ದಾವಣಗೆರೆ : ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಡಿ.10ರಂದು ಬೆಳಗಾವಿಯ ಸುವರ್ಣ ಸೌಧ ಮುತ್ತಿಗೆ ಹಾಕುವುದು ಖಚಿತ ಎಂದು ಕೂಡಲ ಸಂಗಮದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2A ಮೀಸಲಾತಿ ಪಡೆಯುವ ಸಲುವಾಗಿ ನಿರಂತರ ಹೋರಾಟ ಮಾಡಿದ್ದೇವೆ.ಇಷ್ಟ ಲಿಂಗ ಪೂಜೆ ಮೂಲಕ ಎಲ್ಲಾ ಸರ್ಕಾರದಲ್ಲಿ ಹೋರಾಟ ಮಾಡುತ್ತಲೇ ಬಂದಿದ್ದೇವೆ. ರಾಜ್ಯ ಸರ್ಕಾರ ಯಾವುದಕ್ಕೂ ಸ್ಪಂದಿಸಿಲ್ಲ ಎಂದು ಗುಡುಗಿದರು.
ಸಿಎಂ ಸಿದ್ದರಾಮಯ್ಯ ಅವರು ಉಪಚುನಾವಣೆಯ ನೆಪ ಮಾಡಿಕೊಂಡ ಮೀಸಲಾತಿ ವಿಚಾರದ ಸಭೆ ಕರೆಯುವುದನ್ನು ಮುಂದೂಡಿದ್ದರು. ಬಳಿಕ ಮತ್ತೆ ಯಾವುದೇ ಪ್ರತಿಕ್ರಿಯೆ ಸರ್ಕಾರದ ಕಡೆಯಿಂದ ಬಂದಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಸುವರ್ಣ ಸೌಧ ಮುತ್ತಿಗೆ ಹೋರಾಟಕ್ಕೆ ಪಕ್ಷತೀತವಾಗಿ ಎಲ್ಲಾರೂ ಬೆಂಬಲ ನೀಡಬೇಕು ಎಂದು ಮನವಿ ಮಾಡಿದ ಸ್ವಾಮೀಜಿ, ಸಿದ್ದರಾಮಯ್ಯ ಅವರಿಗೆ ನಮ್ಮ ಸಮಾಜದ ಬಗ್ಗೆ ಕಳಕಳಿ ಇದಿಯೋ ಇಲ್ಲ ಅನ್ನೋದು ಗೊತ್ತಾಗ್ತಿಲ್ಲ.
ಸರ್ಕಾರ ಬರೋಕೆ ನಮ್ಮ ಸಮುದಾಯವು ಕಾರಣ. ಹಾಗಾಗಿ ನಮ್ಮ ಸಮುದಾಯಕ್ಕೆ ಸಹಕಾರಿಯಾಗಬೇಕು. ಹೋರಾಟಕ್ಕೆ ಬರುವ ಯಾವುದೇ ನಮ್ಮ ವಾಹನಗಳನ್ನ ತಡಿಯುವ ಕೆಲಸ ಮಾಡಬೇಡಿ ಎಂದು ಎಚ್ಚರಿಕೆ ನೀಡಿದರು.