ಬೆಂಗಳೂರು : ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುವ ಅಧಿವೇಶನ ಒಂದು ದಿನ ಮುಂಚಿತವಾಗಿ ಮೊಟಕುಗೊಳ್ಳಲಿದೆ. ಡಿ. 19ಕ್ಕೆ ಅಧಿವೇಶನ ಸಮಾಪ್ತಿಯಾಗಲಿದೆ. ಸಚಿವಾಲಯದ ಅಧಿಕೃತ ಮೂಲಗಳಿಂದಲೇ ಈ ವಿಚಾರ ಹೊರಬಿದ್ದಿದೆ
ಸಕ್ಕರೆ ನಾಡು ಮಂಡ್ಯದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಡಿ.20ಕ್ಕೆ ಆರಂಭವಾಗಲಿದ್ದು, ಸಿಎಂ ಸಿದ್ದರಾಮಯ್ಯ , ಡಿಸಿಎಂ ಡಿಕೆಶಿ ಸೇರಿದಂತೆ ಮಂತ್ರಿಗಳು ಸಮ್ಮೇಳನದಲ್ಲಿ ಭಾಗಿಯಾಗಲು ಅನುವು ಮಾಡಿಕೊಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ವಕ್ಫ್ ಮಂಡಳಿ ಅಕ್ರಮ , ಮುಡಾ ನಿವೇಶನ ಹಗರಣ ಹಾಗೂ ಅಬಕಾರಿ ಇಲಾಖೆಯಲ್ಲಿ ವಸೂಲಿ ಸೇರಿದಂತೆ ರಾಜ್ಯ ಸರ್ಕಾರದ ವಿರುದ್ಧವಿರೋ ಸಾಲು ಸಾಲು ಆರೋಪಗಳ ಬಗ್ಗೆ ಸಮರ ಸಾರಲು ವಿಪಕ್ಷಗಳು ಹಾತೊರೆಯುತ್ತಿವೆ.
ಮತ್ತೊಂದೆಡೆ, ಬೈ ಎಲೆಕ್ಷನ್ ಗೆದ್ದ ಸಂತಸದಲ್ಲಿರೋ ಕಾಂಗ್ರೆಸ್ ಪಾಳಯ ಟಕ್ಕರ್ ಕೊಡೋಕೆ ರೆಡಿಯಿದ್ದು, ಈ ಬಾರಿಯ ಅಧಿವೇಶನ ದೊಡ್ಡ ಮಟ್ಟದಲ್ಲಿ ವಾಕ್ಸಮರಕ್ಕೆ ಕಾರಣವಾಗುವ ಸಾಧ್ಯತೆ ಇದೆ.