ಖಾನಾಪುರ : ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಮಲಪ್ರಭಾ ನದಿ ದಂಡೆಯ ಕೊನೆ ಗಡಿ ಗ್ರಾಮ ಪಂಚಾಯಿತಿ ಹಿರೇಹಟ್ಟಿಹೊಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಇಲಾಖೆಯ ಇತ್ತೀಚಿನ ಮಹತ್ವ ಯೋಜನೆಯಾದ ನನ್ನ ಶಾಲೆ , ನನ್ನ ಜವಾಬ್ದಾರಿ ಕಾರ್ಯಕ್ರಮವು ಅದ್ದೂರಿಯಾಗಿ ನೆರವೇರಿತು, ಇನ್ನೂ ಕಾರ್ಯಕ್ರಮದ ನಿಮಿತ್ಯ ನಿವೃತ್ತಿ ಹಂಚಿನಲ್ಲಿರುವ ಈ ಶಾಲೆಯ ಪ್ರದಾನ ಗುರುಗಳಾದ ಎಸ್.ಐ ಐಬತ್ತಿ ಯವರ ಸತ್ಕಾರ ಸಮಾರಂಭ ಹಾಗೂ ವಿವಿಧ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಶಾಲೆಯ ವಾರ್ಷಿಕೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ಜರುಗಿದವು.
ಇನ್ನೂ ಈ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದ ಹಳೇ ವಿದ್ಯಾರ್ಥಿಗಳು ಆದ ಹಾಲಿ ಜಮಖಂಡಿ ತಾಲ್ಲೂಕಿನ ತಹಶೀಲ್ದಾರ್ ಆದ ಸದಾಶಿವ ಸಂಬಾಜಿ ಮಕ್ಕೋಜಿ, ದಾವಣಗೆರೆ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶರು ಆದ ಶ್ರೀ ಮಹಾವೀರ್ ಕರೆಣ್ಣನವರ್, ಹಿರಿಯ ಅಭಿಯಂತರ ಶ್ರೀ ರವೀಂದ್ರ ಗಡಾದ, ಪಿ.ಎಸ್.ಐ ಕೃಷ್ಣವೇಣಿ ಗುರ್ಲಹೋಸೂರ, ಡಾ.ಶ್ಯಾಮಲಾ ಬಿ ದಾಸೋಗ, adlr ಅಶೋಕ್ ಹೊಸಕೇರಿ ಸೇರಿದಂತೆ ಎಲ್ಲಾ ಹಳೇ ವಿದ್ಯಾರ್ಥಿಗಳ ನೇತೃತ್ವದಲ್ಲಿ ಬೆಳಗಾವಿ ಉಪ ವಿಭಾಗದ ಅಧಿಕಾರಿಗಳು ಶ್ರವಣ ನಾಯಕ್, ಗ್ರಾಮೀಣ ಕುಡಿಯುವ ನೀರು ಕಾರ್ಯ ನಿರ್ವಾಹಕ ಅಭಿಯಂತರ ಮಠಪತಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಧರ ಲವಗಿ, ಎಸ್.ಡಿ.ಎಂ.ಸಿ ಅಧ್ಯಕ್ಷ ರಾಮಕೃಷ್ಣ ತಡಕೊಡ , ಅಭಿಯಂತರ ಮಂಜುನಾಥ ಗಡಾದ, ಜಯಕುಮಾರ್ ಹೇಬ್ಲಿ, ಹಾಗೂ ವಿವಿಧ ಇಲಾಖೆಗಳ ಸೇವೆ ಸಲ್ಲಿಸುತ್ತಿರುವ ಈ ಶಾಲೆಯ ಹಳೆಯ ವಿದ್ಯಾರ್ಥಿಗಳು ಸಮ್ಮುಖದಲ್ಲಿ ಅದ್ದೂರಿಯಾಗಿ ಈ ಕಾರ್ಯಕ್ರಮ ನೆರವೇರಿತು.
ಈ ಸಂದರ್ಭದಲ್ಲಿ ಕೆಲವೇ ದಿನಗಳಲ್ಲಿ ನಿವೃತ್ತಿ ಹೊಂದಲಿರುವ ಪ್ರದಾನ ಗುರುಗಳಾದ ಎಸ್.ಐ ಹೈ ಬತ್ತಿಯವರನ್ನು ಸತ್ಕಾರ ಮಾಡಲಾಯಿತು, ಹಳೇ ವಿದ್ಯಾರ್ಥಿಗಳು ಆದ ನ್ಯಾಯಾಧೀಶರು ಆದ ಮಹಾವೀರ ಕರೆನ್ನನವರ್ , ತಹಶೀಲ್ದಾರ್ ಮಕ್ಕೋಜಿ, ಇಂಜಿನಿಯರ್ ರವೀಂದ್ರ ಗಡಾದ, ಪಿ.ಎಸ್.ಐ ಕೃಷ್ಣ ವೇಣಿ ಹಾಗೂ ಪ್ರದಾನ ಗುರುಗಳು ತಮ್ಮ ಅಭಿಪ್ರಾಯ ವನ್ನು ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಅವರ ಸಂವಾದದಲ್ಲಿ ಅಭಿಪ್ರಾಯ ಹಂಚಿಕೊಂಡರು, ಎಲ್ಲರಿಗೂ ಕೃತಜ್ಞತೆಗಳನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಲವಗಿ ತಿಳಿಸಿದರು, ಕಾರ್ಯಕ್ರಮದ ನಿಮಿತ್ಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು, ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಳೇ ವಿದ್ಯಾರ್ಥಿಗಳು ಹಾಗೂ ಅತಿಥಿಗಳನ್ನು, ಗಣ್ಯರನ್ನು ಸನ್ಮಾನ ಮಾಡಲಾಯಿತು, ಇದೇ ಸಂದರ್ಭದಲ್ಲಿ ಪತ್ರಕರ್ತ ಬಸವರಾಜು ಮಾತನಾಡಿ ಹಿರೇ ಹಟ್ಟಿಹೊಳಿ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ಆರಂಭಿಸುವಂತೆ ಪ್ರಸ್ತಾವನೆ ಇಟ್ಟರು, ಹಳೇ ವಿದ್ಯಾರ್ಥಿಗಳಿಂದ ಶಾಲೆಗೆ ವಿದ್ಯಾ ಸರಸ್ವತಿ ವಿಗ್ರಹವನ್ನು ಕಾಣಿಕೆಯಾಗಿ ನೀಡಲಾಯಿತು, ಒಟ್ಟಾರೆ ಅದ್ದೂರಿಯಾಗಿ ನಡೆದ ಈ ಕಾರ್ಯಕ್ರಮವು ಬೆಳಗಾವಿ ಜಿಲ್ಲೆಯಲ್ಲಿ ಮಾದರಿ ಕಾರ್ಯಕ್ರಮವಾಗಿದ್ದು ತುಂಬಾ ವಿಶೇಷವಾಗಿದೆ.
ವರದಿ : ಬಸವರಾಜು




