ಅಥಣಿ: ತಾಲೂಕಿನ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ, ದಿನಾಂಕ 26.11.2024 ರಂದು ಸಂವಿಧಾನದ ದಿನಾಚರಣೆಯನ್ನು ಆಚರಿಸಲಾಯಿತು ಪೀಠಿಕೆಯನ್ನು ಸಾಮೂಹಿಕವಾಗಿ ಓದುವುದರ ಮೂಲಕ ಆಚರಿಸಲಾಯಿತು.
ನಂತರ ಆಡಳಿತ ವೈದ್ಯಾಧಿಕಾರಿಗಳು ಶಿಂಗೆ ಸರ್ ಅವರು ಮಾತನಾಡಿ ಸಂವಿಧಾನದ ಬಗ್ಗೆ ಜಾಗೃತಿ , ಮೂಲ ಆಶಯ ಮತ್ತು ಸಂವಿಧಾನದ ಮೌಲ್ಯಗಳ ಬಗ್ಗೆ ಪ್ರಸ್ತುತ ಪಡಿಸಿದರು.
ಈ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ. ಶ್ರೀಮಂತ ಸಿಂಗೆ, ಭಾರತ ವೈಭವ ಪತ್ರಿಕೆಯ ಪತ್ರಕರ್ತರಾದ ರಾಜು ವಾಘಮಾರೆ,ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದರು.
ವರದಿ: ರಾಜು ವಾಘಮಾರೆ.