ರಾಯಚೂರು:
ಮೈಕ್ರೋ ಫೈನಾನ್ಸ್ ಅಧಿಕಾರಿಗಳಿಂದಲೇ ಫೇಕ್ ದಾಖಲೆ ಸೃಷ್ಟಿ
ಮಾನ್ವಿ ತಾಲೂಕಿನ ನೀರಮಾನ್ವಿ ಗ್ರಾಮಸ್ಥರ ಗಂಭೀರ ಆರೋಪ
ಜನಸೇವಾ ಫೌಂಡೇಷನ್ ವತಿಯಿಂದ ಜನವರಿ 24ರಂದು ಡಿಸಿ ಕಚೇರಿ ಮುಂದೆ ಪ್ರತಿಭಟನೆ
ಫೈನಾನ್ಸ್ ಕಿರುಕುಳದಿಂದ ತಪ್ಪಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ
ಮಾನ್ವಿ ತಾಲೂಕಲ್ಲಿ ಮೈಕ್ರೋ ಫೈನಾನ್ಸ್ ಅಧಿಕಾರಿಗಳೆ ಫೇಕ್ ದಾಖಲಾತಿಗಳನ್ನು ಸೃಷ್ಟಿ ಮಾಡಿ ಅಮಾಯಕ ಬಡ ಹೆಣ್ಣುಮಕ್ಕಳ ಹೆಸರಿನಲ್ಲಿ ಸಾಲ ಮಾಡಿಸಿದ್ದಾರೆಂದು ಜನಸೇವಾ ಫೌಂಡೇಷನ್ ರಾಜ್ಯಾಧ್ಯಕ್ಷ ಜಾವಿದ್ ಖಾನ್ ಆರೋಪಿಸಿದರು.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಬಂಧ ಇಲ್ಲದ ಕುಟುಂಬಕ್ಕೆ ನಂಟು ತೋರಿಸಿ ಮತದಾನ ಕಾಡ್೯ ಮತ್ತು ಆಧಾರ್ ಕಾಡ್೯ಗಳನ್ನು ಫೇಕ್ ಮಾಡಿ ಒಂದು ರೀತಿಯಲ್ಲಿ ಮೈಕ್ರೋ ಫೈನಾನ್ಸ್ ಅಧಿಕಾರಿಗಳಿಂದಲೆ ಮೋಸದಾಟ ನಡೆದಿದೆ,ದೊಡ್ಡ ಮಟ್ಟದಲ್ಲಿ ವಂಚನೆಯ ಜಾಲ ಎಂದು ಕಿಡಿಕಾರಿದರು.
ಮೈಕ್ರೋ ಫೈನಾನ್ಸ್ ಅಧಿಕಾರಿಗಳು ನಮಗೆ ದುಂಬಾಲು ಬಿದ್ದು, ನಮ್ಮ ಮೈಕ್ರೋ ಫೈನಾನ್ಸ್ ಬ್ಯಾಂಕ್ ಹಣದ ವ್ಯವಹಾರ ಮಾರುಕಟ್ಟೆಯಲ್ಲಿ ತೋರಿಸುವ ಸಲುವಾಗಿ ಜನರನ್ನು ತೋರಿಸಿ ಎಂದು ಕಮಿಷನ್ ಆಸೆಗೆ ಫೇಕ್ ದಾಖಲೆಗಳನ್ನು ಸೃಷ್ಟಿಮಾಡಿದ್ದರಿಂದ ನಮಗೆ ವಂಚನೆಯಾಗಿದೆ.ಹೀಗಾಗಿ ನಮಗೆ ನ್ಯಾಯಬೇಕು ಎಂದು ನೀರಮಾನ್ವಿ ಗ್ರಾಮದ ನಿವಾಸಿ ಭಾಗೀರಥಳ ನೋವಾಗಿದೆ.




