ಪಾವಗಡ: ತುಮಕೂರು ಲೋಕಾಯುಕ್ತ ಅಧಿಕಾರಿಗಳಿಂದ ಸಾರ್ವಜನಿಕರ ಕುಂದು ಕೊರತೆ ಸಭೆ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮ ಪಟ್ಟಣದ ಎಸ್.ಎಸ್.ಕೆ ಸಮುದಾಯ ಭವನದಲ್ಲಿ ಬದವಾರ ಲೋಕಾಯುಕ್ತ ತುಮಕೂರು ಎಸ್.ಪಿ ಲಕ್ಷ್ಮೀ ನಾರಾಯಣ, ಡಿವೈಎಸ್‌ಪಿ ರಾಮಕೃಷ್ಣ ಹಾಗೂ ಇನ್ಸ್‌ಪೆಕ್ಟರ್ ಮಹಮದ್ ಸಲೀಂ ಅವರ ನೇತೃತ್ವದಲ್ಲಿ ಅಹವಾಲು ಸ್ವೀಕಾರಿಸಿ ಕೊಂದುಕೊರತೆ ಆಲಿಸಿದರು.

ತುಮಕೂರು ಲೋಕಾಯುಕ್ತ ಎಸ್.ಪಿ ಲಕ್ಷ್ಮೀನಾರಾಯಣ ಮಾತನಾಡಿ ಸಾರ್ವಜನಿಕರು ಸರ್ಕಾರಿ ಇಲಾಖೆಗಳ ಮೇಲೆ ಭಾರಿ ನಿರೀಕ್ಷೆಗಳನ್ನು ಹೊತ್ತುಕೊಂಡು ಬರುವ ಜನರನ್ನು ಯಾವುದೇ ಕಾರಣಕ್ಕೂ ನಿರಾಸೆಗೊಳಿಸಬಾರದು ಎಂದು ಲೋಕಾಯುಕ್ತ ಎಸ್.ಪಿ ಲಕ್ಷ್ಮೀನಾರಾಯಣ ತಿಳಿಸಿದರು.
ಮುಂದುವರಿದು ಸಾರ್ವಜನಿಕರ ಸಮಸ್ಯೆ ಮತ್ತು ದೂರುಗಳನ್ನು ಪರಿಹರಿಸಲು ಪ್ರಥಮ ಆದ್ಯತೆ ನೀಡಬೇಕು. ಅವರ ಬೇಡಿಕೆಗಳಿಗೆ ಸ್ಪಂದಿಸಬೇಕು. ಸರ್ಕಾರ ಮತ್ತು ಇಲಾಖೆಯ ಕಾರ್ಯನಿರ್ವಹಣೆ ಬಗ್ಗೆ ಜನರು ಹೊಂದಿರುವ ಒಳ್ಳೆಯ ಭಾವನೆಯನ್ನು ಕಾಪಾಡಿಕೊಳ್ಳಬೇಕು.

ಸಬೆಯಲ್ಲಿ ವೈ.ಎನ್ ಹೊಸಕೋಟೆ ಗ್ರಾಮದ ಸರ್ವೆನಂಬರ್ 245/2 ರಲ್ಲಿ 3 ಎಕರೆಯಲ್ಲಿ ಸಂತೆ ಮೈದಾನವೆಂದು ದಾಖಲಾಗಿದೆ. ಆದರೆ ಕೆಲ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಲೇಔಟ್ ಮಾಡಿ ನಿವೇಶನಗಳನ್ನು ಮಾಡಿಕೊಂಡು ಮಾರಾಟ ಮಾಡಿದ್ದಾರೆ, ಮನೆಗಳು ಸಹ ಕಟ್ಟಿಕೊಂಡಿದ್ದಾರೆ. ಸಂತೆ ಮೈದಾನ ಉಳಿವಿಗೆ ಅನೇಕ ಭಾರಿ ಗ್ರಾ.ಪಂ ಸೇರಿದಂತೆ ಮೇಲಾಧಿಕಾರಿಗಳಿಗೂ ಸಹ ದೂರು ಸಲ್ಲಿಸಿದರು ಪ್ರಯೊಜನವಾಗದ ಕಾರಣ ಇಂದು ಲೋಕಾಯುಕ್ತರಲ್ಲೊ ಮರು ದೂರು ದಾಖಲಿಸಿದ್ದಾರೆ.
ಇದಕ್ಕೆ ಲೋಕಾಯುಕ್ತ ಎಸ್.ಪಿ ಮಾತನಾಡಿ ಗ್ರಾ.ಪಂ ಅಭಿವೃದ್ದಿ ಅಧಿಕಾರಿ.ತಾ.ಪಂ ಇ.ಒ ಮತ್ತು ಎ.ಡಿಎಲ್.ಆರ್ ರವರಿಗೆ ಸಂತೆ ಮೈದಾನವನ್ನು ಸರ್ವೇ ಕಾರ್ಯ ಮಾಡಿ ತೆರವುಗೊಳಿಸಿ ಸಾರ್ವಜನಿಕ ಉಪಯೋಗಕ್ಕೆ ಬಿಡಿಸಿಕೊಡುವಂತೆ ಸೂಚಿಸಿದರು. ಅಧಿಕಾರಿಗಳು 15 ದಿನಗಳಲ್ಲಿ ಸಮಸ್ಯೆ ಬಗ್ಗೆ ಸ್ಥಳ ಪರಿಶೀಲಿಸಿ ವರದಿ ನೀಡಲು ಕಾಲಾವಕಾಶ ಕೇಳಿಕೊಂಡಿದ್ದಾರೆ.

ಸಾರ್ವಜನಿಕರೊಬ್ಬ ನಾಗಭೂಷಣ್ ಕನ್ನಮೇಡಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ವಿರುದ್ದ ಕನ್ನಮೇಡಿ ಗ್ರಾಮದ ಶಾಲೆಯ ಶೌಚಾಲಯವನ್ನು ಪಾಯ ಹಾಕದಲೇ ಕಳಪೆ ಕಾಮಗಾರಿ ಮಾಡುತ್ತಿರುವ ಬಗ್ಗೆ ತಾ.ಪಂ ಇ ಒ ರವರಿಗೆ ದೂರು ನೀಡಲಾಗಿತ್ತು ಎರಡು ತಿಂಗಳಾದರೂ ಸಹ ಯಾವುದೇ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಜನವರಿ 7 ರಂದು ಜಿ.ಪಂ ಸಿ.ಇ.ಒ ರವರಿಗೆ ದೂರು ಸಲ್ಲಿಸಿಸಮಸ್ಯೆ ಬಗ್ಗೆ ಮನವರಿಕೆ ಮಾಡಲಾಗಿದೆ. ಆದರೆ ಯಾವುದೇ ಕ್ರಮಕೈಗೊಳ್ಳದಿರುವ ಕಾರಣ ಇಂದು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದರು.
ಲೋಕಾಯುಕ್ತ ಅದಿಕಾರಿಗಳು ಸ್ವಂದಿಸಿ ಸಂಬಂದ ಪಟ್ಟ ತಾ.ಪಂ ಇ ಒ ರವರಿಗೆ 15 ದಿನದೊಳಗೆ ಸ್ಥಳ ಪರಿಶೀಲನೆ ಮಾಡಿ ವರದಿ ಸಲ್ಲಿಸುವಂತೆ ಸೂಚಿಸಿದರು.
ಬಾಕ್ಸ್: ಲೋಕಾಯುಕ್ತ ಕುಂದು ಕೊರತೆ ಮತ್ತು ಅಹವಾಲು ಸ್ವೀಕಾರ ಸಬೆಯಲ್ಲಿ ಸಾರ್ವಜನಿಕರು ತಮ್ಮ ಅನೇಕ ಸಮಸ್ಯೆಗಳ ಬಗ್ಗೆ ಲೋಕಾಯುಕ್ತ ಅಧಿಕಾರಿಗಳ ಬಳಿ ಒಟ್ಟು 22 ದೂರು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಇಲಾಖೆವಾರು ಕೆಲಕಂಡಂತಿವೆ. ತಹಶೀಲ್ದಾರ್ ಕಛೇರಿ 05,ಪೊಲೀಸ್, 03,ಇ.ಒ ತಾಲ್ಲೂಕು ಪಂಚಾಯಿತಿ 09, ಎ.ಡಿಎಲ್.ಅರ್. 01 ಪುರಸಭೆಗೆ 02 ಅಬಕಾರಿ 01
ತುಮಕೂರು ವಾಲ್ಮೀಕಿ ಸಂಘ 01 ಒಟ್ಟು 22 ಅರ್ಜಿಗಳನ್ನು ವಿವಿದ ಇಲಾಖೆಗಳ ವಿರುದ್ದ ದೂರು ಸಲ್ಲಿಸಲಾಗಿದೆ.
ಈ ವೇಳೆ ತಹಶಿಲ್ದಾರ್ ವರದರಾಜು, ಇ.ಒ ಜಾನಕೀರಾಮ್, ಪುರಸಭೆ ಮುಖ್ಯಾಧಿಕಾರಿ ಜಾಫರ್ ಷರೀಪ್, ಸಿ.ಪಿ.ಐ ಗಳಾದ ಸುರೇಶ್, ಮತ್ತು ಗಿರೀಶ್, ಬಿ.ಇಒ ಇಂದ್ರಾಣಮ್ಮ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರವಿಕುಮಾರ್, ಅರ್.ಐ ಗಳಾದ ನಾರಯಣ್ ಗೌಡ, ರಾಜಗೋಪಾಲ್. ಎಚ್‌ಪಿ ಕಿರಣ್ ಕುಮಾರ್ ಪಿ.ಡ್ಬೂಡಿ ಎಇಇ ಅನಿಲ್ ಕುಮಾರ್, ಬಸವಲಿಂಗಪ್ಪ. THO ಡಾಕ್ಟರ್ ಕಿರಣ್ ಕುಮಾರ್. ಸಿ.ಡಿ.ಪಿಒ ಸುನಿತಾ, ಕೃಷಿ ಅಧಿಕಾರಿ ಅಜಯ್ ಕುಮಾರ್ ಸೇರಿದಂತೆ ತಾಲ್ಲುಕು ಮಟ್ಟದ ಅಧಿಕಾರಿಗಳು, ಗ್ರಾ.ಪಂ ಅಭಿವೃದ್ದಿ ಅಧಿಕಾರಿಗಳು ಸಾರ್ವಜನಿಕರು ಹಾಜರಿದ್ದರು.
ವರದಿ:ಶಿವಾನಂದ ಪಾವಗಡ




