ಬೆಳಗಾವಿ : ನನಗೆ ಪಕ್ಷ ಮುಖ್ಯ. ಕಾಂಗ್ರೆಸ್ ಉಳಿವಿಗೆ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಸಿಎಂ ಡಿಕೆಶಿ ಹೇಳಿದರು .
ಸೋಮವಾರ ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳ ಜತೆ ಅವರು ಮಾತಾಡಿದರು.ನಾನು ಮೊದಲಿನಿಂದಲೂ ಪಕ್ಷಕ್ಕಾಗಿ ತ್ಯಾಗ ಮಾಡಿಕೊಂಡು ಸರಕಾರ ರಕ್ಷಣೆ ಮಾಡುವುದೊಂದೆ ನನ್ನ ಕೆಲಸ ಎಂದು ಡಿಸಿಎಂ ಡಿ.ಕೆ.ಶಿವಕುಮಾರ ಹೇಳಿದರು.
ಧರಂ ಸಿಂಗ್ ಸರ್ಕಾರದಲ್ಲಿ ತ್ಯಾಗ ಮಾಡಿದ್ದೇನೆ. ಸಿದ್ದರಾಮಯ್ಯ ಅವರ ಹಿಂದಿನ ಸರ್ಕಾರದಲ್ಲೂ ತ್ಯಾಗ ಮಾಡಿಕೊಂಡು ಬಂದಿದ್ದೇನೆ. ನನಗೆ ಪಕ್ಷ ಮುಖ್ಯ, ಪಕ್ಷದಿಂದಲೇ ಬೆಳದವನು. ನಾನು ತ್ಯಾಗ ಮಾಡಿಕೊಂಡೇ ಬರುತ್ತಿದ್ದೇನೆ. ಇದರಿಂದ ಜನಕ್ಕೆ ಒಳ್ಳೆಯದಾಗುತ್ತೆ ಅಷ್ಟು ಸಾಕು ಎಂದರು.
ಕೆಲ ಮಾಧ್ಯಮಗಳಿಗೆ ಸುಳ್ಳು ಹೇಳಿ ಬಿಟ್ಟು ಇಡೀ ಮಾಧ್ಯಮದ ಇಮೇಜ್ ಹಾಳು ಮಾಡುತ್ತಿದ್ದಾರೆ. ನಿನ್ನೆ ನಮ್ಮ ಕಾಂಗ್ರೆಸ್ ಹಿರಿಯರ ಮನೆಗೆ ಭೇಟಿ ಮಾಡಿದ್ದೆ ಜಗಳ ಇತ್ತು ಅದಕ್ಕೆ ಹೋಗಿದ್ದೆ ಎಂದು ಕೆಲ ಮಾಧ್ಯಮದವರು ಸುದ್ದಿ ಮಾಡಿದ್ದಾರೆ. ಫಿರೋಜ್ ಸೇಠ್ ಹಿರಿಯ ನಾಯಕ ಜೊತೆಗೆ ಕೆಲಸ ಮಾಡಿದ್ದೇವೆ.ಸಂಘಟನೆ ದೃಷ್ಟಿಯಿಂದ ಹೋಗಿ ಕುಳಿತುಕೊಂಡು ಬಂದಿದ್ದೆ ಅದನ್ನೇ ಸುಳ್ಳು ಸುದ್ದಿ ಮಾಡಿದರೆ ಹೇಗೆ ಎಂದು ಮಾಧ್ಯಮದವರ ಮೇಲೆಯೂ ಗರಂ ಆದರು.
ಲೋಕಲ್ ಡರ್ಟಿ ಪಾಲಿಟಿಕ್ಸ್ ಮಾಡೋದಾದರೆ ನಾನು ಮಾತನಾಡುವುದಿಲ್ಲ.ನಾನು ಇದಕ್ಕೆ ಉತ್ತರ ಕೊಡಲ್ಲ, ಬರೋದು ಇಲ್ಲ. ನ್ಯಾಷ್ನಲ್ ಇವೆಂಟ್ ಮಾಡುತ್ತಿದ್ದೇನೆ. ನಿಮಗೂ ಬೆಸಿಕ್ ಕಾಮನ್ ಸೆನ್ಸ್ ಇರಬೇಕು. ಯಾರ್ಯಾರೋ ಏನೂ ಹೇಳ್ತಿದ್ದಾರೆ ಸುಳ್ಳಿನ ಕಂತೆ ಎಂದರು. ಯಾರೊಟ್ಟಿಗೂ ನನಗೆ ಭಿನ್ನಾಭಿಪ್ರಾಯ ಇಲ್ಲ ಎಂದು ಡಿಸಿಎಂ ಡಿಕೆಶಿ ಹೇಳಿದರು.




