ನಿಪ್ಪಾಣಿ : ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಜಯಂತಿಯ ಅಂಗವಾಗಿ ನಿಪ್ಪಾಣಿ ತಾಲೂಕಿನ ಬೇಡಕಿಹಾಳದ ಗ್ರಾಮ ದೇವತೆ ಸಿದ್ದೇಶ್ವರ ದೇವಾಲಯ ಹಾಗೂ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಾಡಸಿದ್ದೇಶ್ವರ ತೋಟ , ನೇಜ ಶಾಲೆಯ ಆವರಣ ಶುಚಿಗೊಳಿಸುವ ಜೊತೆಗೆ ತಡೆಗೋಡೆ ಪಕ್ಕದಲ್ಲಿರುವ ತ್ಯಾಜ್ಯ ವಸ್ತುಗಳನ್ನು ಹೊರ ಹಾಕಿ ವಿಲೇವಾರಿ ಮಾಡಲಾಯಿತು

*ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸಂತೋಷ ಮಗದುಮ್ಮ ಹಾಗೂ ಸಹ ಶಿಕ್ಷಕರಾದ ಶ್ರೀ ಸಂತೋಷ ಹುನಸೆ ಸರ್ ಹಾಗೂ ಮುದ್ದು ಮಕ್ಕಳು ಆದರಪೂರ್ವಕವಾಗಿ ಶಾಲೆಗೆ ಬರಮಾಡಿಕೊಂಡು ಗೌರವಿಸಿದರು , ಸುಕ್ಷೇತ್ರ ಧರ್ಮಸ್ಥಳ ಹಾಗೂ ಪೂಜ್ಯರ ಕಾರ್ಯದ ಬಗ್ಗೆ ಮಾಹಿತಿ ನೀಡಿದರು , ತದನಂತರ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣೆ ಘಟಕದ ಸಕಲ ಸ್ವಯಂಸೇವಕರು ಶ್ರಮದಾನ ಸೇವೆಯನ್ನು ಸಲ್ಲಿಸಿದರು.

ಸುಮಾರು ಮೂರು – ನಾಲ್ಕು ಗಂಟೆ ನಿರ್ವಹಿಸಿದ ನಿರಪೇಕ್ಷ , ಪಾರದರ್ಶಕ ಸೇವೆಯನ್ನು ಮೆಚ್ಚಿ ಶಾಲಾ ಮುಖ್ಯೋಪಾಧ್ಯಾಯ , ಸಹ ಶಿಕ್ಷಕರು 26 ಜನವರಿ ಗಣರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಮ್ಮ ಶೌರ್ಯ ತಂಡಕ್ಕೆ ಕರೆ ನೀಡಿದರು. ಈ ಸಂದರ್ಭದಲ್ಲಿ ಬಾಳಾಸಾಹೇಬ ಶಿಂಧೆ ನೇತೃತ್ವದಲ್ಲಿ ರಾಜು,ಸಂತೋಷ, ಕುಮಾರ ಪ್ರಕಾಶ್ ಅಕ್ಷಯ ಸಂದೀಪ ವಿಠ್ಠಲ,ರಾಜು,ಸುರೇಶ್ ಬಜರಂಗ ರಾಮಾ ಹಾಗೂ ಪರುಶುರಾಮ ಸ್ವಯಂ ಸೇವಕರು ವಿಶೇಷ ಶ್ರಮ ವಹಿಸಿದರು.ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಶ್ರೀ ಪ್ರಕಾಶ ಮಾಳಿ ವಂದಿಸಿದರು.
ವರದಿ: ಮಹಾವೀರ ಚಿಂಚಣೆ




