Ad imageAd image

ಮುದಗಲ್: ಸ್ಥಳೀಯ ಪುರಸಭೆಯ ಸಾಮನ್ಯ ಸಭೆ ಪುರಸಭೆ ಅಧ್ಯಕ್ಷೆ ಮಹಾದೇವಮ್ಮ ನರಸಯ್ಯ ರಡ್ಡಿ ನೇತೃತ್ವದಲ್ಲಿ ಜರುಗಿತು.

Bharath Vaibhav
ಮುದಗಲ್: ಸ್ಥಳೀಯ ಪುರಸಭೆಯ  ಸಾಮನ್ಯ ಸಭೆ  ಪುರಸಭೆ ಅಧ್ಯಕ್ಷೆ ಮಹಾದೇವಮ್ಮ ನರಸಯ್ಯ ರಡ್ಡಿ   ನೇತೃತ್ವದಲ್ಲಿ  ಜರುಗಿತು.
WhatsApp Group Join Now
Telegram Group Join Now

ಮುದಗಲ್: ಸ್ಥಳೀಯ ಪುರಸಭೆಯ ಸಾಮನ್ಯ ಸಭೆ ಬುಧುವಾರ ಪುರಸಭೆ ಅಧ್ಯಕ್ಷೆ ಮಹಾದೇವಮ್ಮ ನರಸಯ್ಯ ರಡ್ಡಿ ನೇತೃತ್ವದಲ್ಲಿ ಜರುಗಿತು.

ಹಿಂದಿನ ಸಭೆಯ ನಡುವಳಿಕೆಗಳನ್ನು ನೈರ್ಮಲ್ ಅಧಿಕಾರಿ ಆರಿಫ್ ಉನ್ನಿ ಸ್ಸಾ ಸಭೆಯಲ್ಲಿ ಓದಿ ತಿಳಿಸಿದರು. ಪಟ್ಟಣದಲ್ಲಿ ಕಾಡುತ್ತಿರುವ ಸಮರ್ಪಕ ಕುಡಿಯುವ ನೀರಿನ ಸಮಸ್ಯೆ, ಪುರಸಭೆ ವ್ಯಾಪ್ತಿಯ ಎಲ್ಲಾ ಮಳಿಗೆಗಳನ್ನು ಹರಾಜು ಪ್ರಕ್ರಿಯೇ ಕಾನೂನಾತ್ಮಕವಾಗಿ ಜರುಗಬೇಕು. ವಾರದ ಸಂತೆ ವ್ಯಾಪಾರಸ್ಥರಿಗೆ ಕಾನೂನಾತ್ಮಕವಾಗಿ ತೆರಿಗೆ ವಸೂಲಿ ಮಾಡಲು ಚೀಟಿ ನೀಡಬೇಕು. ತೆರಿಗೆ ವಸೂಲಿಯಲ್ಲಿ ಸೋರಿಕೆಯಾಗಿದೆ. ಪುರಸಭೆಯ ಹೊಸ ಕಟ್ಟಡ ನಿರ್ಮಿಸಲು ಹಾಗೂ ಪಟ್ಟಣಕ್ಕೆ ಸಮರ್ಪಕ ಕುಡಿಯುವ ನೀರಿನ ಪೂರೈಕೆಗಾಗಿ ಪುರಸಭೆ ಸದಸ್ಯರೊಂದಿಗೆ ಜಿಲ್ಲಾಧಿಕಾರಿಯವರಿಗೆ ಭೇಟಿಯಾಗೋಣ. ಪಟ್ಟಣದ ಎಲ್ಲಾ ಸಿಎಸ್ಐಟಿಗಳನ್ನು ಪುರಸಭೆ ವ್ಯಾಪ್ತಿಯಲ್ಲಿ ವಶಪಡಿಸಿಕೊಳ್ಳ ಬೇಕು .ಬೀದಿಬದಿ ವ್ಯಾಪಾರಸ್ಥರಿಗೆ ವ್ಯಾಪಾರ ಮಾಡಲು ಸೂಚನೆ ನೀಡಬೇಕು. 14ನೇ ಹಣಕಾಸಿನ ಉಳಿಕೆ ಮೊತ್ತದ ಪ್ರಿಯ ಯೋಜನೆ ಕುರಿತು ಉಳಿತಾಯದ ಹಣ 25 ಲಕ್ಷ ಇದೆ. ನೈರ್ಮಲ್ಯ ಸಾಮಗ್ರಿ ಮತ್ತು ನೀರು ಸರಬರಾಜು ವಾರ್ಷಿಕ ಟೆಂಡರ ಮೂಲಕ ಸಾಮಾನುಗಳ ಖರೀದಿಗೆ ಟೆಂಡರ್ ಕರೆಯಲಾಗುವುದು. ಆಸ್ತಿ ತೆರಿಗೆ ದರಗಳ ಪರಿಷ್ಕರಣೆ ಪರಿಶೀಲನೆ ಮಾಡಿ ಕಡಮೆ ಮಾಡಬೇಕು. ಕಾನೂನು ಅಡಿಯಲ್ಲಿ ಸ್ಥಿರ ಚರ ಆಸ್ತಿ ರಕ್ಷಣೆ ಮಾಡಬೇಕು, ನಾಡಕಚೇರಿ ಪುರಸಭೆ ವ್ಯಾಪ್ತಿಯಲ್ಲಿ ಬರುವುದರಿಂದ ಪುರಸಭೆ ವ್ಯಾಪ್ತಿಗೆ ವಶಪಡಿಸಿಕೊಳ್ಳಬಹುದು. 2024-25ಸಾಲಿನ ಜಮಾ ಖರ್ಚು ವಿವರ ಎಂ ಆಸ್ತಿಗೆ ಬದಲಾವಣೆ ಮೊದಲಾದ ವಿಷಯಗಳು ಸಭೆಯಲ್ಲಿ ಚರ್ಚೆಗೆ ಗ್ರಾಸವಾದವು,
ಪುರಸಭೆ ಅಧ್ಯಕ್ಷೆ ಮಹಾದೇವಮ್ಮ ನರಸಯ್ಯ ಗುತ್ತೇದಾರ, ಉಪಾಧ್ಯಕ್ಷ ಅಜ್ಮಿರ್ ಬೆಳ್ಳಿಕಟ್,
ಸದಸ್ಯರು ತಸ್ಲೀಮ್ ಮುಲ್ಲಾ, ಅಮೀರ್ ಬೇಗ್ ಉಸ್ತಾದ್, ಎಸ್ ರಸೂಲ್ಸಾಬ್, ಹನುಮಂತ ನಾಯಕ, ಗುಂಡಪ್ಪ ಗಂಗಾವತಿ, ಮಹೇಬೂಬ್ ಕಡ್ಡಿಪುಡಿ, ಶಬ್ಬೀರ್ ಪಾಷಾ, ಶಿವಗ್ಯಾನಪ್ಪ ಬಡಕುರಿ, ಸದಸ್ಯೆಯರು ಅಮೀನಾ ಬೇಗಂ, ಜಯಶ್ರೀ ಜೀಡಿ, ಕಾಸಿಂಬಿ, ರಮ್ಜಾನಭಿ, ರಾಭಿಯಾಬೇಗಂ, ಅಮೀನಾಬೇಗಂ ಸಯ್ಯದ್ಸಾಬ್ ಸೇರಿದಂತೆ ಪುರಸಭೆ ಸಿಬ್ಬಂದಿಗಳು ಇದ್ದರು.

ವರದಿ:- ಮಂಜುನಾಥ ಕುಂಬಾರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!