ರಾಯಚೂರು: ಅತ್ಯಧಿನಿಕ ಸೇವೆ ಓಪೆಕ ಆಸ್ಪತ್ರೆ ಸಿದ್ಧಗೊಳಿಸಿದ್ದು ಹೊರ ಮತ್ತು ಒಳರೋಗಿಗಳ ಸಂಖ್ಯೆ ಹೆಚ್ಚಾಗಿದೆ ಶೀಘ್ರದಲ್ಲೇ ಟ್ರಾಮ್ ಕ್ಯಾನ್ಸರ್ ಚಿಕಿತ್ಸೆ ಒದಗಿಸಲು ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾಕ್ಟರ್ ಶರಣ ಪ್ರಕಾಶ್ ಪಾಟೀಲ್ ಹೇಳಿದರು.
ಅವರಿಂದು ಮಾಧ್ಯಮಗಳೊಂದಿಗೆ ಮಾತನಾಡಿ ಅತ್ಯಧಿನಿಕ ಸೇವೆಗೆ ಒದಗಿಸಲು ಬೇಕಾದ ಎಲ್ಲಾ ಹಣಕಾಸು ಹಾಗೂ ಇತರೆ ಸೌಲಭ್ಯ ಹಂತ ಹಂತದಲ್ಲಿ ಚಿಕಿತ್ಸಾ ವ್ಯವಸ್ಥೆ ಬಲಗೊಳಿಸಲಾಗುತ್ತದೆ
ಕಳೆದ ಬಾರಿ ನಡೆದ ಸಭೆಯಲ್ಲಿ ನೀಡಲಾಗಿದ್ದ ಗುರಿಯನ್ನು ತಲುಪಿಸಲಾಗಿದೆ ಇನ್ನಷ್ಟು ಕಾಮಗಾರಿ ಯಂತ್ರೋಪಕರಣ ಸಿಬ್ಬಂದಿ ನೇಮಕಾತಿ ನಡೆಯಬೇಕಿದೆ ಆರ್ಥಿಕ ಇಲಾಖೆಯ ಅನುಮತಿಯ ಹಾಗೂ ಸ್ಥಳೀಯವಾಗಿಯೇ ನೇಮಕಾತಿ ಮಾಡುವ ಅವಕಾಶಗಳನ್ನು ಬಳಸಿಕೊಂಡು ಗುಣಮಟ್ಟದ ಸೇವೆ ಒದಗಿಸಲು ಕ್ರಮ ವಹಿಸಿರುವುದಾಗಿ ಹೇಳಿದರು ಓಪೆಕ್ ಆಸ್ಪತ್ರೆಯನ್ನು ಏಕಾಏಕಿ. ಸ್ವಯತ್ತಾ ಸಂಸ್ಥೆಯಾಗಿ ನಿರ್ವಹಿಸಲು ಕಷ್ಟ ಸಾಧ್ಯವಾಗಿರುವುದರಿಂದ ಪ್ರತ್ಯೇಕ ಅಕೌಂಟ್ ಮೂಲಕ ನಿರ್ವಹಣೆ ಮಾಡಲಾಗುತ್ತಿದೆ. ಎಲ್ಲಾ ಸೇವೆಗಳು ಕಾರ್ಯ ಆರಂಭದ ನಂತರ ಸ್ವಯತ್ತ ಸಂಸ್ಥೆ ಮಾಡುವ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ರಾಯಚೂರು ಗ್ರಾಮಾಂತರ ಶಾಸಕ ಬಸನಗೌಡ ದದ್ದಲ್ ಎ ವಸಂತ್ ಕುಮಾರ್ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
ವರದಿ: ಗಾರಲದಿನ್ನಿ ವೀರನಗೌಡ




