ಮುದಗಲ್ : ತೃತೀಯ ಮಂತ್ರಾಲಯ ವೆಂದು ಕರೆಯಲ್ಪುವ ಮುದಗಲ್ ನ ಗುರು ರಾಘವೇಂದ್ರ ಸ್ವಾಮಿಗಳ ಮಠದ ಟ್ರಸ್ಟ ನ ಅಡಿಯಲ್ಲಿ ಸೇವಾ ಮನೋಭಾವನೆಯಿಂದ ಸ್ಥಾಪಿಸಲ್ಪಟ್ಟ ಪರಿಮಳ ಗುರುಕುಲ ಹಿರಿಯ ಪ್ರಾಥಮಿಕ ಶಾಲೆಯ ೭ನೇ ವಾರ್ಷಿಕೋತ್ಸವವನ್ನು ಶನಿವಾರ ಹಮ್ಮಿಕೊಳ್ಳಲಾಗಿದೆ ಎಂದು ಮ್ಯಾನೇಜಿಂಗ್ ಟ್ರಸ್ಟಿ ನಾರಾಯಣರಾವ್ ದೇಶಪಾಂಡೆ ಹೇಳಿದರು.
ಅವರು ಪಟ್ಟಣದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಸ್ಥೆಯು ೨೦೧೮-೧೯ರಲ್ಲಿ ಆರಂಭಗೊAಡು ಇಂದು ೭ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳಲಿದೆ. ಸಂಸ್ಥೆಯು ಯುರೋ ಕಿಡ್ಸ್ ಸಂಸ್ಥೆಯೊAದಿಗೆ ಒಡಂಬಡಿಕೆ ಮೂಲಕ ಆರಂಭ ಗೊಂಡಿದ್ದರಿAದ ಪ್ರತಿ ವರ್ಷವೂ ಒಂದು ದಿಕ್ಸೂಚಿಯತ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ಈ ಬಾರಿ ಡಾನ್ಸ್ ಟು ಇವರ ಬೀಟ್ ಎನ್ನುವ ಉದ್ದೇಶದೊಂದಿಗೆ ಮಕ್ಕಳಲ್ಲಿಯ ಕಲೆ, ಉತ್ಸಾಹದ ಮೂಲಕ ಶೈಕ್ಷಣಿಕವಾಗಿ ಹುರಿದುಂಬಿಸುವ ಕಾರ್ಯ ಇದಾಗಿದೆ. ಸಂಸ್ಥೆಯಲ್ಲಿ ಪಾಶ್ಚಿಮಾತ್ಯ ಚಟುವಟಿಕೆಗಳಿಗೆ ಮಕ್ಕಳು ಮಾರು ಹೋಗದಂತೆ ದೇಶ ಭಕ್ತಿ, ಭಕ್ತಿ, ರಾಜನೀತಿ, ಹಿರಿಯರಿಗೆ ಗೌರವಿಸುವಂತಹ ಚಟುವಟಿಕೆಗಳಿಗೆ ಸಂಪೂರ್ಣವಾಗಿ ಆದ್ಯತೆ ನೀಡಲಾಗಿದೆ.
ಹೊಸದಾಗಿ ಕೇರಳ ರಾಜ್ಯದ ಉತ್ತಮ ಆರೋಗ್ಯದ ಚಟುವಟಿಕೆಗಳಿಗೆ ಮುಂದಿನ ದಿನಮಾನಗಳಲ್ಲಿ ಶೈಕ್ಷಣಿಕವಾಗಿ ಅಳವಡಿಸಿ ಕೊಳ್ಳುವದಕ್ಕಾಗಿ ಇಂದಿನ ಕಾರ್ಯಕ್ರಮದಲ್ಲಿ ಇಂಡಿಯನ್ ಮರ್ಷಿಯಲ್ ರ್ಟ್÷್ಸ ಕಲಾಯಿ ಪಯಟ್ಟು ಮತ್ತು ೬೪ನೇ ಮಾಸ್ಟರ್ ಚೆಸ್ ಅಳವಡಿಸುವದಕ್ಕಾಗಿ ಆಯೋಜಿಸಿದ್ದೇವೆ.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವೀರಶೈವ ವಿದ್ಯಾವರ್ಥಕ ಸಂಘದ ಅಧ್ಯಕ್ಷ ಬಸವಂತರಾಯ ಕುರಿ, ಸಂಸ್ಥೆಯ ನಿರ್ದೆಶಕರಾದ ನರಸಿಂಗರಾವ್ ದೇಶಪಾಂಡೆ, ಡಾ: ಗುರುರಾಜ ದೇಶಪಾಂಡೆ, ಉದ್ಯಮಿ ಅನಂತ ದೇಶಪಾಂಡೆ ಮತ್ತು ವೆಂಕಟೇಶ ಕುಲಕರ್ಣಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಈ ಸಮಯದಲ್ಲಿ ಟ್ರಸ್ಟಿ ವೆಂಕಟೇಶ ಕುಲಕರ್ಣಿ ಇದ್ದರು.
ವರದಿ:- ಮಂಜುನಾಥ ಕುಂಬಾರ




