ಕಲಘಟಗಿ: ತಾಲ್ಲೂಕಿನ ಮಿಶ್ರಿಕೋಟಿ ಗ್ರಾಮದ ಪ್ಯಾಟೆ ಬಸವೇಶ್ವರ ದೇವಸ್ಥಾನದಿಂದ ಹುಬ್ಬಳ್ಳಿ ಮಾರ್ಗದ ಮುಖ್ಯ ರಸ್ತೆ ಹದಗೆಟ್ಟು ವಾಹನ ಸವಾರರಿಗೆ ಹಾಗೂ ನಿವಾಸಿಗಳಿಗೆ ತೊಂದರೆಯಾಗಿದ್ದು ಕಾಂಕ್ರೀಟ್ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲು ಗ್ರಾಮಸ್ಥರು ಒಂದು ದಿನದ ಮುಷ್ಕರ ನಡೆಸಿದರು.
ಗ್ರಾಮಸ್ಥರು ಸ್ವಯಂ ಪ್ರೇರಿತವಾಗಿ ಬುಧವಾರ ಗ್ರಾಮದ ರಸ್ತೆ ತಡೆ ನಡೆಸಿ ಅಧಿಕಾರಿಗಳ ಹಾಗೂ ಜನ ಪ್ರತಿನಿಧಿಗಳ ವಿರುದ್ದ ಘೋಷಣೆ ಮೊಳಗಿಸಿ ಆಕ್ರೋಶ ಹೊರಹಾಕಿದರು.
ರಸ್ತೆಯಲ್ಲಿ ತೆಗ್ಗು ಗುಂಡಿಗಳು ಬಿದ್ದು ಸಂಪೂರ್ಣ ಹಾಳಾಗಿದೆ ದಿನನಿತ್ಯ ಹುಬ್ಬಳ್ಳಿಯಿಂದ ಮಿಶ್ರೀಕೋಟಿ ಗ್ರಾಮದ ಮೂಲಕ ನೂರಾರು ವಾಹನ ಸವಾರರು ಸಂಚಾರ ಮಾಡುತ್ತಾರೆ ಗ್ರಾಮದ ಒಳ ರಸ್ತೆಯಾಗಿದ್ದರಿಂದ ರಸ್ತೆಯ ಅಕ್ಕ ಪಕ್ಕದ ಮನೆಗಳಿಗೆ ಮಣ್ಣಿನ ದೂಳು ಆವರಿಸಿ ನಿವಾಸಿಗಳ ಆರೋಗ್ಯದ ಮೇಲೆ ಪರಿಣಾಮ ಬಿರುತ್ತಿದೆ ಎಂದು ಪ್ರತಿಭಟನಾಕರಾರು ತಿಳಿಸಿದರು.
ಮಳೆಗಾಲದಲ್ಲಿ ಮಳೆ ನೀರು ಮನೆಗಳಿಗೆ ನುಗ್ಗುತ್ತದೆ, ಅಕ್ಕ ಪಕ್ಕ ಮನೆಗಳು ಇರುವದರಿಂದ ಪಾದಚಾರಿಗಳಿಗೆ ಹಾಗೂ ಶಾಲೆ ಮಕ್ಕಳಿಗೆ ತೆರಳಲು ತೊಂದರೆ ಅನುಭವಿಸುತ್ತಾರೆ ರಸ್ತೆ ನಿರ್ಮಿಸಲು ಅನುದಾನ ಮಂಜೂರು ಆಗಿದೆ ಎಂದು ಅಧಿಕಾರಿಗಳು ಭರವಸೆ ನೀಡುತ್ತಾರೆ ರಸ್ತೆ ಅಭಿವೃದ್ಧಿ ಪಡಿಸಲು ಯಾರು ಮುಂದೆ ಬರುತ್ತಿಲ್ಲ ಎಂದು ಮುಖಂಡರಾದ ಮುತ್ತುಗೌಡ ಪಾಟೀಲ ಆಕ್ರೋಶ ಹೊರಹಾಕಿದರು.
ಹದಗೆಟ್ಟ ರಸ್ತೆಯಿಂದ ಅಪಘಾತಗಳು ಸಂಭವಿಸುತ್ತಿವೆ ಇನ್ನಾದರೂ ರಸ್ತೆ ಅಭಿವೃದ್ಧಿಗೆ ಅನುದಾನ ನೀಡಬೇಕು ಎಂದು ಗ್ರಾಮದ ಮುಖಂಡ ಶಿವಾನಂದ ಹುರಕಡ್ಲಿ ಒತ್ತಾಯಿಸಿದರು.
ಗ್ರಾಮದ ಪ್ಯಾಟಿ ಬಸವೇಶ್ವ ದೇವಸ್ಥಾನದ ಹತ್ತಿರದ ಮುಷ್ಕರ ನಡೆಯುತ್ತಿರುವ ಸ್ಥಳಕ್ಕೆ ತಾಲ್ಲೂಕ ಲೋಕೋಪಯೋಗಿ ಇಲಾಖೆ ಇಂಜನಿಯರ ಸಿದ್ದಲಿಂಗಸ್ವಾಮಿ ಚಿಕ್ಕಮಠ ಭೇಟಿ ರಸ್ತೆಗೆ 2 ಕೋಟಿ ಅನುದಾನಕ್ಕೆ ಮೇಲಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು. ರಸ್ತೆ ಅಭಿವೃದ್ಧಿ ಪಡಿಸಲು ನಿರ್ಲಕ್ಷ ಮಾಡಿದಲ್ಲಿ ಬರುವ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದರು.
ಈ ಸಂಧರ್ಭದಲ್ಲಿ ನಾಗರಾಜ ಲಂಗೋಟಿ, ಮುತ್ತುಗೌಡ ಪಾಟೀಲ, ಬಸವಣ್ಣಪ್ಪ ಹೆಬ್ಬಳ್ಳಿ,ಸುರೇಶ ಬೋವಿ, ಮಹೇಶ ತಿಪ್ಪಣ್ಣವರ, ಐ.ಸಿ ಗೋಕುಲ, ವಿಠಲ ಸೂರ್ಯವಂಶಿ, ಹನುಮಂತಗೌಡ ಪಾಟೀಲ, ಮಲ್ಲೇಶ ಅರಳಿಕಟ್ಟಿ, ಮಂಜುನಾಥ ವಾವಳ,ಸಂಗೀತ ಉಗರಗೋಳ, ಮಾದೇವಿ ಮುದ್ದೇನವರ, ರೇಣುಕಾ ಹಾರೋಗೇರಿ,ಮಲ್ಲವ್ವ ಬಸಟ್ಟೆಪ್ಪನವರ, ಹೇಮಾ ತುಪ್ಪಕನವರ, ಮಹಾದೇವಿ ದಾಸಪ್ಪನವರ, ಶಾರವ್ವ ದಾನಪ್ಪನವರು, ಕವಿತಾ ಬೆಂಗೇರಿ, ಕಲಾವತಿ ವಾವಳ, ಗ್ರಾಮಸ್ಥರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.