Ad imageAd image

ತೋರಣಹಳ್ಳಿ ಎತ್ತಿನ ಜೋಡಿ ಭರ್ಜರಿ ಎರಡು ಸ್ಥಾನಗಳಲ್ಲಿ ಪ್ರಥಮ ಗೆಲವು.

Bharath Vaibhav
ತೋರಣಹಳ್ಳಿ ಎತ್ತಿನ ಜೋಡಿ ಭರ್ಜರಿ ಎರಡು ಸ್ಥಾನಗಳಲ್ಲಿ ಪ್ರಥಮ ಗೆಲವು.
WhatsApp Group Join Now
Telegram Group Join Now

ಚಿಕ್ಕೋಡಿ :ತಾಲೂಕಿನ ತೋರನಹಳ್ಳಿ ಗ್ರಾಮದ ತಿಪ್ಪಣ್ಣಾ ಹನುಮಂತ ಬುದಲೆ, ಮತ್ತು ಮಲಗೌಡಾ ತುಕಾರಾಮ ಪಾಟೀಲ, ಎಂಬುವ ಮಾಲೀಕರಿಗೆ ಸೇರಿರುವ ಸದೃಢ ಮೈದುಂಬಿ ಕಣ್ಣು ಕುಕ್ಕುತ್ತಿರುವ ಸುಂದರ ಎತ್ತಿನ ಜೋಡಿ ಎರಡು ಸ್ಥಾನಗಳಲ್ಲಿ ಭರ್ಜರಿ ಪ್ರಥಮ ಸ್ಥಾನ ಪಡೆದುಕೊಂಡಿವೆ.

ನಿನ್ನೆ ರಾಯಬಾಗ ತಾಲೂಕಿನ ಮೇಕಳಿ ಬೀರೇಶ್ವರ ಜಾತ್ರಾ ಮಹೋತ್ಸವದಲ್ಲಿ ಜೋಡಿ ಎತ್ತುಗಳಲ್ಲಿ ಅಷ್ಟೇ ಅಲ್ಲದೆ ಈ ಜಾತ್ರೆ ಮಹೋತ್ಸವದಲ್ಲಿ ಹಾಗೂ ರಾಜ್ಯದ ಹಲವಾರು ಎತ್ತುಗಳ ಚಾಂಪಿಯನಲ್ಲಿ ಪ್ರಥಮ ಸ್ಥಾನ ಗೆದ್ದು ಜನರು ಹುಬ್ಬೇರಿಸುವಂತೆ ಮಾಡಿವೆ.

ನಿನ್ನೆ ನಡೆದ ಚಾಂಪಿಯನ್ ಸ್ಪರ್ಧಿಯಲ್ಲಿ 8000 ರೂಪಾಯಿ ಒಂದು ಢಾಲು ಪ್ರಮಾಣ ಪತ್ರ ಮತ್ತು ಜೋಡಿ ಎತ್ತಿನ ಸ್ಪರ್ಧೆಯಲ್ಲಿ ಒಂದು ಸಾವಿರ ರೂಪಾಯಿ ಒಂದು ಢಾಲು ಪ್ರಮಾಣ ಪತ್ರ ಗೆದ್ದು ಜನರಲ್ಲಿ ಭರ್ಜರಿ ಮೆಚ್ಚುಗೆ ಸಂತೋಷ ಸಂಭ್ರಮ ಮೂಡಿಸಿವೆ.

ತೋರಣಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರ ಸಮಕ್ಷದೊಂದಿಗೆ ನಿನ್ನೆ ಸಾಯಂಕಾಲ 7:00 ಗoಟೆ ಯಿಂದ ರಾತ್ರಿ ಹತ್ತು ಗಂಟೆಯವರೆಗೆ ಎತ್ತುಗಳ ಕಾಲಿಗೆ ನೀರು ಹಾಕುತ್ತಾ ಬಸವಣ್ಣನ ಆಶೀರ್ವಾದ ಪಡೆಯುತ್ತಾ ಮೆರವಣಿಗೆ ಮಾಡಲಾಯಿತು ಸಂತೋಷದಿಂದ ಜನರು ಕುಣಿದು ಕುಪ್ಪಳಿಸಿದ ಸಂದರ್ಭ ತೋರಣಹಳ್ಳಿ ಗ್ರಾಮದ ಜನರಲ್ಲಿ ಸಂತೋಷದ ಸಂಭ್ರಮ ಬೇರೆ ಗ್ರಾಮದ ಜನರಲ್ಲಿ ಅಚ್ಚರಿ ಮೂಡಿಸಿದೆ.

ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಧಾಕರ್ ಖಾಡ, ವಿಠ್ಠಲ ಗಾಂಜಿ, ಶಿವಾಜಿ ಖಾಡ, ಶಿವಾಜಿ ನಾಗರಾಳೆ, ಶಂಕರಗೌಡ ಪಾಟೀಲ್, ಚನ್ನಪ್ಪ ಹುಂಚ್ಯಾಳೆ, ಸಂಜು ಬದುಲೆ, ಮುತ್ತು ಸನದಿ, ಸಂತೋಷ್ ಸನಲಚಪ್ಪಗೂಳ, ಮತ್ ಇತಿತರರೆಲ್ಲ ಗ್ರಾಮದ ಜನರ ಉಪಸ್ಥಿತಿಯಲ್ಲಿದ್ದು ಈ ಸಂತೋಷದ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.

ವರದಿ: ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!