ನಿಪ್ಪಾಣಿ : ಹೌದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮಭೂಷಣ ಡಾ. ವೀರೇಂದ್ರ ಹೆಗ್ಗಡೆಯವರ 77ನೇ ಜನ್ಮದಿನ ದ ಪ್ರಯುಕ್ತ ನಿಪ್ಪಾಣಿ ತಾಲೂಕಿನ ಬೇಡಕಿಹಾಳದ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣೆ ಘಟಕದ ವತಿಯಿಂದ ಸರಕಾರಿ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಸೇಬು,ಬಾಳೆ, ಮೋಸಂಬಿ, ದಾಳಿಂಬೆ,ಸೇರಿ ನೂರಕ್ಕೂ ಅಧಿಕ ಮಕ್ಕಳಿಗೆ ಹಣ್ಣು ಹಂಚಲಾಯಿತು. ಈ ಸಂದರ್ಭದಲ್ಲಿ ತಾಲೂಕು ಯೋಜನಾಧಿಕಾರಿ ಮಂಜುನಾಥ್ ನಾಯಕ ಮಾತನಾಡಿ ಜಿಲ್ಲೆಯಲ್ಲಿಯೇ ಡಾ. ಬಿ.ಆರ್.ಅಂಬೇಡ್ಕರ್ ಸರಕಾರಿ ವಸತಿ ನಿಲಯ ಮಾದರಿಯಾಗಿದ್ದು ವಿದ್ಯಾರ್ಥಿಗಳಲ್ಲಿಯ ಶಿಸ್ತು, ಸಂಯಮ,ವಸತಿ ನಿಲಯದ ಸ್ವಚ್ಛತೆ ಕಾರ್ಯ ಶ್ಲಾಘನೀಯವೆಂದರು ಪ್ರಾರಂಭದಲ್ಲಿ ಶೌರ್ಯ ಘಟಕದ ತಾಲೂಕಾ ಪ್ರತಿನಿಧಿ ಬಾಳಾಸಾಹೇಬ ಶಿಂದೆ ಹಾಗೂ ವಸತಿ ನಿಲಯದ ವಾರ್ಡನ ಡಿ.ಎ. ಪಾಟೀಲ ಮಾತನಾಡಿದರು.ಹಣ್ಣು ವಿತರಣೆ ಕಾರ್ಯಕ್ರಮದಲ್ಲಿ ವಸತಿ ನಿಲಯ ಅಡುಗೆ ಸಹಾಯಕ ಮಿಲಿಂದ ಘಾಟಗೆ, ಸೇವಾ ಪ್ರತಿನಿಧಿಗಳಾದ ರಾಜಶೇಖರ ಕೊಡದವರ,ಭಗವಂತ ದೇಸಾಯಿ,ಸಂತೋಷ ದೇಸಾಯಿ, ಶಬ್ಬೀರ ಪುನಚಾರ,ಅನಿಲ ಘೋರಪಡೆ,ಕುಮಾರ ಭುಯಿ,ಸಂದಿಪ್ ಢಂಗ್, ಬಜರಂಗ ಪೂಜಾರಿ,ರಾಜು ನಾಯಿಕ,ಶ್ರೀದೇವಿ ಚೌಗಲೆ, ರೂಪಾಲಿ ಚೌಗಲೆ ಸೇರಿ ಅನೇಕ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಮಹಾವೀರ ಚಿಂಚಣೆ. ಬೇಡಕಿಹಾಳ