Ad imageAd image

ಕನಸು ಧ್ಯೇಯ ಗುರಿ ಜಾಗೃತವಾಗಿರಲಿ ಡಾ. ಪ್ರಕಾಶ ತೆವರಿ ಅಭಿಮತ ಸದಲಗಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರು ಸನ್ಮಾನ ಕಾರ್ಯಕ್ರಮ. 

Bharath Vaibhav
ಕನಸು ಧ್ಯೇಯ ಗುರಿ ಜಾಗೃತವಾಗಿರಲಿ ಡಾ. ಪ್ರಕಾಶ ತೆವರಿ ಅಭಿಮತ ಸದಲಗಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರು ಸನ್ಮಾನ ಕಾರ್ಯಕ್ರಮ. 
WhatsApp Group Join Now
Telegram Group Join Now

ನಿಪ್ಪಾಣಿ: ವಿದ್ಯಾರ್ಥಿಗಳಲ್ಲಿ ಉನ್ನತ ಶಿಕ್ಷಣದ ಗುರಿ ಭವಿಷ್ಯದ ಕುರಿತು ಮಾರ್ಗದರ್ಶನ ವಿಷಯವನ್ನು ಸರಳ ಹಾಗೂ ಸುಲಭವಾಗಿ ತಿಳಿಯಪಡಿಸಬೇಕೆಂದು ಕೇ ಎಲ್ ಈ ವಿದ್ಯಾಲಯದ ಕುಲಪತಿ ಡಾ. ಪ್ರಕಾಶ ತಿವಾರಿ ತಿಳಿಸಿದರು.

ಅವರು ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದ ಸದಲಗಾ ಶಿಕ್ಷಣ ಸಂಸ್ಥೆಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಗುರು ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಕಳೆದ ದಶಕದಿಂದ ಗುರು ಸನ್ಮಾನ ಕಾರ್ಯಕ್ರಮ ಆಯೋಜನೆ ಮಾಡುತ್ತಿರುವ ನಿವೃತ್ತ ಅಧಿಕಾರಿ ಪ್ರಸಾದ್ ಕುಲಕರ್ಣಿ ಅವರಿಗೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಪಾಟೀಲರ ಹಸ್ತದಿಂದ ಶ್ರೀ ಫಲ ನೀಡಿ ಸನ್ಮಾನಿಸಲಾಯಿತು.

ಇದು ಅಲ್ಲದೆ ಸನ್ 2024 25 ನೇ ಸಾಲಿನ ಗುರುದೇವ ಸನ್ಮಾನ ಪುರಸ್ಕಾರ ಪ್ರಾಪ್ತ ಪೂನಮ ಜಾಧವ್ ಓಂ ಪಾಟೀಲ್ ಅರ್ಜುನ ಭೀಮರಾಯಿ ಹಾಗೂ ಸ್ವಾತಿ ಬೋಸಲೆ ಅವರಿಗೆ ನಗದು ಪುಷ್ಪಗುಚ್ಛ ನೀಡಿ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೂ ಮಾರ್ಗದರ್ಶನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಪಾಟೀಲ್ ಸಂಚಾಲಕ ಡಾ. ರಾವಸಾಬ ಪಾಟೀಲ್ ಅಶೋಕ್ ಉಗಾರೆ ಡಾ. ಜ್ಯೋತಿ ಚಿಂಚನಿಕರ ಶರದ ಲಡಗೆ ರಮೇಶ್ ಮಾನೆ ಸಂಜೀವ್ ಕೋರೆ ಪ್ರಾಚಾರ್ಯ ಎಚ್ಎನ್ ಸೈಯದ್ ಮುಖ್ಯಾದ್ಯಾಪಕ ಜೇ ಜಿ. ಲಂಗೋಟೆ ಸೇರಿದಂತೆ ಕನ್ನಡ ಮರಾಠಿ ಹಾಗೂ ಆಂಗ್ಲ ಮಾಧ್ಯಮ ಶಾಲೆಯ ಪ್ರಾಧ್ಯಾಪಕರು ಶಿಕ್ಷಕರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಬ್ಯೂರೋ ರಿಪೋರ್ಟ್ ಮಹಾವೀರ ಚಿಂಚನೆ ಬಿ ವಿ.5.ನ್ಯೂಸ್ ನಿಪ್ಪಾಣಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!