Ad imageAd image

ನಕ್ಷೆಲೇಟ್ ಹೋರಾಟಗಾರ ವಿಕ್ರಂ ಗೌಡ ಎನ್ಕೌಂಟರ್ ನ್ಯಾಯಯುತ್ತವೆ ?

Bharath Vaibhav
ನಕ್ಷೆಲೇಟ್ ಹೋರಾಟಗಾರ ವಿಕ್ರಂ ಗೌಡ ಎನ್ಕೌಂಟರ್ ನ್ಯಾಯಯುತ್ತವೆ ?
WhatsApp Group Join Now
Telegram Group Join Now
ಅಂಕಣ ಬರಹ
ಸಾಯಬಣ್ಣ ಮಾದರ (ಸಲಾದಹಳ್ಳಿ )

ಪೊಲೀಸ್ ಸ್ಟೇಷನ್ ನಲ್ಲಿ ಮುಗ್ಧ ಯುವಕನನ್ನು ಬಟ್ಟೆ ಬಿಚ್ಚಿಸಿ ಕುಳಿಸಿದ್ದಾರೆ. ಅವನನ್ನು ಪೊಲೀಸರು ಅಮಾನುಷವಾಗಿ ತಳಿಸಿದ್ದು ಅವನ ಮೈ ಮೇಲಿನ ಬಾಸುಂಡಿಗಳೇ ಹೇಳುತ್ತವೆ. ಅಂದು ಆ ಯುವಕನನ್ನು ಪೊಲೀಸರು ಎತ್ತ ಹಾಕಿಕೊಂಡು ಬಂದು ತಳಿಸಿರುತ್ತಾರೆ ಏಕೆಂದರೆ ಆ ಯುವಕನ ಕುಟುಂಬಕ್ಕೆ ಇದ್ದ 14 ಗುಂಟೆ ಜಾಗವನ್ನು ಇವರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಅರಣ್ಯ ಇಲಾಖೆ ಅದನ್ನು ತೆರವುಗೊಳಿಸುತ್ತಿದ್ದಾಗ ತಮ್ಮ ಜೀವನಕ್ಕೆ ಆಸರೆಯಾದ ಆ 14 ಗುಂಟೆ ಜಾಗವನ್ನು ತೆರವು ಗೊಳಿಸುವದನ್ನು ಈ ಯುವಕನು ಪ್ರತಿಭಟಿಸಿದ್ದೆ ಪೊಲೀಸರ ಕಣ್ಣಲ್ಲಿ ತಪ್ಪಾಗಿರುತ್ತದೆ ಆದಕಾರಣ ಈ ಯುವಕನು ಪೊಲೀಸರಿಂದ ಹಲ್ಲೆಗೊಳಗಾಗಿರುತ್ತಾನೆ ಆ ಯುವಕನೇ ನಕ್ಸಲೇಟ್ ನಾಯಕ ಎಂದು ಗುರುತಿಸಿರುವ ವಿಕ್ರಂ ಗೌಡ.

ಆದಿವಾಸಿ ದಲಿತರ ಒಕ್ಕಲೆಬ್ಬಿಸುವುದನ್ನು ಮತ್ತು ರಾಷ್ಟ್ರೀಯ ಉದ್ಯಾನವನ ಯೋಜನೆಯ ವಿರುದ್ಧ ಹೋರಾಟಕ್ಕೆ ಇಳಿದವನು. ಅರಣ್ಯ ಇಲಾಖೆ ಮತ್ತು ಪೊಲೀಸರ ದೌರ್ಜನ್ಯಕ್ಕೆ ಒಳಗಾದ ಸ್ಥಳೀಯ ನಿವಾಸಿಗಳ ಪರವಾಗಿ ಹೋರಾಡಲು ಇಳಿದವನು. ಆಗ ಕರ್ನಾಟಕ ವಿಮೋಚನಾ ರಂಗ ಸಂಘಟನೆಗೆ ಸೇರಿದನು ಆ ಸಂಘಟನೆಯ ಉದ್ದೇಶ ಜಮೀನು ಹಕ್ಕು ಪತ್ರಕ್ಕಾಗಿ,ಮತ್ತು ಜಮೀನ್ದಾರ್ ದಬ್ಬಾಳಕ್ಕೆ ಒಳಗಾದ ಹಲವು ಜನರ ಧ್ವನಿಯಾಗಿತ್ತು . ಕಾಫಿ ತೋಟಗಳ ಮಾಲೀಕರಿಂದ ಆದಿವಾಸಿಗಳ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಮತ್ತು ದೌರ್ಜನ್ಯದ ವಿರುದ್ಧ ಈ ಕರ್ನಾಟಕ ವಿಮೋಚನಾ ರಂಗದಲ್ಲಿ ಈ ಯುವಕ ಸಕ್ರಿಯವಾಗಿ ಕಾರ್ಯಕರ್ತನಾಗಿ ಪಾಲ್ಗೊಂಡನು.

ಇದಕ್ಕಾಗಿ ಅವನ ಕುಟುಂಬವನ್ನು ಅರಣ್ಯ ಇಲಾಖೆಯವರು ಮತ್ತು ಪೊಲೀಸರು ಕಾಡಿದ್ದು ಅಷ್ಟೇಷ್ಟಲ್ಲ. 2003ರಲ್ಲಿ ಹೆಬ್ರಿ ಬಳಿ ಪಾರ್ವತಿ ಮತ್ತು ಹಾಜಿಮಾ ಎಂಬ ಆದಿವಾಸಿ ಹೋರಾಟಗಾರ್ತಿಯರನ್ನು ಹತ್ಯೆ ಮಾಡಲಾಯಿತು. ಇದಾದ ನಂತರ ಪೊಲೀಸರು ವಿಕ್ರಂ ಗೌಡ ಮತ್ತು ಅವನ ಗೆಳೆಯರ ಬದುಕನ್ನು ನರಕ ಮಾಡಿಬಿಟ್ಟರು. ಹೊತ್ತಿಲ್ಲದ ಹೊತ್ತಿನಲ್ಲಿ ಪೊಲೀಸ್ ಠಾಣೆಗೆ ಎಳೆದುಕೊಂಡು ಹೋಗಿ ಟಾರ್ಚರ್ ನೀಡುತ್ತಿದ್ದರು ವಿಚಾರಣೆಯ ನೆಪದಲ್ಲಿ ತಳಿತ ಅವಮಾನ, ದಿನ ನಿತ್ಯವಾಗಿತ್ತು ನೆಮ್ಮದಿ ಬದುಕನ್ನು ಅರಿಸಿ ದಲಿತ ಆದಿವಾಸಿಯ ಹುಡುಗ ಕಾಡಲ್ಲಿ ತಲೆಮರಿಸಿಕೊಂಡನು.

ನಕ್ಸಲೇಟ್ ಹೋರಾಟಗಾರ ವಿಕ್ರಂ ಗೌಡ ಓದಿದ್ದು ಕೇವಲ ನಾಲ್ಕನೆಯ ತರಗತಿ ಅವನ ಹುಟ್ಟೂರು ಹೆಬ್ರಿ ತಾಲೂಕಿನ ಸೋಮಪುರ್ ಹತ್ತಿರದ ಕೂಡ್ಲಿ ಎಂಬ ಪುಟ್ಟ ಗ್ರಾಮದವನು. ಇವನು ಚಿಕ್ಕವನಿದ್ದಾಗಲೇ ಇವನ ತಂದೆಯು ಇವನನ್ನು ಮುಂಬೈಯಲ್ಲಿರುವ ಹೋಟೆಲ್ನಲ್ಲಿ ಕೆಲಸಕ್ಕೆ ಇಟ್ಟಿದ್ದನು 14 ವರ್ಷದ ಚಿಕ್ಕ ಬಾಲಕ ಮುಂಬೈ ಮಹಾನಗರದ ಹೋಟೆಲ್ಗಳಲ್ಲಿ ಸಪ್ಲೈರಾಗಿ ಸುಮಾರು 8 ವರ್ಷಗಳವರೆಗೂ ಕೆಲಸ ಮಾಡಿದನು. ಒಂದು ದಿನ ಮುಂಬೈಯಿಂದ ಹುಟ್ಟೂರು ಕೂಡ್ಲಿಗಿ ತನ್ನ ತಂದೆ ತಾಯಿ ನೋಡಿಕೊಂಡು ಹೋಗಲು ಬಂದವನು ಬರುವಷ್ಟರಲ್ಲಿ ಇವನ ಕುಟುಂಬವು ಬೀದಿಗೆ ಬಿದ್ದಿತ್ತು. ಇದನ್ನು ನೋಡಲಾರದೆ ಇವನು ಹೋರಾಟಕ್ಕಿಳಿದವನು. ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಯೋಜನೆಯಿಂದ ಹಲವಾರು ಆದಿವಾಸಿ ಜನರನ್ನು ಒಕ್ಕಲೆಬಿಸಲಾಯಿತು. ಅಲ್ಲಿಯ ಸ್ಥಳೀಯರಿಗೆ ನಿರಂತರ ಕಿರುಕುಳ ಮೂಲಭೂತ ಸೌಕರ್ಯಗಳು ಇಲ್ಲದ ಅವರ ಬಾಳು ನರಕವೇ ಆಗಿತ್ತು.

ಕಾಡುಪಾಲದ ಯುವಕ ವಿಕ್ರಂ ಗೌಡ ಮತ್ತು ಅವನ ಗೆಳೆಯರು ಜನರ ಧ್ವನಿ ಯಾದರೂ ಹೋರಾಟದ ದಿಕ್ಕನ್ನು ಬದಲಿಸಿ ಕಾಡುಪಾಲ ಆದ ಇವರನ್ನು ಕಾಡಿನಲ್ಲಿರುವ ಸಾಂಕೇತ್ ರಾಜಾನೆಂಬ ಅತ್ಯುನ್ನತ ಪದವೀಧರನ ಸಂಪರ್ಕ ದೊರೆಯಿತು ಆ ಸಾಂಕೇತ್ ರಾಜನು ಪತ್ರಿಕೋದ್ಯಮದಲ್ಲಿ ಸ್ನಾತಕೋತರ ಪದವಿಯನ್ನು ಪ್ರತಿಷ್ಠಿತ ಜಿಎನ್ ಯು ಮಹಾವಿದ್ಯಾಲಯದಲ್ಲಿ ಮುಗಿಸಿದನು. ಅವನು ಜಮೀನ್ದಾರ್ ಪದ್ಧತಿ, ಭೂ ಮಾಲೀಕರ ದಬ್ಬಾಳಿಕೆ ವಿರುದ್ಧ ಹೋರಾಟಕ್ಕೆ ಧುಮುಕಿದವನು. ಅವನಿಂದ ಹೋರಾಟದ ಮಜಲುಗಳನ್ನು ಕಲಿತ ವಿಕ್ರಂ ಗೌಡನು ಆ ಹೋರಾಟದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿದ್ದನು. ಆದರೆ 2005ರಲ್ಲಿ ಸಂಕೇತ್ ರಾಜನನ್ನು ಎನ್ಕೌಂಟರ್ ನಲ್ಲಿ ಪೊಲೀಸರು ಹತ್ಯೆ ಮಾಡಿದರು.

ಇದರಿಂದ ನಾಯಕತ್ವವನ್ನು ಬಿ ಜಿ ಕೃಷ್ಣಮೂರ್ತಿ ವಹಿಸಿಕೊಂಡರು ಅದರಲ್ಲಿ ವಿಕ್ರಂ ಗೌಡನು ದಲಿತರ ಹಕ್ಕುಗಳಿಗಾಗಿ ಆ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತಾನೆ ಇದರಿಂದಾಗಿ ಇವನ ಮೇಲೆ ಸುಮಾರು 61 ಪ್ರಕರಣಗಳು ದಾಖಲಾಗುತ್ತವೆ. ಈ ಪ್ರಕರಣಗಳು ದರೋಡೆ, ಕಳ್ಳ ಸಾಗಣಿಕೆ, ಹತ್ಯೆ. ಈ ಎಲ್ಲಾ ಪ್ರಕರಣಗಳು ಆದಿವಾಸಿಗಳು ಮಾಡುತ್ತಾರೆ ಎಂಬುವುದು ಈ ಪ್ರಕರಣದ ಮೇಲ್ನೋಟಕ್ಕೆ ಪೊಲೀಸರು ದಾಖಲಿಸಿದ ಸುಳ್ಳು ಪ್ರಕರಣಗಳು ಎಂಬುದು ಗೋಚರವಾಗುತ್ತವೆ

ಸುಂದರ ಬದುಕಿನ ಕನಸು ಕಂಡ ಈ ಯುವಕನಿಗೆ ಈ ವ್ಯವಸ್ಥೆಯು ಅವನನ್ನು ಬಿಡುವುದೇ ಇಲ್ಲ ಇದರಿಂದಾಗಿ ಕಾಡಂಚಿನ ಯುವತಿಯಾದ ಸಾವಿತ್ರಿ ಯನ್ನು ವಿಕ್ರಂ ಗೌಡನು ಪ್ರೀತಿಸುತ್ತಾನೆ. ಅವರ ಪ್ರೀತಿಗೆ ಒಪ್ಪಿದ ಅವನ ಸಂಗಾತಿಗಳು ಸಾವಿತ್ರಿ ಮತ್ತು ವಿಕ್ರಂ ಗೌಡನನ್ನು ಕಾಡಿನಲ್ಲಿ ಮದುವೆಯನ್ನು ಮಾಡುತ್ತಾರೆ ಆದರೆ ಅವರ ಸ್ವಚ್ಛಂದ ಬದುಕುವ ಕನಸು ನನಸಾಗುವುದಿಲ್ಲ. ಪೊಲೀಸರ ಕಿರುಕುಳ ಮತ್ತು ಅವರ ಆಮಿಷಕ್ಕೆ ಒಳಗಾದ ಸಾವಿತ್ರಿ ಕುಟುಂಬವು ಅವಳನ್ನು ಒಂದು ದಿನ ಮನೆಗೆ ಕರೆಸಿಕೊಳ್ಳುತ್ತದೆ ಅಲ್ಲೇ ಇದ್ದ ಪೊಲೀಸರು ಸಾವಿತ್ರರನ್ನು ಬಂಧಿಸುತ್ತಾರೆ. ವಿಕ್ರಂ ಗೌಡನು ಕಾಡಿನಲ್ಲಿ ಏಕಾಂಗಿಯಾಗಿ ಹೋಗುತ್ತಾನೆ ಅಷ್ಟರಲ್ಲಿಯೂ ಕೃಷ್ಣಮೂರ್ತಿಯನ್ನು ಬಂಧಿಸಿರುತ್ತಾರೆ.

ನೇಲಂಬರು ಕಾರ್ಯಾಚರಣೆಯಲ್ಲಿ ತಪ್ಪಿಸಿಕೊಂಡ ವಿಕ್ರಂ ಗೌಡನು ಕೇರಳದ ಕಾಡಿನಲ್ಲಿ ಮರೆಯಾಗುತ್ತಾನೆ. ಅಲ್ಲಿಂದ ಯಾವ ನಕ್ಸಲೇಟ್ ರು ಕರ್ನಾಟಕದ ಪಶ್ಚಿಮ ಘಟ್ಟದಲ್ಲಿ ಕಾಣಿಸಿಕೊಳ್ಳುವುದಿಲ್ಲ.

ಅಂದು 2024ರ ಸೋಮವಾರ ಕಬ್ಬಿನಾಳಕ್ಕೆ ವಿಕ್ರಂ ಗೌಡ, ಸಂತೋಷ್,ಲತಾ, ನಿಶಾ, ಬರುತ್ತಿದ್ದಾರೆ ಎಂಬ ಮಾಹಿತಿಯು ಪೊಲೀಸರಿಗೆ ರವಾನೆಯಾಗಿರುತ್ತದೆ ಅವರು ಇತ್ತಿತ್ತಲಾಗಿ ನಾಡಿಗೆ ಬರುವುದು ಸಾಮಾನ್ಯವಾಗಿರುತ್ತದೆ ಏಕೆಂದರೆ ಯಾರಿಗೆಯಾಗಲಿ ತೊಂದರೆ ಕೊಟ್ಟಿರುವುದಿಲ್ಲ ಸರ್ಕಾರಕ್ಕಾಗಲಿ ಜಮೀನ್ದಾರಾಗಲಿ, ಯಾವುದೇ ರಾಜಕಾರಣಿಗಾಗಲಿ ಬೆದರಿಕೆ ಹಾಕಿರುವುದಿಲ್ಲ ಆದರೆ ತಮ್ಮ ಸಿದ್ಧಾಂತಕ್ಕಾಗಿ ಮಾತ್ರ ಇವರು ಬದ್ಧರಾಗಿರುತ್ತಾರೆ.

ಅವರು ಬರುವ ಮನೆಯನ್ನು ಮೂರು ದಿನಗಳ ಮುಂಚೆಯೇ ನಕ್ಸಲ್ ನಿಗ್ರ ಪಡೆಯು ಖಾಲಿ ಮಾಡಿಸಿ ಅವರು ಬರುವಿಕೆಗಾಗಿ ಕಾದು ಕುಳಿತಿರುತ್ತದೆ. ಅದರಂತೆ ವಿಕ್ರಂ ಗೌಡನು ತನ್ನ ಸಂಗಾತಿಗಳನ್ನು ಹೊರಗೆ ನಿಲ್ಲಿಸಿ ಸಹಜವಾಗಿ ಅಂದು ಸಂಜೆ ಆರು ಗಂಟೆಗೆ ಆ ಮನೆಯ ಒಳಗೆ ಬರುತ್ತಾನೆ ಏಕಾಏಕಿ ಎದುರಾದ ಪೊಲೀಸರಿಂದ ತಪ್ಪಿಸಿಕೊಳ್ಳಲು ವಿಕ್ರಂ ಗೌಡನು ಹೊರಗೆ ಓಡುತ್ತಿದ್ದಾಗ ಪೊಲೀಸರು ಪೈರಿಂಗಿನಿಂದ ಅವನು ನೆಲಕ್ಕೆ ಉರುಳುತ್ತಾನೆ. ದಲಿತರ ಆದಿವಾಸಿಗಳ ಹೋರಾಟದ ಕಿಡಿ ಕೇವಲ ಅವನ ವಯಸ್ಸು 43 ರಲ್ಲಿ ನಂದಿಹೋಗುತ್ತದೆ.

ಈ ವಿಕ್ರಂ ಗೌಡನು ಗೌಡ್ರು ಎಂಬ ಪರಿಶಿಷ್ಟ ಪಂಗಡಕ್ಕೆ ಸೇರಿದ ಮಳೆ ಕುಡಿ ಸಮುದಾಯಕ್ಕೆ ಸೇರಿದವನು. ದಲಿತರ ಆದಿವಾಸಿಗಳ ಹಕ್ಕುಗಳಿಗಾಗಿ ಜೀವನ ಪರ್ಯಂತರ ಸರ್ಕಾರದ ಬಂದೂಕಿಗೆ ಎದೆ ಒಡ್ಡಿದವನು. ಕಾಡಿನೊಳಗಿದ್ದ ಬಡವರ ಬದುಕು ನರಕದಲ್ಲಿದ್ದಾಗ ಹಳ್ಳಿಯ ಭೂಮಾಲೀಕರು ಎಸ್ಟೇಟ್ ಮಾಲೀಕರು ಮೇಲ್ಜಾತಿ ಜಮೀನ್ದಾರರು ಹಿಂಸೆಯನ್ನು ವಿರೋಧಿಸಿ ನೇರವಾಗಿ ಕದನಕ್ಕಿಳಿದವನು. ನೂರಾರು ಸಾವಿರಾರು ಎಕ್ಕರೆ ಎಸ್ಟೇಟ್ ಗಳಲ್ಲಿ ದುಡಿಯುವ ಬಡ ದಲಿತ ಕಾರ್ಮಿಕರ ಹಕ್ಕುಗಳಿಗಾಗಿ ಸೋಗಲಾಡಿ ಸಮಾಜವಾದಿಗಳು ಎನಿಸಿಕೊಂಡವರು ಹೋರಾಡದಿದ್ದಾಗ ಇವನು ಹೋರಾಟಕ್ಕಿಳಿದವನು. ತಾನು ಶಿಕ್ಷಣ ಪಡೆಯದಿದ್ದರೂ ಆದಿವಾಸಿಯ ಮಕ್ಕಳ ಶಿಕ್ಷಣಕ್ಕಾಗಿ ಅವರು ವಂಚಿತರಾಗಬಾರದೆಂದು ಅಂಗನವಾಡಿ, ಶಾಲೆ, ಹೋರಾಡಿ ಒದಗಿಸಿ ಕೊಟ್ಟವನು.

ಇತ್ತಿತ್ತಲಾಗಿ ತಮ್ಮ ಲಾಭಕ್ಕೋಸ್ಕರ, ಶೋಕಿಗಾಗಿ ನಡೆಯುತ್ತಿರುವ ಹೋರಾಟಗಳು ನಾವು ನೋಡಬಹುದು. ಆದರೆ ವಿಕ್ರಂ ಗೌಡನಂತವರ ಚಳವಳಿಗಳು ವ್ಯಕ್ತಿಯ ಲಾಭಕ್ಕಾಗಿ ಮತ್ತು ಶೋಕಿಗಾಗಿರುವುದಿಲ್ಲ. ಹಾಗೇನು ಆಗಿದ್ದರೆ ಅವನು ಡಾಲರ್ಸ್ ಕಾಲೋನಿಯಲ್ಲಿ ಐಷಾರಾಮಿ ಮನೆ ಕಟ್ಟಿಸಿ ಇರಬಹುದಾಗಿತ್ತು ಆದರೆ ಅವನ ಹೋರಾಟ ” ಕನಿಷ್ಠ ಘನತೆಯ ಬದುಕಿಗಾಗಿ ” ನಡೆಸಿದ ಹೋರಾಟವಾಗಿತ್ತು ಅವನ ಹೋರಾಟವು ಗಣಿಗಾರಿಕೆ ವಿರುದ್ಧ ಕಾಡಿನೊಳಗೆ ದೊಡ್ಡ ದೊಡ್ಡ ರೆಸ್ಟೋರೆಂಟ್ ಮಾಡಲು ಹೊರಟವರ ವಿರುದ್ಧವಾಗಿತ್ತು ಉಳುಮೆ ಮಾಡುವ ಭೂಮಿ ಹಕ್ಕಿಗಾಗಿ ಅವನು ಹೋರಾಡಿದನು. ಬಡವರನು ಶೋಷಣೆ ಮಾಡುತ್ತಿರುವಾರ ವ್ಯವಸ್ಥೆಯ ವಿರುದ್ಧ ನಿಂತನು. ಕಾಫಿ ತೋಟದ ಕಾರ್ಮಿಕರ ಕನಿಷ್ಠ ವೇತನಕ್ಕಾಗಿ ಮತ್ತು ಆ ಮಹಿಳೆಯರ ಶೋಷಣೆ ವಿರುದ್ಧ ಹೋರಾಡಿದವನು. ರಸ್ತೆ, ನೀರು, ವಿದ್ಯುತ ಶಿಕ್ಷಣಕ್ಕಾಗಿ ಆಗ್ರಿಸಿದನು. ಎಲ್ಲಾ ಕಡೆ ಜಮೀನ್ದಾರ್ ಪದ್ಧತಿ ಜೀವಂತವಿದ್ದು ಸಾವಿರಾರು ಎಕರೆ ಒಡೆಯರಿದ್ದಾರೆ. ಅವರೇನು ಶ್ರಮಪಟ್ಟು ದುಡಿದು ಗಳಿಸಿದ್ದು ಅದು ಅಲ್ಲ ಅದು ಅಕ್ರಮವಾಗಿ ಗಳಿಸಿದ್ದಾಗಿತ್ತು ಆದ್ದರಿಂದ ಅದರ ಸಮಾನ ಹಂಚಿಕೆಗಾಗಿ ಹೋರಾಡಿದನು.

ಈ ನ್ಯಾಯತವಾದಂತ ಬೇಡಿಕೆಗಳಿಗಾಗಿ ಹೋರಾಟ ಮಾಡುವರನ್ನು ಕೊಲೆ ಮಾಡುವುದು ಪರಿಹಾರವೇ 2015 ಫೆಬ್ರವರಿ 03 ರಂದು ನಡೆದ ವಿಧಾನಸಭೆ ಕಲಾಪದಲ್ಲಿ ವಿಧಾನಸಭೆಯ ಸಭಾಧ್ಯಕ್ಷರಾಗಿದ್ದ ಕಾಗೋಡ ತಿಮ್ಮಪ್ಪನವರು ಸರ್ಕಾರಗಳಿಗೆ ಸರಳವಾದ ಪರಿಹಾರವನ್ನು ಸೂಚಿಸುತ್ತಾರೆ’ ನೀವು ಕಾಡಂಚಿನ ನಿವಾಸಿಗಳಿಗೆ ಹಕ್ಕು ಪತ್ರ, ನೀರು, ವಿದ್ಯುತ್, ರಸ್ತೆ ಒದಗಿಸಿ ಅರಣ್ಯಾಧಿಕಾರಿಗಳು, ಪೊಲೀಸರು ರಾಜ್ಯರಂತೆ ನಡೆಯುವುದು ನಿಲ್ಲಿಸಿ ನಕ್ಸಲ್ ಸಮಸ್ಯೆ ತಾನೇ ಪರಿಹಾರವಾಗುತ್ತದೆ ‘ ಎಂದರು

ಕೊನೆಯದಾಗಿ : ವಿಚಾರವಾದಿಗಳು ಕೊಲ್ಲುವ ಧರ್ಮಗಳು ವ್ಯವಸ್ಥೆಯಲ್ಲಿ ಕಾನೂನು ಪ್ರಕಾರ ಹೋರಾಟ ಮಾಡದೆ ಹಿಂಸಾ ಮಾರ್ಗ ಹಿಡಿಯುವದು ದೇಶಕ್ಕೆ ಮಾರಕವೇ ಆದರೆ ಯಾವುದಕ್ಕೂ ಕೊಲೆ ಸಮರ್ಥನೆ ಅಲ್ಲ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!