Ad imageAd image

ಪ್ರತಿ ಭಾರತೀಯನು ತಮ್ಮ ಜೀವನದಲ್ಲಿ ಸಂವಿಧಾನಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಡಾ. ಚಿದಾನಂದ್ ಆನೂರ್

Bharath Vaibhav
ಪ್ರತಿ ಭಾರತೀಯನು ತಮ್ಮ ಜೀವನದಲ್ಲಿ ಸಂವಿಧಾನಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಡಾ. ಚಿದಾನಂದ್ ಆನೂರ್
WhatsApp Group Join Now
Telegram Group Join Now

ವಿಜಯಪುರ : ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವಿಜಯಪುರದಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಸದರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಆರ್ ಎಸ್ ಕಲ್ಲೂರ್ ಮಠ ಭಾರತ ಸಂವಿಧಾನವು ವಿಶ್ವದಲ್ಲಿ ಅತಿ ಶ್ರೇಷ್ಠವಾದವಾಗಿದು ಭಾರತ ಸಂವಿಧಾನದ ರಚನಾಕಾರರು ಬಹಳ ದೂರದೃಷ್ಟಿಯನ್ನು ಇಟ್ಟುಕೊಂಡು ರಚಿಸಿದ ಸಂವಿಧಾನವಾಗಿದ್ದು ಇದು ದೇಶದ ಸರ್ವ ಜನಾಂಗದ ಕಲ್ಯಾಣವನ್ನು ಬಯಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ’ ಭಾರತದ ಸಂವಿಧಾನಿಕ ಮೌಲ್ಯಗಳು ‘ ಕುರಿತು ಡಾ. ಚಿದಾನಂದ ಎಸ್ ಆನೂರು ರವರ ವಿಶೇಷ ಉಪನ್ಯಾಸ ನೀಡುತ್ತಾ ಭಾರತ ಸಂವಿಧಾನವು ವಿವಿಧತೆಯಲ್ಲಿ ಏಕತೆಯನ್ನು ಪ್ರತಿಬಿಂಬಿಸುತ್ತವ ಸಂಸ್ಕೃತಿಯ ಹೊಂದಿದೆ. ಎಲ್ಲಾ ನಾಗರಿಕರಿಗೂ ಸಂವಿಧಾನದ ಮೂಲಗಳಾದ, ಸಮಾನತೆ, ಸೋದರತೆ, ಸ್ವಾಸಂತ್ರತೆ, ಧಾರ್ಮಿಕ ಸಮಾನತೆಯನ್ನು, ಮುಂತಾದ ಮೌಲ್ಯಗಳನ್ನು ತಮ್ಮ ವಯಕ್ತಿಕ ಮತ್ತು ಸಾರ್ವಜನಿಕ ಜೀವನ ಅಳವಡಿಸಿಕೊಂಡು ರಾಷ್ಟ್ರೀಯ ಹಿತಾಸಕ್ತಿ ರಕ್ಷಣೆ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸುವುದು ಅಗತ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಡಾ. ರಾಜ್ಯಶೇಖರ ಬಿನಾಕನಹಳ್ಳಿ ಯವರು ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳಿಗೂ ಮತ್ತು ಬೋಧಕ- ಬೋಧಕೆತ್ತರ ಸಿಬ್ಬಂದಿಗಳಿಗೆ ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು. ಸಂವಿಧಾನ ದಿನಾಚರಣೆಯ ನಿಮಿತ್ತ ಕಾಲೇಜಿನಲ್ಲಿ ಹಮ್ಮಿಕೊಂಡ ಪ್ರಬಂಧ ಸ್ಪರ್ಧೆ ಹಾಗೂ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಡಾ. ಪಿ.ಬಿ ಬಿರಾದಾರ ಪ್ರಾಸ್ತಾವಿಕ ನುಡಿಗಳ ನಾಡಿದರು. ಡಾ. ಭಾರತಿ ಹೊಸಟ್ಟಿ,ಪ್ರೊ. ಎಂ ಆರ್ ಜೋಶಿ, ಡಾ. ಆನಂದ್ ಕುಲಕರ್ಣಿ, ಪ್ರೊ. ರಮೇಶ್ ಬಳ್ಳೊಳ್ಳಿ,ಡಾ. ರಾಘವೇಂದ್ರ ಗುರ್ಜಾಲ,ಡಾ. ಎಂ ಆರ್ ಕೆಂಭಾವಿ,ಪ್ರೊ. ಲಕ್ಷ್ಮಿ ಮೊರೆ,ಡಾ. ಆನಂದ್ ಪದ್ಮನಾಭ,ಡಾ. ಆಸಿಫ್ ರೋಜನ್ ದಾರ್,ಡಾ. ಶಕೀರಾ ಬಾನು ಕಿತ್ತೂರ್,ಪ್ರೊ. ಮಂಜುನಾಥ್ ಗಾಣಿಗೇರ್,ಡಾ, ತೌಸೀಫ್,ಡಾ. ರಾಮಣ್ಣ ಕಳ್ಳಿ, ಶಿವಾನಂದ್ ಸಂಗೋಳಿ, ವೀರನಗೌಡ ಪಾಟೀಲ್, ನವೀನ ಗೌಡ ಬಿರಾದಾರ್, ಸುಜಾತ ಬಿರಾದಾರ್ ಹಾಗೂ ಕಾಲೇಜಿನ ಬೋಧಕ – ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು

 

ವರದಿ. ಸಾಯಬಣ್ಣ ಮಾದರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!