Ad imageAd image

ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಮಹಿಳಾ ಸಿಬ್ಬಂದಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ

Bharath Vaibhav
ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಮಹಿಳಾ ಸಿಬ್ಬಂದಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ
WhatsApp Group Join Now
Telegram Group Join Now

ಬೆಂಗಳೂರು : ಹೆಚ್ಚಿನ ಮಹಿಳಾ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಕಛೇರಿಗಳಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ವಿಶ್ರಾಂತಿ ಕೊಠಡಿ ವ್ಯವಸ್ಥೆ ಒದಗಿಸುವ ಬಗ್ಗೆ ಮನವಿ ಮಾಡಲಾಗಿದೆ.
ವಿಷಯಕ್ಕೆ ಸಂಬಂಧಿಸಿದಂತೆ, ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಕೆಲವು ಸರ್ಕಾರಿ ಕಛೇರಿಗಳಿಗೆ ಭೇಟಿ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿರುವುದನ್ನು ಗಮನಿಸಲಾಗಿದ್ದು, ಮಹಿಳಾ ಸಿಬ್ಬಂದಿಗಳಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ ಇಲ್ಲದಿರುವುದು ಕಂಡುಬಂದಿರುತ್ತದೆ ಮತ್ತು ಈ ಸಂಬಂಧ ಹಲವು ಮಹಿಳಾ ನೌಕರರ ಸಂಘಕ್ಕೆ ಮನವಿಗಳನ್ನು ಸಲ್ಲಿಸಿರುತ್ತಾರೆ.

ಸಚಿವಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ನೌಕರರಿಗಾಗಿ ವಿಕಾಸಸೌಧದಲ್ಲಿ ಪ್ರತ್ಯೇಕ ವಿಶ್ರಾಂತಿ ಕೊಠಡಿ ಇದ್ದು, ಬೆಂಗಳೂರಿನ ಇತರೆ ಇಲಾಖೆಗಳ ಆಡಳಿತ ಕಛೇರಿಗಳಲ್ಲಿ ಈ ಸೌಲಭ್ಯ ಇರುವುದಿಲ್ಲ. ಮಹಿಳಾ ಸಿಬ್ಬಂದಿಗಳು ಅವರ ದೈನಂದಿನ ಜೀವನದಲ್ಲಿ ಈ ಕೆಳಕಂಡ ಕಾರಣಗಳಿಗಾಗಿ ಹಲವು ದೈಹಿಕ ಮತ್ತು ಮಾನಸಿಕ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ.
1. ಮಾಸಿಕ ಋತುಚಕ್ರದ ಸಮಯ.
2. ಗರ್ಭಧರಿಸಿದ ಸಂದರ್ಭ,
3. ಗರ್ಭಪಾತವಾದ ಸಂದರ್ಭ.
4 ಹಸುಗೂಸುಗಳಿಗೆ ಹಾಲುಣಿಸುವ ತಾಯಂದಿರು.
5. ಸಮವಸ್ತ್ರವನ್ನು ಬದಲಾಯಿಸಿಕೊಳ್ಳುವ ಸಂದರ್ಭ.
6. ಇತರೆ ವೈದ್ಯಕೀಯ ಸಮಸ್ಯೆಗಳ ಸಮಯದಲ್ಲಿ ಮಹಿಳಾ ನೌಕರರು ಯಾವುದೇ ತೊಂದರೆ ಅಥವಾ ಸಮಸ್ಯೆ ಎದುರಾದಲ್ಲಿ ಯಾರಿಗೂ ಹೇಳಿಕೊಳ್ಳಲಾಗದೆ ಬಹಳಷ್ಟು ನೋವನ್ನು ಅನುಭವಿಸುವ ಸಂದರ್ಭಗಳನ್ನು ಕಂಡಿರುತ್ತೇವೆ.

ಕಛೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿಗಳು
ಮೇಲ್ಕಂಡ ಸಂದರ್ಭಗಳಲ್ಲಿ ಸ್ವಲ್ಪ ಸಮಯ ವಿಶ್ರಾಂತಿಯನ್ನು ಪಡೆಯಲು, ಮಕ್ಕಳಿಗೆ ಹಾಲುಣಿಸಲು, ವಸ್ತ್ರ ಬದಲಾಯಿಸಲು ಉಪಯುಕ್ತವಾಗುವಂತೆ;
> ತುರ್ತು ವೈದ್ಯಕೀಯ ಚಿಕಿತ್ಸೆ ನೀಡಲು ಅಥವಾ ಲಘು ವಿಶ್ರಾಂತಿ
ತೆಗೆದುಕೊಳ್ಳಲು ಒಂದು ವಿಶ್ರಾಂತಿ ಕೊಠಡಿ, ಕೊಠಡಿಯಲ್ಲಿ ಒಂದು/ ಎರಡು ಹಾಸಿಗೆ ಮತ್ತು ಮಂಚದ ವ್ಯವಸ್ಥೆ
> ಶುದ್ಧ ಕುಡಿಯುವ ನೀರು, ಪ್ರಥಮ ಚಿಕಿತ್ಸೆ ಪಟ್ಟಿಗೆ
> ಕುಳಿತುಕೊಳ್ಳಲು 4-5 ಚೇರುಗಳ ವ್ಯವಸ್ಥೆ
> ವಿಶ್ರಾಂತಿ ಕೊಠಡಿಯಲ್ಲಿ ವಸ್ತ್ರ ಬದಲಾವಣೆಗೆ ಅವಶ್ಯವಿರುವ ಪಾರ್ಟಿಷನ್ ವ್ಯವಸ್ಥೆ, ಇತ್ಯಾದಿ.

ಮೇಲಿನ ಅಂಶಗಳ ಹಿನ್ನೆಲೆಯಲ್ಲಿ: ಬೆಂಗಳೂರು ನಗರದ ಎಲ್ಲಾ ಇಲಾಖೆಗಳ ಕೇಂದ್ರ ಕಛೇರಿಗಳು, ರಾಜ್ಯದ ಎಲ್ಲಾ ಸಾರ್ವಜನಿಕ ಆಸ್ಪತ್ರೆಗಳು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿರುವ ಕಛೇರಿಗಳಲ್ಲಿ ಮೇಲ್ಕಂಡ ಸೌಲಭ್ಯಗಳನ್ನು ಕಲ್ಪಿಸಿ ಅವಶ್ಯ ಸುತ್ತೋಲೆ/ಆದೇಶ ಹೊರಡಿಸುವಂತೆ ಸಂಬಂಧಪಟ್ಟವರಿಗೆ ನಿರ್ದೇಶನ ನೀಡಲು ತಮ್ಮಲ್ಲಿ ಕೋರಿದೆ.

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!