Ad imageAd image

ಯೋಧ ವಿರುದ್ಧ ರಾಜ್ಯ ಮಹಿಳಾ ಹೋರಾಟಗಾರ್ತಿ ಲವ್, ಸೆಕ್ಸ್ ಮತ್ತು ದೋಖಾ ಆರೋಪ

Bharath Vaibhav
ಯೋಧ ವಿರುದ್ಧ ರಾಜ್ಯ ಮಹಿಳಾ ಹೋರಾಟಗಾರ್ತಿ ಲವ್, ಸೆಕ್ಸ್ ಮತ್ತು ದೋಖಾ ಆರೋಪ
WhatsApp Group Join Now
Telegram Group Join Now

ಬೆಳಗಾವಿ : ಓರ್ವ ಯೋಧ ವಿರುದ್ಧ ರಾಜ್ಯ ಮಹಿಳಾ ಹೋರಾಟಗಾರ್ತಿ ಲವ್, ಸೆಕ್ಸ್ ಮತ್ತು ದೋಖಾ ಆರೋಪ ಮಾಡಿದ್ದಾರೆ. ನಗರದ ಮಚ್ಚೆ ಗ್ರಾಮದ ನಿವಾಸಿ ಹೋರಾಟಗಾರ್ತಿ ಪ್ರಮೋದಾ ಹಜಾರೆ, ಬಿಜಗರ್ಣಿ ಗ್ರಾಮದ ಯೋಧ ಅಕ್ಷಯ್ ನಲವಡೆ ವಿರುದ್ಧ ವಂಚನೆ ಆರೋಪ ಮಾಡಿದ್ದಾರೆ. ಸದ್ಯ ನ್ಯಾಯಕ್ಕಾಗಿ ಯೋಧನ ಮನೆ ಮುಂದೆ ಹೋರಾಟಗಾರ್ತಿ ಧರಣಿ ಮಾಡಿದ್ದಾರೆ.

ಹೌದು ನ್ಯಾಯಕ್ಕಾಗಿ ಯೋಧನ ಮನೆಯ ಮುಂದೆ ಪ್ರಮೋದ ಹಜಾರೆ ಪ್ರತಿಭಟನೆ ಮಾಡುತ್ತಿದ್ದಾರೆ. ಮದುವೆಯಾಗುವುದಾಗಿ ಯೋಧ ಅಕ್ಷಯ್ ನಂಬಿಸಿ ದೈಹಿಕ ಸಂಪರ್ಕ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.

ಬೀಜಗರ್ಣಿ ಗ್ರಾಮದ ಅಕ್ಷಯ್ ನಲವಡೆ ವಿರುದ್ಧ ಇದೀಗ ವಂಚನೆ ಆರೋಪ ಕೇಳಿ ಬಂದಿದೆ. 6 ವರ್ಷದ ಹಿಂದೆ ಫೇಸ್ಬುಕ್ ಮೂಲಕ ಪ್ರಮೋದಾ ಅವರಿಗೆ ಅಕ್ಷಯ್ ಪರಿಚಯವಾಗಿದ್ದಾನೆ. ತನಗಿಂತ 14 ವರ್ಷದ ಹಿರಿಯಳಾದ ಪ್ರಮೋದಾ ಅವರೊಂದಿಗೆ ಅಕ್ಷಯ್ ಪ್ರೀತಿಯ ನಾಟಕ ಮಾಡಿದ್ದಾನೆ.

ಮದುವೆಯಾಗುವುದಾಗಿ ಅಕ್ಷಯ್ ಹೋರಾಟಗಾರ್ತಿಗೆ ನಂಬಿಸಿ ದೈಹಿಕ ಸಂಪರ್ಕ ನಡೆಸಿದ್ದಾನೆ. 6 ವರ್ಷದ ಹಿಂದೆ ತಮ್ಮ ಮನೆಯ ದೇವರ ಕೋಣೆಯಲ್ಲಿ ಮದುವೆಯಾಗಿದ್ದ. ಪ್ರಮೋದ ಹಜಾರೆ ನಂತರ ರಜೆ ಮೇಲೆ ಊರಿಗೆ ಬಂದಾಗ 15 ದಿನ ಉಳಿದು ಹೋಗುತ್ತಿದ್ದ. ಪ್ರಮೋದ ಹಜಾರೆ ಮನೆಯಲ್ಲಿ ಅಕ್ಷಯ್ ಉಳಿಯುತ್ತಿದ್ದ. ಇದೆ ಬೆಳೆ 9 ಯುವತಿಯರ ಜೊತೆಗೆ ಸಂಪರ್ಕದಲ್ಲಿ ಇದ್ದದ್ದು ಬೆಳಗೆಗೆ ಬಂದಿದೆ.

ಅದನ್ನು ಪ್ರಶ್ನಿಸಿದಾಗ ಎಲ್ಲರನ್ನೂ ಬಿಟ್ಟು ನಿನ್ನ ಜೊತೆಗೆ ಇರುವುದಾಗಿ ಅಕ್ಷಯ ನಂಬಿಸಿದ್ದಾನೆ. ಮೊನ್ನೆ ಕೂಡ ರಜೆಯ ಮೇಲೆ ಬಂದಾಗ ಅಕ್ಷಯ್ ಬೇರೆ ಯುವತಿಯ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ.

ಅಕ್ಷಯ ನಿಶ್ಚಿತಾರ್ಥದ ವಿಚಾರ ಗೊತ್ತಾಗಿ ಪ್ರಮೋದ ಆತನ ಮನೆಗೆ ತೆರಳಿದ್ದಾರೆ. ಊರಿನ ಹಿರಿಯರು ಕುಟುಂಬಸ್ಥರು ಸರಿಪಡಿಸುವುದಾಗಿ ಹೇಳಿ ಕಳುಹಿಸಿದ್ದರು. ನಿಶ್ಚಿತಾರ್ಥವಾಗಿರುವ ಯುವತಿ ಮದುವೆಯಾಗಲ್ಲ ಅಂತ ಅಕ್ಷಯ್ ಹೇಳಿದ್ದ.

ಆದರೆ ಇಂದು ಅಕ್ಷಯ್ ಮದುವೆಯಾಗಿದ್ದಾನೆ ಎಂದು ಪ್ರಮೋದ ಅಕ್ಷಯ್ ಮನೆಗೆ ತೆರಳಿದ್ದಾರೆ. ಮನೆಗೆ ಬೇಗ ಹಾಕಿ ಅಕ್ಷಯ್ ನಲವಡೆ ಮತ್ತು ಕುಟುಂಬಸ್ಥರು ತೆರಳಿದ್ದಾರೆ. ಸಾಯುವವರೆಗೂ ಯೋಧನ ಮನೆಯ ಮುಂದೆ ಧರಣಿ ನಡೆಸಲು ನಿರ್ಧರಿಸಿದ್ದಾರೆ.

ಯೋಧ ಅಕ್ಷಯ್ ಮನೆಯ ಎದುರು ಪ್ರಮೋದ ಕಣ್ಣೀರಿಡುತ್ತಾ ಪ್ರತಿಭಟನೆ ಮಾಡುತ್ತಿದ್ದಾರೆ. ನಾನು ಸಾಕಷ್ಟು ಮಹಿಳೆಯರ ಪರ ಹೋರಾಡಿ ನ್ಯಾಯ ಕೊಡಿಸಿದ್ದೇನೆ. ಇಂದು ನನ್ನ ನೆರವಿಗೆ ಬರುವಂತೆ ಪ್ರಮೋದ ಹಜಾರೆಯವರು ಕಣ್ಣೀರಿಟ್ಟು ಮನವಿ ಮಾಡಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!