ಇಲಕಲ್ : ವಿಜಯಪುರ ಹಾಗೂ ಬಾಗಲಕೋಟ ಜಿಲ್ಲೆಗಳ ಕಾಯಕ ಬಂಧುಗಳ ವಿಷಯಾಧಾರಿತ ತರಬೇತಿದಾರ ತರಬೇತಿ ಕಾರ್ಯಕ್ರಮದ
ವಿಜಯಪುರ ಹಾಗೂ ಬಾಗಲಕೋಟ ಜಿಲ್ಲೆಗಳ ಕಾಯಕ ಬಂಧುಗಳ ವಿಷಯಾಧಾರಿತ ತರಬೇತಿದಾರ ತರಬೇತಿ ಕಾರ್ಯಕ್ರಮದ ಅಡಿಯಲ್ಲಿ ದಿನಾಂಕ: 26-11-2024ರ ಮಂಗಳವಾರದಂದು ಕಾಯಕ ಬಂದುಗಳ ತರಬೇತಿದಾರರ ತರಬೇರಿ ಕಾರ್ಯಕ್ರಮದ ಅಡಿಯಲ್ಲಿ ಇಳಕಲ್ ತಾಲೂಕಿನ ಬಲಕುಂದಿ ಗ್ರಾಮ ಪಂಚಾಯತಿಗೆ 30 ಜನ ಶೀಭೀರಾರ್ತಿಗಳು ಕ್ಷೇತ್ರ ಭೆಟಿಗಾಗಿ ಬಲಕುಂದಿ ಗ್ರಾಮ ಪಂಚಾಯತಿಗೆ ಭೆಟಿನೀಡಿದರು.
ಬೆಳಿಗ್ಗೆ: 10:30ಕ್ಕೆ ಗ್ರಾಮ ಪಂಚಾಯತ ಅಭಿವೃದ್ಧ ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಪಂಚಾಯತಿಯ ಚುಣಾಯಿತ ಪ್ರತಿನಿಧಿಗಳು ಶಿಭಿರಾರ್ತಿಗಳನ್ನು ಸ್ವಾಗತಿಸಿದರು.
ಸಂವಿಧಾನದಿನದ ಅಂಗವಾಗಿ ಗ್ರಾಮ ಪಂಚಾಯತಿಯ ಮುಂದೆ ಸಾಮೂಹಿಕವಾಗಿ ಸಂವಿಧಾನದ ಪೂರ್ವ ಪೀಠಿಕೆಯ ಪ್ರತಿಜ್ಞಾ ವಿಧಿಯನ್ನು ಸ್ವಕರಿಸಿದರು. ನಂತರ ಶಿಭಿರಾತ್ರಿಗಳು ಪಂಚಾಯತಿ ಚುನಾಯಿತ ಪ್ರತಿನಿಧಿಗಳೊಂದಿಗೆ ಉದ್ಯೋಗ ಖಾತ್ರಿ ಯೋಜನೆ ಕುರಿತು ಚರ್ಚಿಸಿದರು. ಈ ಸಂದರ್ಭದಲ್ಲಿ ರೀಚ್ ಸಂಸ್ಥೆ ಬಾಗಲಕೋಟನ ಗ್ರಾಮ ಸ್ವರಾಜ ಅಭಿಯಾನದ ಮಾಸ್ಟರ ಟ್ರೈನರಾದ ಶ್ರೀ ಕುಮಾರ ಜಿ. ಎನ್ ಇವರು ಕರ್ನಾಟಕ ಬಾಲ್ಯ ವಿವಾಹ ವಿರೋಧಿ ವೆದಿಕೆಯ ಭಿತ್ತಿ ಪತ್ರ ಹಾಗೂ ಮಕ್ಕಳ ಹಕ್ಕುಗಳ ಕುರಿತು ಕೈಪಿಡಿ ಬಿಡುಗಡೆ ಮಾಡಿದರು.
ನಂತರದಲ್ಲಿ ಬಲಕುಂದಿ ಗ್ರಾಮ ಪಂಚಾಯತ ವ್ಯಾಪ್ತಿಯ ಹೊಸೂರ ಗ್ರಾಮದ ಮಾರುತೇಶ್ವರ ದೇವಸ್ಥಾನದ ಆವರಣದಲ್ಲಿ ಬಲಕುಂದಿ ಮೇಟಿ (ಕಾಯಕ ಬಂಧು) ಹಾಗೂ ಶಿಭಿರಾರ್ತಿಗಳ ಸಂವಾಧ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಸಂಧರ್ಭದಲ್ಲಿ ಶ್ರೀ ಕಾಶಿನಾಥ ಗುಡಿಮನಿ ಸ್ನೇಹ ಸಂಸ್ಥೆಯ ಗ್ರಾಮ ಸ್ವರಾಜ ಅಭಿಯಾನದ ಮಾಸ್ಟರ ಟ್ರೈನರ ಉದ್ಯೋಗ ಖಾತ್ರಿಗೀತೆ ಹಾಡಿದರು. ಶಿಭಿರಾರ್ತಿಗಳು ಬೀದಿ ನಾಟಕದ ಮೂಲಕ ಉದ್ಯೋಗ ಖಾತ್ರಿ ಯೋಜನೆಯ 2025-26ನೇ ಸಾಲಿನ ವಾರ್ಷಿಕ ಕ್ರೀಯಾ ಯೋಜನೆ ಜಾಗೃತಿ ನಾಟಕ ಪ್ರದರ್ಶಿಸಿದರು. ಮೇಟಗಳಾದ ಶ್ರೀಮತಿ ದುರಗಮ್ಮ ಮ್ಯಾಗೇರಿ , ಮಂಜುನಾಥ ಚವ್ಹಾಣ , ಯಮನೂರ ಪವಾರ, ಸಕ್ರೀಯವಾಗಿ ಸಂವಾಧದಲ್ಲಿ ಭಾಗವಹಿಸಿ ಶಿಭಿರಾರ್ತಿಗಳಿಗೆ ಮೇಟಗಳ ಜವಾಬ್ಧಾರಿಗಳನ್ನು ವಿವರಿಸಿದರು. ನಂತರ ಶಿಭಿರಾರ್ತಿಗಳು ಗ್ರಾಮ ಪಂಚಾಯತ ವ್ಯಾಪ್ತಿಯ ಬೇರೆ-ಬೇರೆ ಕಾಮಗಾರಿಗಳ ಕ್ಷೇತ್ರ ಭೇಟಿಮಾಡಿ, ಕಾಮಗಾರಿ ಕಡತಗಳನ್ನು ವಿಕ್ಷೀಸಿ ಗ್ರಾಮ ಪಂಚಾಯತಿಯಿಂದ ಮಾಹಿತಿಯನ್ನು ಪಡೆದರು.
ಈ ಸಂದರ್ಭದಲ್ಲಿ ತಾಲೂಕ ತಾಂತ್ರಿಕ ಸಹಾಯಕರಾದ ಶ್ರೀ ವಿಶ್ವನಾಥ ಹೆಬ್ಬಳ್ಳಿ, ತಾಲೂಕ ಐ.ಇ.ಸಿ. ಸಂಯೋಜಕರಾದ ಶ್ರೀಮತಿ ಯಲ್ಲಮ್ಮ ಬಂಡ್ರಿ , ಶ್ರೀ ಬಸವರಾಜ ಬೇವುರ ಸ್ವರಾಜ್ ಮಾಸ್ಟರ ಟ್ರೈನರ ,ಶ್ರೀ ಕುಮಾರಿ ಸವಿತಾ ಗಾಣಿಗೇರ ಗ್ರಾಮ ಸ್ವರಾಜ್ ಮಾಸ್ಟರ ಟ್ರೈನರ ಪಾರ್ಡ ಸಂಸ್ಥೆ ಮುದೋಳ , ಗ್ರಾಮ ಪಂಚಾಯತ ಸದಸ್ಯರಾದ ಶ್ರೀ ಶ್ರೀನಿವಾಸ ರಾಠೋಡ, ಗ್ರಾಮದ ಹಿರಿಯರಾದ ಶ್ರೀ ಶಿವಪ್ಪ ಮೇಣಸಗೇರಿ, ಕಾರ್ಯದರ್ಶಿಗಳಾದ ಶ್ರೀ ಸಂಗಪ್ಪ ಗುರುಸಂಗಪ್ಪ ಕೂಡ್ಲೂರ , ಬಿ.ಎಫ್.ಟಿ ಯಾದ ಶ್ರೀ ಲಾಲಸಾಬ ಮುಲ್ಲಾ , ಕಾಯಕ ಮಿತ್ರರಾದ ಶ್ರೀಮತಿ ಸಂಗೀತ ರಾಠೋಡ , ಟಿ.ಆರ್.ಎಮ್ ಗಳಾದ ಶ್ರೀ ಕಿಶೋರಕುಮಾರ ಚವ್ಹಾಣ, ಶ್ರೀ ಅರ್ಜುನ ರಾಠೋಡ , ಶ್ರೀಮತಿ ಭೀಮವ್ವ ಚಂದ್ರು ಚವ್ಹಾಣ, ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ವರದಿ ದಾವಲ್ ಶೇಡಂ