ಚಾಮರಾಜನಗರ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾ ಪ್ರತಿನಿಧಿಗಳ ಸಭೆಯನ್ನ ನಗರದ ಜೆ.ಕೆ.ಫಂಕ್ಷನ್ ಹಾಲ್ ನಲ್ಲಿ ಆಯೋಜಿಸಲಾಗಿದ್ದು
ಜಿಲ್ಲಾಧ್ಯಕ್ಷರಾದ ಅಬ್ರಾರ್ ಅಹಮದ್ ರವರು ಧ್ವಜಾರೋಹಣ ನೆರವೇರಿಸಿದರು
ನಂತರ ಚುನಾವಣಾ ಅಧಿಕಾರಿಗಳಾಗಿ ಆಗಮಿಸಿದ್ದ ರಾಜ್ಯ ಕಾರ್ಯದರ್ಶಿ ಅಕ್ರಂ ಮೌಲನಾ ಹಾಗೂ ಸಹಾಯಕ ಚುನಾವಣಾ ಅಧಿಕಾರಿ ರಾಜ್ಯ ಕಾರ್ಯದರ್ಶಿ ಅಂಗಡಿ ಚಂದ್ರು ಪಕ್ಷದ ಆಂತರಿಕ ಚುನಾವಣೆ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಪಕ್ಷದ ನೂತನ ಜಿಲ್ಲಾ ಅಧ್ಯಕ್ಷರಾಗಿ ಕಲೀಲ್ ಉಲ್ಲಾ,ಉಪಾಧ್ಯಕ್ಷರಾಗಿ ಶ್ರೀಮತಿ ವಹೀದಾ ಖಾನಂ ಹಾಗೂ ಸಿ.ಕೆ. ನಯಾಜ್ ಉಲ್ಲಾ,ಪ್ರಧಾನ ಕಾರ್ಯದರ್ಶಿಯಾಗಿ ಮಹೇಶ್ ,ಸಂಘಟನಾ ಕಾರ್ಯದರ್ಶಿಯಾಗಿ ನಸ್ರುಲ್ಲಾ ಖಾನ್,ಕಾರ್ಯದರ್ಶಿಯಾಗಿ ಸುಹೇಲ್ ಪಾಷ ಹಾಗೂ ಜಬೀನೂರ್ ಖಜಾಂಚಿಯಾಗಿ ಸೈಯದ್ ಇರ್ಫಾನ್ ಆಯ್ಕೆ ಯಾದರು.
ಜಿಲ್ಲಾ ಸಮಿತಿ ಸದಸ್ಯರಾಗಿ ಸೈಯದ್ ಆರೀಫ್ ಸಿ.ಎಸ್,ಉಮರ್ ಫಾರೂಕ್ ಹಾಗೂ ಇಮ್ರಾನ್ ಗುಂಡ್ಲುಪೇಟೆ ಆಯ್ಕೆಯಾದರು
ವರದಿ :ಸ್ವಾಮಿ ಬಳೇಪೇಟೆ




