Ad imageAd image

ಸತ್ಯ ಯುಗಕ್ಕೆ ಯೋಗ್ಯ ಸಾಧಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

Bharath Vaibhav
ಸತ್ಯ ಯುಗಕ್ಕೆ ಯೋಗ್ಯ ಸಾಧಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ
WhatsApp Group Join Now
Telegram Group Join Now

ಸೇಡಂ: ಪಟ್ಟಣದ ಕಟ್ಟಿ ಬಸವೇಶ್ವರ ದೇವಾಲಯದಲ್ಲಿ ಸತ್ಯ ಯುಗ ಫೌಂಡೇಷನ್ ಬೈ ಯುರೇನ್ ನಮಃ ಟ್ರಸ್ಟ್ ಮೂಲಕ ಆಯೋಜಿಸಿದ ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ ನೀರಾವರಿ ಇಲಾಖೆಯ ಸಹಾಯಕ ಮುಖ್ಯ ಅಭಿಯಂತರಾದ ಸಂತೋಷಕುಮಾರ ತೋಟ್ನಳ್ಳಿಯವರು ಉದ್ಘಾಟಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ನೀಲಕಂಠ ಅವರು ತಮ್ಮ ವೃತ್ತಿಯಲ್ಲಿ ಸತ್ಯ ಪ್ರಾಮಾಣಿಕತೆ ಮೆರೆದಿರುವುದು ನಿಜಕ್ಕೂ ಶ್ಲಾಘನೀಯ. ಅಂತಹವರನ್ನು ಪ್ರೋತ್ಸಾಹಿಸುತ್ತಿರುವ ಟ್ರಸ್ಟ್ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿದೆ. ಈ ಕಾರ್ಯಕ್ಕೆ ಸಹಕಾರ ನೀಡುತ್ತಿರುವ ಎಲ್ಲರೂ ಅಭಿನಂದನಾರ್ಹರು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಟ್ರಸ್ಟ್ ಕಾರ್ಯದರ್ಶಿ ಸೂರ್ಯನಾರಾಯಣ ಚಿಮ್ಮನಚೋಡಕರ್ ಶ್ರೀಮಂತರ ಪ್ರಾಮಾಣಿಕ ನಡೆ ದೊಡ್ಡ ವಿಷಯ. ಅದಕ್ಕಿಂತಲೂ ದೊಡ್ಡ ವಿಷಯ. ಬಡತನದಲ್ಲಿರುವವರ ಸತ್ಯ ಪ್ರಾಮಾಣಿಕತೆಯ ನಡೆ, ಎಂದು ಹೇಳಿದರು.

ಒಬ್ಬ ಬಡವ ಸತ್ಯ, ಪ್ರಾಮಾಣಿಕತೆಯ ದಾರಿಯಲ್ಲಿ ನಡೆಯುತ್ತಾನೆ ಎಂದರೆ ಸಮಾಜದ ಎಲ್ಲಾ ವರ್ಗದವರು ಸತ್ಯ ಪ್ರಾಮಾಣಿಕತೆಯ ದಾರಿಯಲ್ಲಿ ನಡೆಯಲು ಸಾಧ್ಯ. ಪ್ರತಿಯೊಬ್ಬರು ಸತ್ಯದ ಮಾರ್ಗದಲ್ಲಿ ನಡೆದಲ್ಲಿ ಸತ್ಯ ಯುಗ ನಿರ್ಮಾಣವಾಗುವದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.

ಪ್ರಶಸ್ತಿ ಪುರಸ್ಕೃತ ನೀಲಕಂಠ ಮಾತನಾಡಿ ಸತ್ಯ ಯುಗ ಫೌಂಡೇಷನ್ ಕಾರ್ಯ ಚಟುವಟಿಕೆಗಳು ಸತ್ಯ, ಪ್ರಾಮಾಣಿಕತೆಯ ದಾರಿಯಲ್ಲಿ ನಡೆಯಲು ನನಗೆ ಪ್ರೇರಣೆ ನೀಡಿದೆ ಎಂದು ಹೇಳಿದರು.

ಟ್ರಸ್ಟ್ ಸಂಸ್ಥಾಪಕರಾದ ಗಣಪತಿರಾವ ಚಿಮ್ಮನಚೋಡಕರ ಅಧ್ಯಕ್ಷತೆ ವಹಿಸಿದ್ದರು.

ಟ್ರಸ್ಟ್ ಅಧ್ಯಕ್ಷೆ ಶ್ರೀಮತಿ ಶಿವಕಾಂತಮ್ಮ ಜಿ. ಚಿಮ್ಮನಚೋಡಕರ ಅವರು ಆಟೋದಲ್ಲಿ ಪ್ರಯಾಣಿಕ ಮರೆತುಹೋದ ಬಂಗಾರದ ಉಂಗುರವನ್ನು ಪೋಲಿಸರಿಗೆ ನೀಡಿ ಪ್ರಾಮಾಣಿಕತೆ ಮೆರೆದ ಶ್ರೀ ನೀಲಕಂಠ ಕುಕ್ಕುಂದಾ ಅವರಿಗೆ “ಸತ್ಯ ಯುಗಕ್ಕೆ ಯೋಗ್ಯ ಸಾಧಕ” ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಕಾವೇರಿ ಕಾರ್ಯಕ್ರಮವನ್ನು ನಿರೂಪಿಸಿದರು, ಸವಿತಾ ಸ್ವಾಗತಿಸಿದರು ವರ್ಷಾ ವಂದಿಸಿದರು.

ಈ ಕಾರ್ಯಕ್ರಮದಲ್ಲಿ ಅಂಬಾಜಿ ಕಿರ್ಮಾಣಕರ್, ಆಕಾಶ ಬಾಗೋಡಿ, ಭಕ್ತಮ್ಮಾ, ರವಿ ಕಣೇಕಲ, ರಾಜು ಇವಣಿ, ವಿಶಾಲ, ಲಕ್ಷ್ಮಿಕಾಂತ, ಪಲ್ಲವಿ, ಸಂಜೀವಿನಿ ಹಾಗೂ ಬಾಲ ಸಂಸ್ಕಾರ ಕೇಂದ್ರದ ಮಕ್ಕಳು ಭಾಗವಹಿಸಿದ್ದರು ಎಂದು ಸೂರ್ಯನಾರಾಯಣ ಜಿ ಚಿಮ್ಮನಚೋಡಕರ್ ಕಾರ್ಯದರ್ಶಿಗಳು
ಸತ್ಯ ಯುಗ ಫೌಂಡೇಷನ್ ಬೈ ಯುರೇನ್ ನಮಃ ಟ್ರಸ್ಟ್ ಸೇಡಂ ಇವರು ಪತ್ರಿಕಾ ಪ್ರಕಟಣೆಗೆ ತಿಳಿಸಿದರು.

ವರದಿ : ವೆಂಕಟಪ್ಪ ಕೆ ಸುಗ್ಗಾಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!