Ad imageAd image

ಹಟ್ಟಿ ಕೇಂದ್ರೀಯ ವಿದ್ಯಾಲಯದಲ್ಲಿ ನಡೆದ : ಪರೀಕ್ಷಾ ಪೆ ಚರ್ಚಾ

Bharath Vaibhav
ಹಟ್ಟಿ ಕೇಂದ್ರೀಯ ವಿದ್ಯಾಲಯದಲ್ಲಿ ನಡೆದ : ಪರೀಕ್ಷಾ ಪೆ ಚರ್ಚಾ
WhatsApp Group Join Now
Telegram Group Join Now

ಹಟ್ಟಿ ಚಿನ್ನದ ಗಣಿ : ಕೇಂದ್ರೀಯ ವಿದ್ಯಾಲಯದಲ್ಲಿ ಭಾರತದ ಕೇಂದ್ರ ಸರಕಾರ ಮತ್ತು ಕೇಂದ್ರ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ನಮ್ಮ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪ್ರಚಲಿತ ಕಾರ್ಯಕ್ರಮವಾದ “ಪರೀಕ್ಷಾ ಪೆ ಚರ್ಚಾ” ಅಂಗವಾಗಿ ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, “ಭಾರತ್ ಹೈ ಹಮ್” ಎಂಬ ವಿಷಯಾಧಾರಿತ ಹಲವಾರು ಸ್ವಾತಂತ್ರ್ಯ ಹೋರಾಟಗಾರರು, ಭಾರತದ ಇತಿಹಾಸ ಮುಂತಾದ ವಿಡಿಯೋಗಳನ್ನು ತೋರಿಸಿ, ತದನಂತರ ಬಹುಆಯ್ಕೆಯ ಪ್ರಶ್ನೆಗಳ ಕ್ವಿಜ್ ಏರ್ಪಡಿಸಲಾಗಿತ್ತು.
ಸತತ ಎರಡು ವರ್ಷಗಳಿಂದ ಈ ಕಾರ್ಯಕ್ರಮದ ಆಯೋಜನೆ ಮಾಡಲಾಗುತ್ತಿದ್ದು, ಈ  ಕ್ವಿಜ್ ನಲ್ಲಿ
ರಾಯಚೂರು ಜಿಲ್ಲಾದ್ಯಂತ ವಿವಿಧ ಶಾಲೆಗಳಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಆಗಮಿಸಿದ್ದರು. ತುಂಬು ಉತ್ಸಾಹದಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಟ್ಟಿ, ಶ್ರೀ ವಿನಾಯಕ ವಿದ್ಯಾ ಸಂಸ್ಥೆ, ಸಂತ ಅನ್ನಮ್ಮ ಪ್ರೌಢಶಾಲೆ, ಮಸ್ಕಿ ಅಬ್ದುಲ್ಲಾ ಮೆಮೋರಿಯಲ್ ಶಾಲೆ, ಎಸ್.ಬಿ.ಪಬ್ಲಿಕ್ ಸ್ಕೂಲ್ ಕೇಂದ್ರೀಯ ವಿದ್ಯಾಲಯ ರಾಯಚೂರು, ಜೆ ಎನ್ ವಿ ಶಾಲೆ ಹಾಗೂ ಕೇಂದ್ರೀಯ ವಿದ್ಯಾಲಯ ಹಟ್ಟಿ, ಶಾಲೆಗಳ 117 ಮಕ್ಕಳು ಭಾಗವಹಿಸಿದ್ದರು. ಈ ಕ್ವಿಜ್ ಕಾರ್ಯಕ್ರಮದಲ್ಲಿ ತನ್ವಿ ಪಿ.ಎಂ. ಕೇಂದ್ರೀಯ ವಿದ್ಯಾಲಯ ರಾಯಚೂರು ಪ್ರಥಮ ಸ್ಥಾನ, ಪ್ರೀತಂ ಗೌಡ ಕೆ ವಿ ರಾಯಚೂರು ದ್ವಿತೀಯ ಸ್ಥಾನ ಹಾಗೂ ಶ್ರೇಯಸ್ ಜೇ.ಎನ್.ವಿ. ರಾಯಚೂರು ತೃತೀಯ ಸ್ಥಾನವನ್ನು ಗೆದ್ದು ಬಹುಮಾನ ಸ್ವೀಕರಿಸಿದರು. ಈ ಕಾರ್ಯಕ್ರಮದ ತೀರ್ಪುಗಾರರಾಗಿ ಶ್ರೀಮತಿ ಆರೋಗ್ಯ ಮೇರಿ ಸರಕಾರಿ ಪದವಿಪೂರ್ವ ಕಾಲೇಜ್ ಪ್ರೌಢಶಾಲೆ ವಿಭಾಗ , ರಮೇಶ್ ಅಧಿಕಾರಿಗಳು ಹಟ್ಟಿ ಚಿನ್ನದ ಗಣಿ ಮತ್ತು ಎಂ.ಡಿ . ಶೇಹಾನವಾಜ್ ಸರಕಾರಿ ಪದವಿ ಪೂರ್ವ ಕಾಲೇಜ್ ಇವರು ತಮ್ಮ ತೀರ್ಪು ನೀಡಿದರು.
ಕಾರ್ಯಕ್ರಮ ಯಶಸ್ವಿಯಾಗಿ ಆಯೋಜಿಸಿದ್ದ ಕೆ.ವಿ. ಶಾಲೆಯ ಪ್ರಭಾರಿ ಪ್ರಾಚಾರ್ಯರಾದ ಶ್ರೀ.ತುಳಚಾರಾಮ್ ಹಾಗೂ ಸಿಬ್ಬಂದಿ ವರ್ಗ ಮಕ್ಕಳ ಏಳಿಗೆ ಹೀಗೆ ಸಾಗುತ್ತಿರಲಿ ಎಂದು ಆಶಯ ವ್ಯಕ್ತಪಡಿಸಿದರು ಈ ಸಂದರ್ಭದಲ್ಲಿ ಕೇಂದ್ರೀಯ ವಿದ್ಯಾಲಯದ ಎಲ್ಲಾ ಶಿಕ್ಷಕರು ಮತ್ತು ವಿವಿಧ ಶಾಲೆಯ ಶಿಕ್ಷಕರು ಉಪಸಿತರಿದ್ದರು

 

ವರದಿ : ಶ್ರೀನಿವಾಸ ಮಧುಶ್ರೀ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!