Ad imageAd image

ಕ್ಷೀರಭಾಗ್ಯ ಹಗರಣ : 127 ಮುಖ್ಯಶಿಕ್ಷಕರಿಗೆ ಪೊಲೀಸರಿಂದ ನೋಟಿಸ್ 

Bharath Vaibhav
WhatsApp Group Join Now
Telegram Group Join Now

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದ್ದ ಕ್ಷೀರಭಾಗ್ಯ ಯೋಜನೆಯ ಹಾಲಿನ ಪುಡಿಗೆ ಕನ್ನ ಹಾಕಿದ್ದ ಪ್ರಕರಣಕ್ಕೆ ಸಬಂಧಿಸಿದಂತೆ 127 ಮುಖ್ಯಶಿಕ್ಷಕರಿಗೆ ಪೊಲೀಸರು ನೋಟಿಸ್ ನಿಡಿದ್ದಾರೆ.

ಅ.5ರಂದು ಬಾಗಲಕೋಟೆಯಲ್ಲಿ ನಡೆದಿದ ದಾಳಿ ವೇಳೆ ಪೊಲೀಸರು ಟನ್ ಗಟ್ಟಲೇ ಹಾಲಿನ ಪ್ಯಾಕೇತ್ ಜಪ್ತಿ ಮಾಡಿದ್ದರು.ಪ್ರಕರಣ ಸಂಬಂಧ ಇದೀಗ 127 ಜನ ಮುಖ್ಯಶಿಕ್ಷಕರಿಗೆ ನೋಟಿಸ್ ನೀಡಲಾಗಿದೆ.

ಸರ್ಕಾರಿ ಶಾಲೆಯಲ್ಲಿ ಓದುವ ಬಡ ಮಕ್ಕಳಿಗಾಗಿ ರಾಜ್ಯ ಸರ್ಕಾರ ಕ್ಷೀರಭಾಗ್ಯ ಯೋಜನೆ ಜಾರಿಗೆ ತಂದಿದ್ದು, ಈ ಯೋಜನೆಯಡಿ ಮಕ್ಕಳಿಗೆ ಹಾಲು ನೀಡಲಾಗುತ್ತದೆ. ಆದರೆ ಖದೀಮರು ಮಕ್ಕಳಿಗೆ ನೀಡುವ ಹಾಲಿಗೆ ಕನ್ನ ಹಾಕುತ್ತಿರುವುದೂ ಅಲ್ಲದೇ ಶಿಕ್ಷಕರೇ ಈ ಪ್ರಕರಣದಲ್ಲಿ ಭಾಗಿಯಾಗಿರುವುದು ದುರಂತ.

ಖದೀಮರು ಕಾಳ ಸಂತೆಯಲ್ಲಿ ಹಾಲಿನ ಪೌಡರ್ ಪ್ಯಾಕೇಟ್ ಮಾರಾಟ ಮಾಡುತ್ತಿರುವುದು ಬಯಲಾಗಿತ್ತು. ಬಾಗಲಕೋಟೆಯ ಬದಾಮಿಯಲ್ಲಿ ಸೂಳಿಕೇರಿಗ್ರಾಮದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಶಡ್ ನಲ್ಲಿ ಸಂಗ್ರಹಿಸಿದ್ದ 18.14 ಲಕ್ಷ ಮೌಲ್ಯದ ಹಾಲಿನ ಪ್ಯಾಕೇಟ್, ರಾಗಿ ಹಿಟ್ಟು, ಅಡುಗೆ ಎಣ್ಣೆ ಪ್ಯಾಕೇಟ್ ಜಪ್ತಿ ಮಾಡಲಾಗಿತ್ತು.

ದಾಳಿ ವೇಳೆ ಆರೋಪಿ ಸಿದ್ದಪ್ಪನನ್ನು ಬಂಧಿಸಲಾಗಿತ್ತು. ಈತ ನಿಡಿದ ಮಾಹಿತಿ ಮೇರೆಗೆ ಇದೀಗ 127 ಮುಖ್ಯಶಿಕ್ಷಕರಿಗೆ ನೋಟಿಸ್ ನೀಡಲಾಗಿದೆ. ಇವರು ಕೂಡ ಹಾಲಿನ ಪ್ಯಾಕೇಟ್ ಕಳ್ಳದಂಧೆಯಲ್ಲಿ ಶಾಮೀಲಾಗಿರುವುದು ಬೆಳಕಿಗೆ ಬಂದಿದೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!