ಸವಣೂರು :ನಿನ್ನೆಯ ದಿನ ಬೆಳ್ಳoಬೆಳಿಗ್ಗೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಬಳಿ ನಡೆದ ಅಪಘಾತದಲ್ಲಿ ಮರಣ ಮೃದಂಗ ಬಾರಿಸಿದ್ದು ಅದರ ಪರಿಣಾಮವಾಗಿ ಸವಣೂರಿನಲ್ಲಿ ಮೌನ ಹಾಗು ದುಃಖದ ವಾತಾವರಣ ಕವಿದಿದೆ…..
ಕುಮಟಾ ಸಂತೆಗೆಂದು ಸವಣೂರಿನ ವ್ಯಾಪಾರಸ್ಥರು ಸಂತೆಗೆ ಬೇಕಾಗುವ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುವಾಗ ಅಪಘಾತ ಸಂಭವಿಸಿದ್ದು, ಈ ದುರ್ಘಟನೆಯಲ್ಲಿ….
1) ಫಯಾಜ್ ತಂದೆ ಇಮಾಮ್ಸಾಬ್ ಜಮಖಂಡಿ 45-ವರ್ಷ
2) ವಾಸಿಮ್ ತಂದೆ ಮುಲ್ಲಾ ಮುಡಿಗೇರಿ 25- ವರ್ಷ
3) ಇಜಾಜ್ ತಂದೆ ಮುಸ್ತಾಕ್ ಮುಲ್ಲಾ 20 ವರ್ಷ
4) ಸಾದಿಕ್ ತಂದೆ ಬಾಷಾ ಪರಾಷ 30 ವರ್ಷ
5) ಗುಲಾಮ್ ಹುಸೇನ್ ತಂದೆ ಗುಡುಸಾಬ್ ಜವಳಿ
6) ಇಮ್ತಿಯಾಜ್ ತಂದೆ ಮೊಹಮ್ಮದ್ ಜಾಪರ್ ಮುಡಗೇರಿ 40 ವರ್ಷ
7) ಅಲ್ಪಾಜ್ ತಂದೆ ಜಾಪರ ಮಂಡಕಿ 25 ವರ್ಷ
8) ಜಿಲಾನಿ ತಂದೆ ಅಬ್ದುಲ್ ಗಪಾರ್ ಜಕಾತಿ 20 ವರ್ಷ
9) ಅಸ್ಲಾಂ ತಂದೆ ಬಾಬು ಬೇಣ್ಣಿ 24 ವರ್ಷ
10) ಜಲಾಲ್ ತಾರಾ 30 ವರ್ಷ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಇನ್ನುಳಿದ 15 ಜನ ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು,
ಸದ್ಯ ಸಾವನ್ನಪ್ಪಿದ ಮೃತರ ಶವ ಸಂಸ್ಕಾರವನ್ನು ಆಂಜುಮನೇ ಇಸ್ಲಾಂ ಕಮೀಟಿ ವತಿಯಿಂದ ಅಂಜುಮನ್ ಈದ್ಗಾ ಮೈದಾನದಲ್ಲಿ ಇಸ್ಲಾಂ ಧರ್ಮದ ವಿಧಿ ವಿಧಾನಗಳ ಪ್ರಕಾರ ಸಾಮೂಹಿಕ ಪ್ರಾರ್ಥನೆ ಮಾಡುವ ಮೂಲಕ ಕೆಂಪಿ ಕೆರೆ ಖಬರಸ್ಥಾನ್ ಹಾಗೂ ಅಬ್ದುಲ್ ನಭಿಷಾ ಖಬರಸ್ಥಾನ್, ಆಸ್ಸಾರ್ ಮೈದಾನ ಖಬರಸ್ಥಾನ್,ರಪಾಯಿ ಭಾಷಾ ದರ್ಗಾದ ಖಬರಸ್ಥಾನ್ ನಲ್ಲಿ ಅಂತಿಮ ಶವ ಸಂಸ್ಕಾರವನ್ನು ಮಾಡಲಾಯಿತು.

ಸವಣೂರಿನಲ್ಲಿ ನಡೆದ ಸರಣಿ ಸಾವಿನ ಪರಿಣಾಮ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇಂತಹ ಶೋಕದ ಘಟನೆ ಜರುಗಿದ ಬೆನ್ನಲ್ಲೇ ಸಂತ್ರಸ್ತರ ಕುಟುಂಬಗಳಿಗೆ ನೂತನ ಶಾಸಕರಾದ ಪಠಾಣ್ ಯಾಸಿರ್ ಅಹಮದ್ ಖಾನ್ ಘಟನೆಯಲ್ಲಿ ಸಾವನ್ನಪ್ಪಿದ್ದ ಪ್ರತಿಯೊಂದು ಕುಟುಂಬಸ್ಥರಿಗೆ ಭೇಟಿ ನೀಡಿ ಮಾತನಾಡಿ ರಾಜ್ಯ ಸರ್ಕಾರದಿಂದ ತಲಾ ಮೂರು ಲಕ್ಷ ರೂಪಾಯಿ ಚೆಕ್ಕನ್ನು ವಿತರಣೆ ಮಾಡಿ ಇನ್ನು ಹೆಚ್ಚಿನ ಪರಿಹಾರವನ್ನು ನೀಡುವುದಾಗಿ ಭರವಸೆಯನ್ನು ನೀಡಿ ಮೃತರ ಕುಟುಂಬಕ್ಕೆ ಧೈರ್ಯವನ್ನು ತುಂಬಿ ಹಾಗೂ ಸಮಾಧಾನವನ್ನು ಹೇಳಿದರು…
ಹಾಗೂ ಕೇಂದ್ರ ಸರ್ಕಾರದಿಂದ ತಲಾ ಎರಡು ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ನೀಡಲು ಸರ್ಕಾರ ಮುಂದಾಗಿದೆ.
ಈ ಅಂತಿಮ ಶವಯಾತ್ರೆಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದು ಅದೇ ರೀತಿ ಮಾನ್ಯ ಮಾಜಿ ಶಾಸಕರಾದ ಹಾಗೂ ಹೆಸ್ಕಾಂ ಅಧ್ಯಕ್ಷರಾದ ಅಜ್ಜಂಪೀರ್ ಎಸ್ ಖಾದ್ರಿಯವರು ಘಟನೆಯಲ್ಲಿ ಸಾವನ್ನಪ್ಪಿದ್ದ ಪ್ರತಿಯೊಂದ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳುವ ಮುಖಾಂತರ ಇನ್ನು ಹೆಚ್ಚಿನ ಸಹಾಯವನ್ನು ಮಾಡುವ ಭರವಸೆಯನ್ನು ಕೊಟ್ಟರು ಹಾಗೂ ಧೈರ್ಯ ತುಂಬುವ ಕೆಲಸವನ್ನು ಮಾಡಿದರು….

ಅದೇ ರೀತಿಯಾಗಿ ಉಪಸಭಾಪತಿಗಳಾದ ರುದ್ರಪ್ಪ ಲಮಾಣಿ,ಸಂಜೀವ ನಿರಲಗಿ ಹಾಗೂ ಅಂಜುಮನ್ ಕಮೀಟಿಯ ಅಧ್ಯಕ್ಷರಾದ ಜೀಶಾಂಖಾನ್ ಪಠಾಣ್ ಹಾಗು ಜಿಲ್ಲಾಧಿಕಾರಿಗಳು ಹೀಗೆ ಇನ್ನೂ ಅನೇಕ ಅಧಿಕಾರಿಗಳು ಜನಪ್ರತಿನಿಧಿಗಳು ಭಾಗವಹಿಸಿದ್ದರು….
ವರದಿ : ನಾಗರಾಜ ವನಳ್ಳಿ




