Ad imageAd image

ನಾನು ಕಿಂಗ್ ಆಗಲ್ಲ ಆದರೆ ಕಿಂಗ್ ಮೇಕರ್ ಆಗುತ್ತೇನೆ : ಮೃತ್ಯುಂಜಯ ಸ್ವಾಮೀಜಿ 

Bharath Vaibhav
ನಾನು ಕಿಂಗ್ ಆಗಲ್ಲ ಆದರೆ ಕಿಂಗ್ ಮೇಕರ್ ಆಗುತ್ತೇನೆ : ಮೃತ್ಯುಂಜಯ ಸ್ವಾಮೀಜಿ 
Swamiji
WhatsApp Group Join Now
Telegram Group Join Now

ಬಾಗಲಕೋಟೆ : ಸಾಮಾಜಿಕ ಜಾಲತಾಣಗಳಲ್ಲಿ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳ ಕುರಿತು ಭಕ್ತರು ಪೋಸ್ಟ್ ಒಂದನ್ನು ಹರಿಬಿಟ್ಟಿದ್ದು, ಸದ್ಯ ಭಾರಿ ವೈರಲಾಗುತ್ತಿದೆ.

ಪಂಚಮಸಾಲಿ ಶ್ರೀಗಳು ಸಿಎಂ ಆಗಲಿ ಎಂದು ಪೋಸ್ಟ್ ಹರಿಬಿಟ್ಟಿದ್ದು, ಈ ಕುರಿತಾಗಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದು ನಾನು ರಾಜಕೀಯಕ್ಕೆ ಬರುವುದಿಲ್ಲ.ನಾನು ಕಿಂಗ್ ಆಗಲ್ಲ ಆದರೆ ಕಿಂಗ್ ಮೇಕರ್ ಆಗುತ್ತೇನೆ ಎಂದು ತಿಳಿಸಿದರು.

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನಲ್ಲಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಸ್ಟ್ ಕುರಿತಾಗಿ ನಾನು ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಬರಲ್ಲ.

ರಾಜಕೀಯ ಮಾಡೋದಕ್ಕೆ ಬಸವನಗೌಡ ಪಾಟೀಲ್ ಯತ್ನಾಳ್ ಹಾಗೂ ನಮ್ಮ ಸಮಾಜದ ನಾಯಕರಿದ್ದಾರೆ.ನಮ್ಮ ಮೇಲೆ ಅಭಿಮಾನದಿಂದ ಅಭಿಮಾನಿಗಳು ಭಕ್ತರು ಈ ರೀತಿ ಪೋಸ್ಟ್ ಹಾಕಿದ್ದಾರೆ. ನಾನು ಕಿಂಗ್ ಆಗಲ್ಲ ಕಿಂಗ್ ಮೇಕರ್ ಆಗುತ್ತೇನೆ ಎಂದು ತಿಳಿಸಿದರು.

ಇನ್ನು 2A ಮೀಸಲಾತಿ ಹೋರಾಟದ ಕುರಿತು ಮಾತನಾಡಿದ ಅವರು, ಸಮಾಜದ ಜನರ ಭಾವನೆ ಜೊತೆಗೆ ಆಟ ಆಡುವುದನ್ನು ಬಿಡಬೇಕು.

ಬಿಜೆಪಿ ಸರ್ಕಾರದಲ್ಲಿ ಶಾಸಕರು ಮತ್ತು ಸಿಎಂ ನಮ್ಮ ಬಳಿ ಬರುತ್ತಿದ್ದರು. ಆದರೆ ಈಗ ನಾವು ಶಾಸಕರು ಮತ್ತು ಸಿಎಂ ಬಳಿ ಹೋಗುವಂತಾಗಿದೆ. ನಾವು ಯಾವುದೇ ಶಾಸಕರು ಬಳಿ ಹೋಗುವ ಅಗತ್ಯವಿಲ್ಲ.

ಕಳೆದ ನಾಲ್ಕು ದಿನಗಳಿಂದ ಪಂಚಮಸಾಲಿ ತಾಲೂಕು ಘಟಕದ ಅಧ್ಯಕ್ಷರು ಜಿಲ್ಲಾ ಘಟಕದ ಅಧ್ಯಕ್ಷರಿಗೆ ಕರೆ ಮಾಡಿ ಕೆಲವರು ಬೆದರಿಕೆ ಹಾಕುತ್ತಿದ್ದಾರೆ. ಈ ಹಿಂದೆ ಬಸವರಾಜ ಬೊಮ್ಮಾಯಿ ಸರ್ಕಾರ ಒಂದು ಕೇಸ್ ಕೂಡ ಮಾಡಿಲ್ಲ. ಬೊಮ್ಮಾಯಿ ಮನೆಯ ಮುಂದೆ ಹೋರಾಟ ಮಾಡಿದರು ಯಾವುದೇ ಕೇಸ್ ಹಾಕಿಲ್ಲ.

ಆದರೆ ಈಗ ಸಿದ್ದರಾಮಯ್ಯ ಸರ್ಕಾರದಲ್ಲಿ ಬೆದರಿಕೆ ಹಾಕಲಾಗುತ್ತಿದೆ. ಬೆದರಿಕೆ ಕರಿಗಳಿಂದ ಏನಾದರೂ ಆದರೆ ರಕ್ತ ಕ್ರಾಂತಿ ಆಗುತ್ತದೆ. ರಕ್ತ ಕ್ರಾಂತಿ ಆಗುತ್ತೆ ಎಂದು ಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದರು.

ಬೆದರಿಕೆ ಕರೆಗಳ ಹಿಂದೆ ಶಾಸಕರು ಸಂಸದರು ಇದ್ದರೂ ಕೂಡ ಸುಮ್ಮನೆ ಬಿಡುವುದಿಲ್ಲ ಎಂದು ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯಲ್ಲಿ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!