ರಾಯಚೂರು : ಬೇಡಿಕೆ ಈಡೇರಿಸುವಂತೆ ಪ್ರಭುರಾಜ ಕೊಡ್ಲಿ ಆಗ್ರಹ
ಭರವಸೆ ಕೊಟ್ಟು ಬೇಡಿಕೆಗೆ ನ್ಯಾಯ ನೀಡದ ಮಾನ್ವಿ ತಾಲೂಕಾಡಳಿತ
ಮಾನ್ವಿ ತಾಲೂಕಾಡಳಿತ ವಿರುದ್ಧ ಧಿಕ್ಕಾರ ಕೂಗಿದ ಪ್ರಭುರಾಜ ಕೊಡ್ಲಿ
ಹಾಸ್ಟೆಲ್ ಸ್ಥಳಾಂತರ ಮಾಡದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನಟರಾಜ
ಬೇಡಿಕೆ ಈಡೇರಿಸುವ ಭರವಸೆ ನೀಡಿ ಕೈಕೊಟ್ಟ ಮಾನ್ವಿ ತಾಲೂಕಾಡಳಿತ ನಡೆಯನ್ನು ಖಂಡಿಸಿ ಹೋರಾಟಗಾರ ಪ್ರಭುರಾಜ ಕೊಡ್ಲಿ ತಾಲೂಕ ಪಂಚಾಯತಿ ಕಚೇರಿಗೆ ಮುತ್ತಿಗೆ ಹಾಕಿ ನ್ಯಾಯಬೇಕು ಎಂದು ಪ್ರತಿಭಟನೆ ನಡೆಸಿದರು.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಲ್ಲಿ ಆಡಳಿತ ವ್ಯವಸ್ಥೆ ಕುಸಿದಿದ್ದರಿಂದ ಹೋರಾಟಗಾರರ ಬೇಡಿಕೆಗೆ ಸ್ಪಂಧನೆ ಇಲ್ಲವಾಗಿದ್ದರಿಂದ ಪ್ರಭುರಾಜ ಕೊಡ್ಲಿ ತಾಲೂಕಾಡಳಿತದ ವಿರುದ್ಧ ಕಿಡಿಕಾರಿದರು.
ಮಾನ್ವಿ ಪಟ್ಟಣದಲ್ಲಿ ನೂತನವಾಗಿ ಹೊಸ ಕಟ್ಟಡ ನಿರ್ಮಾಣವಾಗಿ ತಿಂಗಳುಗಳೆ ಕಳೆದರು ಸಹ ತಾಲೂಕಾಧಿಕಾರಿ ನಟರಾಜ ಸ್ಥಳಾಂತರ ಮಾಡುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ಮಾನ್ವಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು,ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನಟರಾಜರ ದುರಾಡಳಿತವೇ ಇಲ್ಲಿ ಎದ್ದು ಕಾಣುತ್ತದೆ.




