ಬೆಳಗಾವಿ : ವಿದ್ಯಾರ್ಥಿನಿಯೋರ್ವಳಿಗೆ ಅತಿಥಿ ಶಿಕ್ಷಕ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದ್ದು, ವಿಷಯ ತಿಳಿದ ಪೋಷಕರು ಹಾಗೂ ಸಾರ್ವಜನಿಕರು ಕಾಲೇಜಿಗೆ ನುಗ್ಗಿ ಶಿಕ್ಷಕನಿಗೆ ಧರ್ಮದೇಟು ಕೊಟ್ಟಿರುವ ಘಟನೆ ಚಿಕ್ಕೋಡಿ ಪಟ್ಟಣದಲ್ಲಿ ಇಂದು ನಡೆದಿದೆ.
ಪಟ್ಟಣದ ಆರ್.ಡಿ ಮಹಾವಿದ್ಯಾಲಯದ ಶಿಕ್ಷಕ ರಾಹುಲ್ ಓತಾರೆ ವಿರುದ್ಧ ಲೈಂಗಿಕ ಕಿರುಕುಳ ಆಪಾದನೆ ಕೇಳಿ ಬಂದಿದ್ದು, ಕಾಲೇಜಿನಲಿದ್ದ ವಿದ್ಯಾರ್ಥಿನಿಯ ಜೊತೆ ಅಸಭ್ಯವಾಗಿ ವರ್ತಿಸಿದ್ದನಂತೆ. ಈ ಬಗ್ಗೆ ವಿದ್ಯಾರ್ಥಿನಿ ತನ್ನ ಪೋಷಕರಿಗೆ ವಿಷಯ ತಲುಪಿಸಿದ ಬೆನ್ನಲ್ಲೇ ಕಾಲೇಜಿಗೆ ಬಂದ ಹಲವು ಪೋಷಕರು ಹಾಗೂ ಸಾರ್ವಜನಿಕರು ರಾಹುಲ್ನನ್ನು ಥಳಿಸಿದ್ದಾರೆ.
ಸದ್ಯ ಕಾಮುಕ ಶಿಕ್ಷಕನನ್ನು ಕಾಲೇಜು ಆಡಳಿತ ಮಂಡಳಿ ಕರ್ತವ್ಯದಿಂದ ವಜಾಗೊಳಿಸಿದೆ. ಇನ್ನು ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಕಾಮುಕನನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.




