ಬೆಂಗಳೂರು: ತ್ರಿವಿಧ ದಾಸೋಹಿ ಶ್ರೀ ಸಿದ್ದಗಂಗಾ ಸುಕ್ಷೇತ್ರದ ಪೂಜೆ ಶ್ರೀ ಡಾ. ಶಿವಕುಮಾರ ಸ್ವಾಮಿಗಳ ಅವರ ಕಾರ್ಯಗಳು ಅವರ ಬದುಕು ತತ್ವದಾರ್ಶಗಳು ನಮಗೆ ನಿತ್ಯ ದಾರಿ ದೀಪ ವಾಗಿದೆ ಎಂದು ಬಸವ ಧ್ಯಾನ ಸೆಂಟರ್ ಅಧ್ಯಕ್ಷೆ ಓಂಕಾರೇಶ್ವರಿ ಹೇಳಿದರು.
ಅವರು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶೆಟ್ಟಿಹಳ್ಳಿ ವಾರ್ಡಿನ ವಿಘ್ನೇಶ್ವರ ಬಡಾವಣೆಯ ವೀರ ಶೈವ ಲಿಂಗಾಯತ ಸಮಾಜದ ಹಿರಿಯ ಮುಖಂಡ ಸಿ.ಹೆಚ್. ಆರಾಧ್ಯ ಅವರ ಮಾರ್ಗದರ್ಶನ ಹಾಗೂ ಸಹಕಾರದಿಂದ ಅಕ್ಕನ ಬಳಗ ಮಹಿಳಾ ಸಮಾಜ ಸಂಘದ ಅಧ್ಯಕ್ಷೆ ಪ್ರೇಮಾ ಆರಾಧ್ಯ ಅವರ ನೇತೃತ್ವದಲ್ಲಿ ಡಾ.ಶ್ರೀ ಶಿವಕುಮಾರ್ ಸ್ವಾಮಿಗಳವರ 6ನೇ ವರ್ಷದ ಪುಣ್ಯ ಸ್ಮರಣೋತ್ಸವ ಮತ್ತು ದಾಸೋಹ ದಿನಾಚರಣೆ ಅಂಗವಾಗಿ ಸ್ವಾಮಿ ಜೀ ಭಾವಚಿತ್ರಕ್ಕೆ ಪೂಜೆ ಪುನಸ್ಕಾರ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು ನಂತರ ಅವರು ಡಾ. ಶಿವಕುಮಾರ ಸ್ವಾಮೀಜಿ ಅವರು ಯಾವುದೇ ಜಾತಿ, ಧರ್ಮ, ವರ್ಗಕ್ಕೆ ಸೀಮಿತವಾಗಿದೆ ಸರ್ವರಿಗೂ ಸಮಬಾಳು,ಸಮಪಾಲು ಎಂಬಂತೆ ಎಲ್ಲರಿಗೂ ಶಿಕ್ಷಣ ಆಶ್ರಯ,ಅನ್ನ ದಿಸೋಹ ಕಲ್ಪಿಸಿದ ಮಹಾ ಚೇತನ ಶ್ರೀ.ಡಾ. ಶಿವಕುಮಾರ ಸ್ವಾಮಿಗಳು ಇಂತಹ ಮಹಾತ್ಮರು ಮತ್ತೆ ಮತ್ತೆ ಹುಟ್ಟಿ ಬರಲಿ ಎಂದು ಓಂಕಾರೇಶ್ವರಿ ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಿದರು.
ಅಕ್ಕನ ಬಳಗ ಮಹಿಳಾ ಸಮಾಜ ಸಂಘದ ಅಧ್ಯಕ್ಷೆ ಪ್ರೇಮಾ ಆರಾಧ್ಯ ಅವರು ಸರ್ವರಿಗೂ ಸ್ವಾಗತ ಕೋರಿದರು.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ವೀರ ಶೈವ ಲಿಂಗಾಯತ ಸಮಾಜದ ಹಿರಿಯ ಮುಖಂಡ ಸಿ.ಹೆಚ್ ಆರಾಧ್ಯ ಅವರು ಪ್ರಾಸ್ತಾವಿಕವಾಗಿ ಭಾಷಣ ಮಾಡಿ ಗಣ್ಯರಿಗೆ ಗೌರವಿಸಿ ಅನ್ನ ನಿಯೋಗಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ವೀರ ಶೈವ ಲಿಂಗಾಯತ ಸಮಾಜದ ಮುಖಂಡರಾದ ನಿಸರ್ಗ ನಾಗರಾಜು ಅಬ್ಬಿಗೆರೆ,ಎಂ.ಹೆಚ್ ಪಾಟೀಲ್ ಬಾಣವಾರ, ಬಿ ಎನ್ ಆರ್ ಶಾಲೆಯ ಪ್ರಮುಖ ಭೂಷಂ, ಶಿವಕುಮಾರ್ ಕೇಂದ್ರಿಯ ವಿದ್ಯಾಲಯ, ವೀರಭದ್ರಪ್ಪ ರಾಯಚೂರು, ಆರಾಧ್ಯ ಸಂಘದ ಕಾರ್ಯದರ್ಶಿ ರವಿರಾಧ್ಯ, ಚಂದ್ರಶೇಖರ್, ಬಸವರಾಜ್,ಮಹಿಳಾ ಮುಖಂಡರಾದ ಚೇತನಾ,ನಾಗರತ್ನ, ಮಂಜುಳಾ ಗಾಯತ್ರಿ,ಸಾಕಮ್ಮ,ಗೌರಮ್ಮ ಸೇರಿದಂತೆ ವಿಘ್ನೇಶ್ವರ ಬಡಾವಣೆಯ ಸಮಸ್ತ ನಾಗರಿಕರು ಮಹಿಳೆಯರು ಮುಂತಾದವರು ಪಾಲ್ಗೊಂಡು ನಡೆದಾಡುವ ದೇವರು ಶ್ರೀ ಡಾ.ಶಿವಕುಮಾರ ಸ್ವಾಮೀಜಿಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ವರದಿ: ಅಯ್ಯಣ್ಣ ಮಾಸ್ಟರ್




