Ad imageAd image

ಬಾಗಲಗುಂಟೆಯಲ್ಲಿ ಎಬಿಬಿ ಮಂಜಣ್ಣ ನೇತೃತ್ವದಲ್ಲಿ ಮಕರ ಸಂಕ್ರಾಂತಿಯ ಸುಗ್ಗಿ ಸಂಭ್ರಮಾಚರಣೆ”

Bharath Vaibhav
ಬಾಗಲಗುಂಟೆಯಲ್ಲಿ ಎಬಿಬಿ ಮಂಜಣ್ಣ ನೇತೃತ್ವದಲ್ಲಿ ಮಕರ ಸಂಕ್ರಾಂತಿಯ ಸುಗ್ಗಿ ಸಂಭ್ರಮಾಚರಣೆ”
WhatsApp Group Join Now
Telegram Group Join Now

ಬೆಂಗಳೂರು: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಾಗಲಗುಂಟೆಯ ಮಂಜುನಾಥ ನಗರದ ಸಮಾಜ ಸೇವಕ ಡಾ.ಎಸ್ ಮಂಜುನಾಥ್ (ಎಬಿಬಿ ಮಂಜಣ್ಣ) ರವರ ನೇತೃತ್ವದಲ್ಲಿ ಮಕರ ಸಂಕ್ರಾಂತಿಯ ಸುಗ್ಗಿ ಸಂಭ್ರಮವನ್ನು ತಳಿರು ತೋರಣಗಳಿಂದ ಸಿಂಗರಿಸಿ ವೇದಿಕೆ ರಚಿಸಿ ವೇದಿಕೆಯ ಮುಂಭಾಗದಲ್ಲಿ ಗೋ ಪೂಜೆ ದವಸ ಧಾನ್ಯಗಳಿಗೆ ಪೂಜೆ ಮಾಡುವ ಮೂಲಕ ಹಳ್ಳಿಯ ಸೊಗಡು ಸುಗ್ಗಿ ಸಂಭ್ರಮ ನೋಡಲು ಮಂಜುನಾಥನಗರದ ಜನರು ಅಧಿಕ ಸಂಖ್ಯೆಯಲ್ಲಿ ನೆರೆದಿದ್ದರು.

 

ವಿಶೇಷವಾಗಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಲೆಮನ್ ಇನ್ ದಿ ಸ್ಪೂನ್, 2 ತೆಂಗಿನಕಾಯಿ ಹೊಡೆಯುವ ಪ್ರದರ್ಶನ, ಮಡಿಕೆ ಹೊಡೆಯುವ, ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ದವಸ ಧಾನ್ಯಗಳಾದ ಕಡ್ಲೆ ಕಾಯಿ, ಕಬ್ಬು, ಗೆಣಸು, ಅಕ್ಕಿ, ರಾಗಿ, ಅವರೆಕಾಯಿ ಸೇರಿದಂತೆ ಹಲವು ವಸ್ತುಗಳನ್ನು ಡಾ. ಮಂಜುನಾಥ್ ಅವರು ಗ್ರಾಮದ ಜನತೆಗೆ ಹಾಗೂ ಸಾರ್ವಜನಿಕರಿಗೆ ನೀಡಿ ಹಬ್ಬದ ಶುಭ ಕೋರಿದರು.

ಇದೇ ವೇಳೆ ಎಬಿಬಿ ಮಂಜಣ್ಣ ರವರ ಅಭಿಮಾನಿಗಳು ಸೇರಿ ನೂತನವಾಗಿ “ಡಾ. ಎಸ್ ಮಂಜುನಾಥ್ (ಎಬಿಬಿ ಮಂಜಣ್ಣ) ಅಭಿಮಾನಿಗಳ ವೇದಿಕೆ” ನಾಮಫಲಕವನ್ನು ಹಿರಿಯ ಮುಖಂಡರಾದ ನಿವೃತ್ತ ಪೊಲೀಸ್ ಬಾಲರತ್ನಯ್ಯ, ನಿಂಗಪ್ಪ , ಸತೀಶ್ ಉದ್ಘಾಟಿಸಿದರು ಡಾ. ಎಸ್ ಮಂಜುನಾಥ್(ಎಬಿಬಿ ಮಂಜಣ್ಣ) ಅಭಿಮಾನಿಗಳ ವೇದಿಕೆಯ ನೂತನ ಅಧ್ಯಕ್ಷ ಮುನಿರಾಜು (ಅಜಯ್) ಅವರ ನೇತೃತ್ವದಲ್ಲಿ ವೇದಿಕೆ ರಚಿಸಲಾಯಿತು.
‌‌
ನಿರಾಶ್ರಿತ ವೇದಿಕೆಯ ಅಧ್ಯಕ್ಷ ಸಿದ್ದರಾಮೇ ಗೌಡ ಅಭಿಲಾಷೆಯಂತೆ ‘ಬಂಗಾರದ ಮನುಷ್ಯ’ ಎಂಬ ಬಿರುದು ನೀಡಿ ಸನ್ಮಾನಿಸಲಾಯಿತು. ಎಬಿಬಿ ಮಂಜಣ್ಣ ಮಾತನಾಡಿ ಜನರ ಸೇವೆಯಲ್ಲಿ ಜನಾರ್ಧನನನ್ನು ಕಾಣುವ ಬಯಕೆ ನನ್ನದು. ನನ್ನ ಸೇವೆ ನಿರಂತರವಾಗಿರುತ್ತದೆ’, ಎಂದು ಡಾ. ಮಂಜುನಾಥ್ ಎಬಿಬಿ ಮಂಜಣ್ಣ ‌ ಸಾರ್ವಜನಿಕರನ್ನು ಉದ್ದೇಶಿಸಿ ಭರವಸೆ ನೀಡಿ ಮಾತನಾಡಿದರು.

ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ನಿಂಗಪ್ಪ, ಸತ್ಯನಾರಾಯಣ್, ಹನುಮಂತಯ್ಯ, ಹನುಮಂತರಾಯಪ್ಪ, ಶಶಿಧರ್, ಬಸವರಾಜ್, ಪಿ.ಸಿ ಮೂರ್ತಿ, ಮೂಡ್ಲಪ್ಪಣ್ಣ ಸಿದ್ದರಾಮೇಗೌಡ, ರೂಪಶ್ರೀ ಕೇಶವ್ ಸೇರಿದಂತೆ ಹಲವಾರು ಮುಖಂಡರು, ಮಹಿಳೆಯರು ಮಂಜಣ್ಣ ಅವರ ಅಪಾರ ಅಭಿಮಾನಿಗಳು ಗ್ರಾಮಸ್ಥರು ಇದ್ದರು.

ವರದಿ: ಅಯ್ಯಣ್ಣ ಮಾಸ್ಟರ್ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!