Ad imageAd image

ಯಲ್ಲಾಪುರ ಬಳಿ ಲಾರಿ ಪಲ್ಟಿಯಾಗಿ ಭೀಕರ ಅಪಘಾತ, 10 ಮಂದಿ ದಾರುಣ ಸಾವು..

Bharath Vaibhav
ಯಲ್ಲಾಪುರ ಬಳಿ ಲಾರಿ ಪಲ್ಟಿಯಾಗಿ ಭೀಕರ ಅಪಘಾತ, 10 ಮಂದಿ ದಾರುಣ ಸಾವು..
WhatsApp Group Join Now
Telegram Group Join Now

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ರಾಷ್ಟ್ರೀಯ ಹದ್ಮಾರಿ 63 ರ ಬಳಿ ತರಕಾರಿ ತುಂಬಿದ್ದ ಲಾರಿ ಪಲ್ಟಿಯಾದ ಪರಿಣಾಮ 10 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಮುಂಜಾನೆ 4.30 ರ ಸುಮಾರಿನಲ್ಲಿ ಸಂಭವಿಸಿದ.ಮ್ಮನರೆಲ್ಲರೂ ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದವರೆಂದು ಗುರುತಿಸಲಾಗಿದೆ.
ಈ ಅವಘಾತದಲ್ಲಿ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಮ್ಮ ಪಪಟ್ಟವರನ್ನು ಫಯಾಜ್‌ ಜಮಖಂಡಿ (45), ವಾಸಿಂ ಮುಡಗೇರಿ (35), ಹಿಜಾಜ್‌ಮುಲ್ಲಾ (20), ಸಾಧಿಕ್‌ ಭಾಷೆ (30), ಗುಾಂ ಹುಸೇನ್‌ ಜವಳಿ (40), ಇಮ್ರಯಾಜ್ (36), ಆಲ್ಮಾಜ್ ಜಾಫರ್ (25), ಜಿಲಾನಿ ಅಬ್ಬುಲ್ (26), ಅಹ್ಮಣ (24) ಹಾಗೂ ಮತ್ತೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಇವರ ಹೆಸರು ಸದ್ಯಕ್ಕೆ ತಿಳಿದುಬಂದಿಲ್ಲ.

ಸವಣೂರಿನಿಂದ ಸುಮಾರು 20 ಮಂದಿ ತರಕಾರಿ ಹಾಗೂ ಹಣ್ಣುಗಳನ್ನು ಬಾರಿಯಲ್ಲಿ ತುಂಬಿಕೊಂಡು ಕುಮಟಾದಲ್ಲಿ ಇಂದು ಸಂತಯಿದ್ದ ಕಾರಣ ಹೋಗುತ್ತಿದ್ದರು. ಈ ಬಾರಿ ಉತ್ತರ ಕನ್ನಡ ಜಿಲ್ಲೆಯ ಯಾವುದ ತಾಲೂಕಿನ ರಾಷ್ಟ್ರೀಯ ಹದ್ದಾರಿ 63 ರ ಗುಳ್ಳಾಪುರಘಟ್ಟ ಭಾಗದಲ್ಲಿ ಮುಂಜಾನೆ 4.30 ರ ಸುಮಾರಿನಲ್ಲಿ ತೆರಳುತ್ತಿದ್ದಾಗ ಇಳಿಜಾರು ಪ್ರದೇಶವಾದ್ದರಿಂದ ಬಾಲಕನ ಗಮನಕ್ಕೆ ಬಾರದೆ ಎಡಕ್ಕೆ ಹೋಗಿ ಸುಮಾರು 50 ಮೀಟರ್ ಆಳದ ಕಣಿವೆಗೆ ನಿಯಂತ್ರಣ ತಪ್ಪಿ ಉರುಳಿಬಿದ್ದಿದೆ. ಪರಿಣಾಮ 8 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದರೆ ಗಂಭೀರ ಗಾಯಗೊಂಡಿದ್ದ, ಇನ್ನಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದ ಮೃತಪಟ್ಟಿದ್ದಾರೆ.
ಗಾಯಗೊಂಡಿರುವ 15ಕ್ಕೂ ಹೆಚ್ಚು ಮಂದಿಯ ಪ್ರತಿ ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಬಾರಿ ಮಗುಚಿಬಿದ್ದ ಪರಿಣಾಮ ಲಾರಿ ಬಾಗಿಲು
ತೆಗೆಯಲಾಗದೆ ಮುಂಭಾಗದಲ್ಲಿ ಕುಳಿತಿದವರು ಉಸಿರುಗಟ್ಟಿ, ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಯಲ್ಲಾಪುರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಕ್ರೇನ್ ಸಹಾಯದಿಂದ ಲಾರಿಯನ್ನು ಮೇಲಕ್ಕೆತ್ತಿ ಮೃತದೇಹಗಳನ್ನು ಹೊರತೆಗೆದು ಸ್ಥಳೀಯರ ನೆರವಿನೊಂದಿಗೆ ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.ಉತ್ತರ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ್ ಅವರು ಸ್ಥಳಕ್ಕೆ ಆಗಮಿಸಿ, ಪರಿಶೀಲಿಸಿ ಮಾಹಿತಿ ಪಡೆದುಕೊಂಡಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!