ಅಥಣಿ: ಬಹುಜನ ಸಮಾಜದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಉತ್ತರ ಪ್ರದೇಶದ ನಾಲ್ಕು ಬಾರಿ ಮುಖ್ಯಮಂತ್ರಿ ಯಾಗುರುವಂತ ಅಕ್ಕ ಮಾಯಾವತಿ ಜಿ ಅವರ 69ನೇ ಹುಟ್ಟುಹಬ್ಬದ ಪ್ರಯುಕ್ತವಾಗಿ ದೇಶದಾದ್ಯಂತ ಚಿಕ್ಕೋಡಿ ಜಿಲ್ಲೆಯ ವತಿಯಿಂದ ಬಹುಜನ ಸಮಾಜದ ಕಾರ್ಯಕರ್ತರ ವತಿಯಿಂದ ಅಥಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲ ನೀಡುವುದರ ಮೂಲಕ ಅಕ್ಕ ಮಾಯಾವತಿ ಜೀ ಯವರ ಹುಟ್ಟುಹಬ್ಬವನ್ನು ಸರಳವಾಗಿ ಆಚರಣೆ ಮಾಡಲಾಯಿತು.
ನಂತರ ಬಹುಜನ ಸಮಾಜದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಬಾಹುಸಾಹೇಬ್ ಕಾಂಬಳೆ ಅವರು ಮಾತನಾಡಿ ಆಸಕ್ತ ಸಮಾಜದ ಶಕ್ತಿ ಸ್ವರೂಪ ಅಕ್ಕ ಮಾಯಾವತಿ ಜಿ ಅವರ 69ನೇ ಹುಟ್ಟುಹಬ್ಬವನ್ನು ಬಹುಜನ ಸಮಾಜದ ಕಾರ್ಯಕರ್ತರು ಸೇರಿ ಇಂದು ಅಥಣಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ನೀಡಿ ಸರಳವಾಗಿ ಅವರ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಯಿತು ಅವರಿಗೆ ದೇವರು ಇನ್ನಷ್ಟು ಆಯುಷ್ಯ ಆರೋಗ್ಯ ಸಂಪತ್ತನ್ನು ನೀಡಲಿ ಎಂದರು.
ಈ ಸಂದರ್ಭದಲ್ಲಿ ಗೀತಾ ಬಾಹುಸಾಹೇಬ್ ಕಾಂಬಳೆ, ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಅಜಿತ ಕಾಂಬಳೆ ಜಿಲ್ಲಾಧ್ಯಕ್ಷರು ಚಿಕ್ಕೋಡಿ .ಸಂಜಯ ಕಾಂಬಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ. ವಕೀಲರಾದ ಸದಾಶಿವ್ ಕಾಂಬಳೆ ರಾಮ ಪೂಜಾರಿ ರೋಜಾ ಐಹೊಳೆ ಹಾಗೂ ಬಹುಜನ ಸಮಾಜದ ಹಿರಿಯ ಮುಖಂಡರು ಶ್ರಾವಣ ಕಾಂಬಳೆ, ಮುತ್ತಪ್ಪ ಕಾಂಬಳೆ ಅಪಸಾಬ್ ಗೊಂದಳೆ ಹಾಗೂ ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ : ರಾಜು ವಾಘಮಾರೆ