ಬೆಂಗಳೂರು: ಯತ್ನಾಳ್ ಅವರದ್ದು ಸಿದ್ದರಾಮಯ್ಯ ಬಿ ಟೀಂ ಎಂದು ಮಾಜಿ ಶಾಸಕ ರೇಣುಕಾಚಾರ್ಯ ಲೇವಡಿ ಮಾಡಿದರು. ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವರು, ವಿಜಯೇಂದ್ರ ಅವರ ಡಿಸೆಂಬರ್ನಲ್ಲಿ ಅಂತ್ಯಗೊಳ್ಳುತ್ತದೆ. ಪರ್ಯಾಯ ನಾಯಕ ಬೇಕು ಎಂದು ಎಂದು ದಾರಿ ಬೀದಿಯಲ್ಲಿ ಮಾತನಾಡುತ್ತಿದ್ದಾರೆ.
ವಿಜಯೇಂದ್ರ ವ್ಯಕ್ತಿಯಲ್ಲ ಬಿಜೆಪಿಯ ರಾಜ್ಯಧ್ಯಕ್ಷರು. ಅವರನ್ನು ಟೀಕೆ ಮಾಡುವುದು ನರೇಂದ್ರ ಮೋದಿ ಅವರನ್ನು ಟೀಕೆ ಮಾಡಿದಂತೆ ಆಗುತ್ತದೆ ಎಂದು ಕಿಡಿಕಾರಿದರು.
ಯಡಿಯೂರಪ್ಪ ಅವರು ರಾಜಕೀಯಕ್ಕೆ ಬಂದಾಗ ಇವರು ಕಣ್ಣೇ ಬಿಟ್ಟಿರಲಿಲ್ಲ. ಈಗ ಯತ್ನಾಳ್ ಟೀಂ ಬಿಎಸ್ವೈ, ವಿಜಯೇಂದ್ರ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ರಾಜ್ಯದ ಅಧ್ಯಕ್ಷರನ್ನು ಇಳಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಪಕ್ಷದ ವಿರುದ್ಧ ಪ್ರವಾಸ ಮಾಡುತ್ತಿರುವವರ ವಿರುದ್ಧ ತಕ್ಷಣ ರಾಷ್ಟ್ರೀಯ ನಾಯಕರು ಕ್ರಮ ಕೈಗೊಂಡು, ಕಡಿವಾಣ ಹಾಕಬೇಕು. ವಿಜಯೇಂದ್ರ ಸಾರಥ್ಯದಲ್ಲೇ ಬಿಜೆಪಿ ಬಲವರ್ಧನೆಗೊಳ್ಳಬೇಕು.
29ರ ಬೆಳಗ್ಗೆ ಗಣಪತಿ ದರ್ಶನ ಪಡೆದು, ಮೈಸೂರಿಗೆ ತೆರಳಿ ಚಾಮುಂಡೇಶ್ವರಿ ದರ್ಶನ ಪಡೆದು ವಿಜಯೇಂದ್ರ ಸಾರಥ್ಯದಲ್ಲೇ ಬಿಜೆಪಿ ನಡೆಯಬೇಕು ಎಂದು ಬೇಡಿಕೊಳ್ಳುತ್ತೇವೆ ಎಂದರು.