ಶಹಪುರ: ಶಹಪುರ ನಗರದ ವಾರ್ಡ್ ನಂಬರ್ 2ರಲ್ಲಿ ಬರುವ ಬಾಪುಗೌಡ ನಗರದ ಐಡಿಎಸ್ ಎಂ ಟಿ ಲೇಔಟ್ ನಲ್ಲಿ ನಾಲ ತಡೆಗೋಡೆಗೆ ಒಂದು ಕೋಟಿ ರೂಪಾಯಿ ಚರಂಡಿ ಕಾಮಗಾರಿಗೆ 50 ಲಕ್ಷ ರೂಪಾಯಿ ಮಂಜುರಾಗಿದ್ದು ಕಾಮಗಾರಿಯ ಶಂಕುಸ್ಥಾಪನೆಯನ್ನು ಮಾನ್ಯ ಶರಣಬಸಪ್ಪಗೌಡ ದರ್ಶನಾಪುರ್ ಸಣ್ಣ ಕೈಗಾರಿಕೆ ಸಾರ್ವಜನಿಕ ಉದ್ದಿಮೆ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರು ನೆರವೇರಿಸಿದರು ಮುಂದುವರಿದ ಮಾತಾಡಿದ ಅವರು ಅಪಘಾತಗಳು ಜಾಸ್ತಿ ಆಗುತ್ತಿರುವುದರಿಂದ ಶಹಾಪುರದಿಂದ ಭೀಮರಾಯನಗುಡಿಯವರಿಗೆ ರೋಡ್ ರಸ್ತೆ ಅಗಲೀಕರಣ ಮತ್ತು ಕೊಳೂರು ಅಗಸೆಯಿಂದ ಚಾಂದ್ ಪ್ಯಾಲೇಸ್ ಅವರಿಗೆ1:50 ಕೋಟಿ ಕೆಕೆಆರ್ಡಿಬಿ ಅನುದಾನದಲ್ಲಿ ಚರಂಡಿ ವ್ಯವಸ್ಥೆ ಮಂಜೂರಾಗಿದ್ದು ಕೂಡಲೆ ಕಾಮಗಾರಿ ಪ್ರಾರಂಭ ಮಾಡಲಾಗುವುದು 75 ಲಕ್ಷ ವೆಚ್ಚದಲ್ಲಿ ಓಪನ್ ಜಿಮ್ ವ್ಯವಸ್ಥೆಯನ್ನು ಮಂಜುರಾಗಿದೆ ಅದೇ ರೀತಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ದಿಗ್ಗಿ ಕಮನ್ ನಿಂದ ಸಂಗಮೇಶ್ವರ ದೇವಸ್ಥಾನದವರೆಗೆ 5 ಮೀಟರ್ ರಸ್ತೆ ಅಗಲೀಕರಣ ಮಂಜೂರಾತಿ ದೊರಕಿದೆ ಇದೆ ಸಂದರ್ಭದಲ್ಲಿ ಕೆಲವು ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಿದರು ಮತ್ತು ಅಂಗವಿಕಲರಿಗೆ ತ್ರಿವಾನ ಚಕ್ರ ವಿತರಿಸಿದರು ಶಹಾಪುರ ನಗರ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ತಿಳಿಸಿದರು ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಮಹೆರನಿಸ ಬೇಗಂ ಲೇಯಖಾತ್ ನಗರ ಆಶ್ರಯ ಸಮಿತಿ ಅಧ್ಯಕ್ಷರದ ವಸಂತ ಸುರುಪುರಕರ್ ವಾರ್ಡಿನ ಸದಸ್ಯರಾದ ಶಿವಕುಮಾರ್ ತಳವಾರ್ ಅಮಲಪ್ಪ ದ್ಯಾವಪುರ್ ಬಸವರಾಜ್ ಚನ್ನೂರ್ ಪೌರಾಯುಕ್ತರಾದ ರಮೇಶ್ ಬಡಿಗೇರ್ ಎಇಇ ನಾನಾಸಾಬ್ ಮಡಿವಾಳಕರ್ ಮುಖಂಡರಾದ ಮಾದೇವಪ್ಪ ಸಾಲಿಮನಿ ದೇವಪ್ಪ ದೇವರ ಗೋನಲ್ ಭೀಮರಾಯ ಕದ್ರಾಪುರ್ ಹನುಮಂತರಾಯ ಗೌಡ ರಾಕಂಗೆರ ರವಿಚಂದ್ರ ಎದುರಮನಿ ಮುಸ್ತಪ್ಪ ದರ್ಬನ್ ಅನೇಕ ಮುಖಂಡರು ನಗರಸಭೆ ಸಿಬ್ಬಂದಿ ವರ್ಗ ಇದ್ದರು