ಹುಬ್ಬಳ್ಳಿ: ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರಿ ಸಂಘದ 2024-29 ಸಾಲಿನ ಅವಧಿಗೆ ಅಧ್ಯಕ್ಷರಾಗಿ ಎಂ.ಎಚ್.ಜಂಗಳಿ, ಉಪಾಧ್ಯಕ್ಷರಾಗಿ ಡಿ.ಎಫ್.ಈರಗಾರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪತ್ತಿನ ಸಂಘದ ನಿರ್ದೇಶಕರಾಗಿರುವ
ಎಮ್. ವೈ.ದೊಡ್ಡಮನಿ,ಎಮ್.ವ್ಹಿ ರನ್ನವರ, ಬಿ.ಕೆ.ಕುರಡಗಿ, ಎನ್.ಎಲ್.ಪಾಟೀಲ,ಎಮ್.ಎಸ್.ಗೊರವರ್,ಎಸ್.ವೈ. ಬೂದಿಹಾಳ,ಎಚ್.ಎಮ್.ಕುಂದರಗಿ,ಎನ್.ಎಸ್.ಅವರಾದಿ, ಎ. ಬಿ.ಜಂತ್ಲಿ, ಪಿ.ಇ. ಪೂಜಾರ ಅವರು ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಿದರು.
ನೂತನ ಅಧ್ಯಕ್ಷರು, ಉಪಾಧ್ಯಕ್ಷರುಗಳನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹುಬ್ಬಳ್ಳಿ ಶಹರ ಘಟಕದ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.
ವರದಿ: ನಿತೀಶಗೌಡ ತಡಸ ಪಾಟೀಲ್