ಗೋಕಾಕ : ವಾಹನ ಸಂಚಾರ ಸುಗಮವಾಗಲಿಕ್ಕೆ ಗೋಕಾಕ ನಗರದ ವಾಲ್ಮೀಕಿ ವೃತ್ತದಿಂದ ಜತ್ತ ಜಾಂಬೊಟಿ ಹೆದ್ದಾರಿ ರಸ್ತೆಯನ್ನು ಅಂದಾಜು 980.00 ಲಕ್ಷ ರೂಗಳ ವೆಚ್ಚದಲ್ಲಿ ರಸ್ತೆ ಅಗಲಿಕರಣ ಮತ್ತು ಸುದಾರಣೆ ಮಾಡುವ ಕಾಮಗಾರಿಗೆ ಶಾಸಕ ರಮೇಶ ಜಾರಕಿಹೋಳಿ ಭೂಮಿ ಪೂಜೆ ನೇರವೆರಿಸಿದರು.
ನಂತರ ಪಟ್ಟಣದ ತಾಲೂಕಾ ಆಡಳಿತ ಸೌಧ ಕಚೇರಿ ಸಭಾಂಗಣದಲ್ಲಿ ಗೋಕಾಕ ತಾಲೂಕಾ ಭೂ-ಸುರಕ್ಷಾ ಯೋಜನೆಯಡಿಯಲ್ಲಿ, ಕಂದಾಯ ಇಲಾಖೆಯ ಭೂ ದಾಖಲೆಗಳ ಗಣಕೀಕರಣ ಕೊಠಡಿ ಉದ್ಘಾಟಿಸಿ ಮಾತನಾಡಿ ಗುಣಮಟ್ಟದ ಸೇವೆಗಳು ಮತ್ತು ಸಾರ್ವಜನಿಕರಿಗೆ ಸುಲಭವಾಗಿ ಮಾಹಿತಿ ಮತ್ತು ಭೂ ದಾಖಲೆಗಳನ್ನು ಒದಗಿಸುವ ನಿಟ್ಟಿನಲ್ಲಿ ಕಂಪ್ಯೂಟರ ಆಪರೇಟರ್‍ಗಳು ಕೆಲಸ ಮಾಡಬೇಕು.
ಭೂ ದಾಖಲೆಗಲನ್ನು ಸುರಕ್ಷಿತವಾಗಿ ಹಾಗೂ ರಯತರಿಗೆ ಶೀಘ್ರವಾಗಿ ಒದಗಿಸುವ ಉದ್ದೇಶದಿಂದ ಗಣಕೀಕರಣ ಮಾಡಲಾಗುತ್ತಿದೆ
ಶಿಥಿಲಗೊಂಡ ದಾಖಲೆಗಳನ್ನು ಶಾಶ್ವತವಾಗಿ ಡಿಜಿಟಲ್ ರೂಪದಲ್ಲಿ ಉಳಿಸಿಕೊಳ್ಳಲು ನಕಲಿ ದಾಖಲೆಗಳ ಹಾವಳಿ ತಡೆಯಲು, ಕಚೇರಿಗೆ ಸಾರ್ವಜನಿಕರ ಅನಗತ್ಯ ಅಲೆದಾಟ ತಪ್ಪಿಸಲು ಮತ್ತು ಮೂಲ ದಾಖಲೆಗಳು ಸಾರ್ವಜನಿಕರಿಗೆ ಆನ್‍ಲೈನ್ ಮೂಲಕ ದೊರೆಯುವಂತೆ ಮಾಡಲು ಸರ್ಕಾರ ಭೂ ಸುರಕ್ಷಾ ಯೋಜನೆ ಜಾರಿಗೆ ತಂದಿದೆ ಎಂದರು.
ಈ ಸಂದರ್ಭದಲ್ಲಿ ಗೋಕಾಕ
ಡಾ: ಮೊಹನ ಬಸ್ಮೇ, ಸಾಗರ ಕಟ್ಟಿಮನಿ,ಶಿವಪ್ಪ ರಾಮದುರ್ಗ, ಅಮೀತ ಜಕಾತಿ,ಈಶ್ವರ ದಯನ್ಮವರ,ಸೇರಿದಂತೆ ಇನ್ನೂಳಿದ ಸಿಬ್ಬಂದಿಗಳು ಸ್ಥಳಿಯ ಮುಖಂಡರು ಉಪಸ್ಥಿತರಿದ್ದರು.
ವರದಿ : ಮನೋಹರ ಮೇಗೇರಿ




