ರಾಷ್ಟ್ರಪ್ರಶಸ್ತಿ ವಿಜೇತ ನಟ ರಿಷಬ್ ಶೆಟ್ಟಿ ಅವರು ನಿರ್ದೇಶಕ ಸಂದೀಪ್ ಸಿಂಗ್ ಅವರೊಂದಿಗೆ ಭಾರತದ ಶ್ರೇಷ್ಠ ರಾಜರಲ್ಲಿ ಒಬ್ಬರಾದ “ದಿ ಪ್ರೈಡ್ ಆಫ್ ಭಾರತ: ಛತ್ರಪತಿ ಶಿವಾಜಿ ಮಹಾರಾಜ್” ಸಿನಿಮಾದಲ್ಲಿ ನಟಿಸುತ್ತಿದ್ದು, ಇಂದು ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ.
ಕಾಂತಾರ ಸಿನಿಮಾದ ಮೂಲಕ ನ್ಯಾಷನಲ್ ಸ್ಟಾರ್ ಅಗಿರುವ ರಿಷಭ್ ಶೆಟ್ಟಿ ಅವರು ಇದೀಗ ಛತ್ರಪತಿ ಮಹಾರಾಜ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸದ್ಯ ಅವರು ಕಾಂತಾರ 2 (2025), ಜೈ ಹನುಮಾನ್ (2026), ಮತ್ತು ದ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್ (2027) ಬಿಡುಗಡೆ ಆಗಲಿದೆ.
ಮೇರಿ ಕೋಮ್, ಸರಬ್ಜಿತ್, ವೀರ್ ಸಾವರ್ಕರ್, ರಾಮಲೀಲಾ, ಸರಬ್ಜಿತ್, ಬಾಜಿರಾವ್ ಮಸ್ತಾನಿ, ಮತ್ತು ಕಿರುಚಿತ್ರ ಸಫೇದ್ ಮುಂತಾದ ಚಿತ್ರಗಳನ್ನು ನಿರ್ದೇಶಿಸಿರುವ ಸಂದೀಪ್ ಸಿಂಗ್ ಈ ಐತಿಹಾಸಿಕ ಮಹಾಕಾವ್ಯವನ್ನು ನಿರ್ದೇಶಿಸಲಿದ್ದಾರೆ.