ್ದಾರೆ. ನಾವು ಸ್ವಲ್ಪ ಮಾತು ಕಡಿಮೆ ಮಾಡುತ್ತೇವೆ.
ನಾವು ಸಮಸ್ಯೆ ಬಗೆಹರಿಸಲು ಸಭೆ ಮಾಡುತ್ತಿರುವುದು. ನಾವಿದ್ದರೆ ತಾನೇ ಪಕ್ಷ? ಜನಸಮುದಾಯ ಇದ್ದರೆ ತಾನೇ ಪಕ್ಷ ಇರೋದು? ಕಾಂಗ್ರೆಸ್ ಪಕ್ಷ ಒಂದು ಅಂದೋಲನ. ಯಾರ್ಯಾರು ಏನೇನು ವ್ಯಾಖ್ಯಾನ ಮಾಡುತ್ತಾರೋ ಮಾಡಲಿ ಎಂದು ಪರೋಕ್ಷವಾಗಿ ಸುರ್ಜೇವಾಲಾಗೆ ಪರಂ ಟಕ್ಕರ್ ನೀಡಿದ್ದಾರೆ.