ತುಮಕೂರು: ದಿನಾಂಕ,22/01/25 ಬುಧವಾರ ರಂದು ತುಮಕೂರು ಜಿಲ್ಲೆಯಲ್ಲಿ ತುಮುಲ್ ಚುನಾವಣೆ ಪ್ರಕಟವಾಗಿರುತ್ತದೆ.
ತುಮಕೂರು ಜಿಲ್ಲೆಯ ಹಾಲು ಉತ್ಪಾದಕರ ಒಕ್ಕೂಟದಿಂದ ಪಾವಗಡ ಶಾಸಕ ವೆಂಕಟೇಶ್ ಆಯ್ಕೆಯಾಗಿರುತ್ತಾರೆ ಇದು ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಸರ್ಕಾರದಿಂದ ನಾಮ ನಿರ್ದೇಶಕ ಸದಸ್ಯರಾಗಿರುವ ಎಚ್ ವಿ ವೆಂಕಟೇಶ್ ಮತ್ತು ಸಿರಾ ತಾಲೂಕು ಪ್ರತಿ ನಿಧಿಯಾದ ಆರ್ ಎಸ್ ಗೌಡ ಸಲ್ಲಿಸಿದರು ನಿಗದಿತ ಅವಧಿಯಲ್ಲಿ ಯಾರು ನಾಮ ಪತ್ರವನ್ನು ಹಿಂಪಡೆಯಾದ ಕಾರಣದಿಂದ ಚುನಾವಣೆ ಅಧಿಕಾರಿ ಗೌರವ ಕುಮಾರ್ ಶೆಟ್ಟಿ ಚುನಾವಣೆಯ ಪಕ್ರಿಯ ಮುಂದುವರಿಸಿದ್ದು ಇವರ ಚುನಾವಣೆ ನಡೆಯಲಿ ಪಾವಗಡ ಶಾಸಕ ಎಚ್ ವಿ ವೆಂಕಟೇಶ್ ಪರವಾಗಿ 9 ಮತಗಳು. ಆರ್ ಎಸ್ ಗೌಡ ಪರವಾಗಿ 5 ಮತಗಳು ಬಂದಿದ್ದೇವೆ ಇವರಿಬ್ಬರ ನಡುವೆ ತೀವ್ರ ಪೈಪೋಟಿ ನಡೆಯಿತು ಇದರಲ್ಲಿ ಪಾವಗಡ.ಶಾಸಕ ಎಚ್ ವಿ ವೆಂಕಟೇಶ್. 9 ಮತಗಳು ಪಡೆದು ಜಯಶೀಲರಾಗಿರುತ್ತಾರೆ.

ಪಾವಗಡ ಶಾಸಕ ಅವರ ಅಭಿಮಾನಿಗಳಯಿಂದ. ತುಮಕೂರಿನಲ್ಲಿರುವ ಹಾಲು ಉತ್ಪಾದಕರ ಒಕ್ಕೂಟ ಕಚೇರಿ ಮುಂದೆ ಪಟಾಕಿಯನ್ನು ಸೇರಿಸಿ ಇದೇ ಸಂತೋಷದಿಂದ ಸಂಭ್ರಮಚರಣೆ ಮಾಡಿ ಮತ್ತು ಸಿಹಿ ಹಂಚಿ ಇರುತ್ತಾರೆ ತುಮಕೂರಿನಲ್ಲಿ ಇರುವ ತುಮುಲ್ ಚುನಾವಣೆ ಅಧಿಕಾರಿ ಶಾಸಕ ವೆಂಕಟೇಶ್ ಅವರಿಗೆ ಪ್ರಮಾಣ ಪತ್ರವನ್ನು ನೀಡುತ್ತಾರೆ ಈ ಸಂದರ್ಭದಲ್ಲಿ ಭಾಗವಹಿಸಿದವರು. ಪಾವಗಡ ತಾಲೂಕಿನಲ್ಲಿರುವ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರುಗಳು ಶಾಸಕರ ಅಭಿಮಾನಿಗಳು ಉಪಸ್ಥಿತರಿದ್ದರು.
ವರದಿ: ಶಿವಾನಂದ




