ಸೇಡಂ: ದಿ.14-1-2025 ರಂದು ವಿಶ್ವಗುರು ಜಗತ್ ಜ್ಯೋತಿ 12ನೇ ಶತಮಾನದಲ್ಲಿ ಸಮಾನತೆ ಸಾರಿದ ವಿಶ್ವಗುರು ಬಸವೇಶ್ವರರನ್ನು ಬೀದರ್ ಜಿಲ್ಲೆ, ಭಾಲ್ಕಿ ತಾಲೂಕಿನ ದಾಡಗಿ ಕ್ರಾಸ್ ನಲ್ಲಿ ಕಿಡಿಗೆಡಿಗಳು ಅಪಮಾನ ಮಾಡಿದ್ದಾರೆ, ತಕ್ಷಣವೇ ಕಿಡಿಗೇಡಿಗಳನ್ನು ಬಂದಿಸಬೇಕು.
ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ.
ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ.
ಕೂಡಲಸಂಗಮದೇವಾ, ನಿಮ್ಮ ಮನೆಯ ಮಗನೆಂದೆನಿಸಯ್ಯಾ. ಇಂಥ ಅನೇಕ ವಚನದ ಮೂಲಕ ಸಮಾಜದಲ್ಲಿ ಬದಲಾವಣೆ ಹಾಗೂ ಸಮಾನತೆ ಸಾರಿದವರು ಅಣ್ಣ ಬಸವಣ್ಣನವರು, ಇಂತಹ ಮಹಾಪುರುಷರಿಗೆ ಅವಮಾನ ಮಾಡಿದ್ದು ನಾಚಿಕೆಗೇಡು ಸಂಗತಿ ಎಂದು ಭಗವಾನ್ ಬೋಚಿನ್ ಜಿಲ್ಲಾ ದಲಿತ ಸೇನೆ ಸಂಘಟನಾ ಕಾರ್ಯದರ್ಶಿ ಅಸಮಾದಾನ ವ್ಯಕ್ತಪಡಿಸಿದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್.




