ಮುದಗಲ್ಲ : ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದ ಆತ್ಮ ನಾವು ಅಂಗೀಕರಿಸಿರುವ’ಸಂವಿಧಾನ’ವಾಗಿದೆ. ಈ ಹಿನ್ನೆಲೆಯಲ್ಲೇ ನವೆಂಬರ್ 26ರಂದು ಸಂವಿಧಾನ ದಿನ ಎಂದು ಆಚರಿಸಲಾಗುತ್ತದೆ ಅದರಂತೆ ಮುದಗಲ್ಲ ಪುರಸಭೆ ವತಿಯಿಂದ ಆಚರಣೆ ಮಾಡಲಾಯಿತು
ಸಂವಿಧಾನ ಪೀಠಿಕೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಕ್ಕೆ ಪುರಸಭೆ ಅಧ್ಯಕ್ಷ ರಾದ ಮಹಾದೇವಮ್ಮ ಗುತ್ತಿಗೆದಾರ ಮೇಣದ ಬತ್ತಿ ಹಚ್ಚುವ ಮೂಲಕ ಗೌರವ ಸಲ್ಲಿಸಿದರು
ಸಂವಿಧಾನ ರಕ್ಷಣೆಗೆ ಎಲ್ಲರೂ ಒಗ್ಗೂಡಬೇಕು ಸಂವಿಧಾನದ ತತ್ವಗಳು ಮತ್ತು ಪ್ರತೀ ಚಿಂತನೆಯನ್ನು ರಕ್ಷಿಸಲು ಜನರೆಲ್ಲರೂ ಒಗ್ಗೂಡಬೇಕು ದುರಗಪ್ಪ ಕಟ್ಟಿಮನಿ ಪುರಸಭೆ ಸದಸ್ಯರು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ರಾದ ಮಹಾದೇವಮ್ಮ ಗುತ್ತಿಗೆದಾರ, ಸದಸ್ಯ ರಾದ ದುರಗಪ್ಪ ಕಟ್ಟಿಮನಿ, ಗುಂಡಪ್ಪ ಗಂಗಾವತಿ, ಹಾಗೂ ದಲಿತ ಮುಖಂಡರಾದ ಶರಣಪ್ಪ ಕಟ್ಟಿಮನಿ ,ಬಸವರಾಜ ಬಂಕದಮನಿ, ಬಸವರಾಜ , ಕೃಷ್ಣ ಚಲುವಾದಿ,ರವಿ ಕಟ್ಟಿಮನಿ, ಲಖಾನ್ , ಮುಖಂಡರಾದ ತಮ್ಮಣ್ಣ ಗುತ್ತಿಗೆದಾರ, ನಾಗರಾಜ್ ತಳವಾರ,
ಹಾಗೂ ಪುರಸಭೆ ಕಂದಾಯ ವಿಭಾಗದ ಜೆಸ್ಸ್ ಪಾಲ್ ಸಿಂಗ್ ,ದೇವರಾಜ , ನೈಮಲ್ಯ ವಿಭಾಗದ ಆರೀಪಾ ಹುನ್ನಿಸಾ ಬೇಗಂ , ಜಾಕೀಯಾ ರೈಮತ್ ಹುನ್ನಿಸಾ ಬೇಗಂ, ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು..
ವರದಿ: ಮಂಜುನಾಥ ಕುಂಬಾರ