ಜೊಯಿಡಾ: ತಾಲೂಕಿನ ಉಳವಿ ಜಾತ್ರಾ ಮಹೋತ್ಸವ ಪೂರ್ವ ಸಿದ್ಧತಾ ಸಭೆ ತಹಶಿಲ್ದಾರ ಮಂಜುನಾಥ ಮುನ್ನಳ್ಳಿ ಅಧ್ಯಕ್ಷತೆಯಲ್ಲಿ ಉಳಿಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ತಹಶಿಲ್ದಾರ ಮಂಜುನಾಥ ಮುನ್ನಳ್ಳಿ ಮಾತನಾಡಿ ಸಹಾಯಕ ಕಮಿಷನರ್ ಕಾರವಾರರವರು ಈಗಾಗಲೇ ಕಾರವಾರದಲ್ಲಿ ಸಭೆಮಾಡಿ ಜಾತ್ರೆಗೆ ಯಾವುದೇ ತೊಂದರೆಯಾಗದಂತೆ ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಹೇಳಿದ್ದಾರೆ. ಜಾತ್ರಾ ಸಮಯದಲ್ಲಿ ಸರಾಯಿ ನಿಷೇಧ ಮಾಡಲಾಗಿದೆ. ಎತ್ತಿನ ಗಾಡಿಗಳಿಗೆ ಕಡ್ಡಾಯವಾಗಿ ರೇಡಿಯಮ್ ಹಾಕಬೇಕು, ಯಾವುದೇ ಅಹಿತಕರ ಘಟನೆ ಆಗದಂತೆ ಎಚ್ಚರಿಕೆ ವಹಿಸಿ ಯಶಸ್ವಿಗೊಳಿಸಬೇಕೆಂದು ಹೇಳಿದರು.

ಸಿ.ಪಿ.ಐ ಚಂದ್ರಶೇಖರ ಹರಿಹರ ಮಾತನಾಡಿ ಪಾರ್ಕಿಂಗ್ ನೀಯಮ ಎಲ್ಲರೂ ಪಾಲಿಸಬೇಕು. ರಸ್ತೆ ಮೇಲೆ ಟೆಂಟ ಹಾಕಬಾರದು. ಕೆರೆಗಳಲ್ಲಿ ಎತ್ತುಗಳ ಮೈ ತೊಳೆಯಬಾರದು. ಕುದುರೆ ಗಾಡಿ ಅವಕಾಶ ಇಲ್ಲ. ದ್ವಿಚಕ್ರ ವಾಹನ ಸವಾರ ಕಡ್ಡಾಯವಾಗಿ ಹೆಲ್ಲೆಟ ಧರಿಸಬೇಕು. ಕುಡಿದು ವಾಹನ ಚಾಲನೆ ಮಾಡುವವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಎತ್ತಿನ ಗಾಡಿಗಳಿಗೆ ಬರುವಾಗ ಮಧ್ಯೆ ಕುಡಿಯುವ ನೀರು ವ್ಯವಸ್ಥೆ ಮಾಡಬೇಕು. ಕಂಡಾಕುಂಡಿ, ಹೆಣಕೊಳ್ ಕ್ರಾಸ್, ಕಾನೇರಿ ನದಿಯಲ್ಲಿ ನೀರು ನಿಲ್ಲಿಸಿ ಕುಡಿಯುವ ನೀರು ವ್ಯವಸ್ಥೆ ಮಾಡಬೇಕೆಂದು ತಹಶಿಲ್ದಾರ ಹೇಳಿದರು.
ಶಿವಪೂರ್ ರಸ್ತೆ ರಿಪೇರಿ ಮಾಡುವಂತೆ ಮುಖಂಡ ಗೋಪಾಲ್ ಭಟ್ ಅಗ್ರಹಿಸಿದರು. ಕ್ರಮ ವಹಿಸುವುದಾಗಿ ಲೋಕೋಪಯೋಗಿ ಇಲಾಖೆ ಅಧಿಕಾರಿ ಶಿವಪ್ರಕಾಶ್ ಶೇಟ್ ಹೇಳಿದರು.
ಶಿವಪೂರ್ ತೂಗು ಸೇತುವೆ ಮೇಲೆ ಮಿತಿ ಮೀರಿ ಜನರು ಬರುತ್ತಿದ್ದಾರೆ. ಪೊಲೀಸರನ್ನು ನೇಮಿಸಿ ನಿಯಂತ್ರಣ ಮಾಡಬೇಕೆಂದು ನಿರ್ಧರಿಸಲಾಯಿತು.
ಜೊಯಿಡಾ ಕೇಂದ್ರದಲ್ಲಿ 108 ವಾಹನ ಇಲ್ಲ.
ಜೊಯಿಡಾ ಮಾರ್ಗವಾಗಿ ಉಳವಿಗೆ ಹೆಚ್ಚಿನ ವಾಹನ ಸಂಚಾರ ಮಾಡುತ್ತಿದೆ. ಹೀಗಾಗಿ ದುರ್ಘಟನೆಗಳು ನಡೆಯುವುದು ಸಾಮಾನ್ಯ. ಆದರೆ ತಾಲೂಕು ಕೇಂದ್ರದಲ್ಲಿ ಇರುವ 108 ವಾಹನ ಉಪಯೋಗ ಬಾರದೇ ಜನರಿಗೆ ಸಂಕಷ್ಟ ಎದುರಾಗಿದೆ.
1962 ಅಂಬ್ಯುಲೆನ್ಸ್ ಸೇವೆ ಅಗತ್ಯ.
ಪಶುಸಂಗೋಪನೆ ಇಲಾಖೆ 1962 ಅಂಬ್ಯುಲೆನ್ಸ್ ವಾಹನ ಇದೆ. ಆದರೆ ಬೆಳಿಗ್ಗೆ 9 ರಿಂದ ಸಂಜೆ 5 ತನಕ ಅಷ್ಟೇ ಕರ್ತವ್ಯದಲ್ಲಿ ಇರುತ್ತದೆ. ಆದರೆ ರಾತ್ರಿ ಎತ್ತಿ ಗಾಡಿ ಸಂಚರಿಸುತ್ತಿದ್ದರಿಂದ 24*7 ಸಹಾಯವಾಣಿ ಅಂಬ್ಯುಲೆನ್ಸ್ ಲಭ್ಯವಾಗಬೇಕು. ಮೇಲಾಧಿಕಾರಿಗಳಿಗೆ ಸಂಪರ್ಕಿಸಿ ಅನುಕೂಲ ಮಾಡುವುದಾಗಿ ತಹಶಿಲ್ದಾರ ಮಂಜುನಾಥ ಮುನ್ನಳ್ಳಿ ಹೇಳಿದರು.
ಕಾವಿಧಾರಿ ಮಠಾಧೀಶರಿಗೆ ಆಮಂತ್ರಣ ಇಲ್ಲ.
ಉಳವಿ ಚನ್ನಬಸವೇಶ್ವರ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕಾವಿಧಾರಿ ಮಠಾಧೀಶರು ಬರುತ್ತಾರೆ. ಆದರೆ ಈ ವರ್ಷದ ಜಾತ್ರೆಗೆ ಯಾವ ಕಾವಿಧಾರಿ ಮತ್ತು ಮಠಾಧೀಶರಿಗೆ ಆಮಂತ್ರಣ ನೀಡಬಾರದೆಂದು ಕಲ್ಮಠ ಶಾಸ್ತ್ರೀ ಹೇಳಿದರು. ನಂತರ ಚರ್ಚಿಸಿ ನಿರ್ಣಯ ಅಂಗೀಕರಿಸಲಾಗಿದೆ.
ಫೆಬ್ರವರಿ 13 ಮಹಾರಥೋತ್ಸವ. ಉಳವಿ ಶ್ರೀ ಚನ್ನಬಸವೇಶ್ವರ ಮಹಾರಥೋತ್ಸವ ಭಾರತ ಹುಣ್ಣಿಮೆಯಂದು ಫೆಬ್ರವರಿ 13 ರಂದು ಮಧ್ಯಾಹ್ನ 4 ಗಂ ಗೆ ನಡೆಯಲಿದೆ.
ಈ ಸಂದರ್ಭದಲ್ಲಿ ಸಂಜಯ ಕಿತ್ತೂರ ಅಧ್ಯಕ್ಷರು ಉಳವಿ ಟ್ರಸ್ಟ್ ಕಮಿಟಿ, ಉಪಾಧ್ಯಕ್ಷ ಪ್ರಕಾಶ್ ಕಿತ್ತೂರ, ಸದಸ್ಯ ಗಂಗಾಧರ ಕಿತ್ತೂರ, ಸಿಪಿಐ ಚಂದ್ರಶೇಖರ ಹರಿಹರ, ಮಂಜುನಾಥ ಮೊಕಾಶಿ ಅ.ಗ್ರಾ.ಪಂ.ಉಳವಿ, ಗುಂದ ಗ್ರಾ.ಪಂ.ಅ. ಅರುಣ ದೇಸಾಯಿ, ಎ.ಎಸ್ ಬೈಲಾ ಆರ್ ಎಪ್ ಓ ಕುಂಬಾರವಾಡಾ, ನೀಲಕಂಠ ದೇಸಾಯಿ ಗುಂದ ಆರ್ ಎಪ್ ಓ, ಪಿಎಸ್ ಐ ಮಹೇಶ್ ಮಾಳಿ, ತಾ.ಪಂ. ಮ್ಯಾನೇಜರ್ ಜಿ.ವಿ. ಭಟ್, ಪಿ.ಡಿ ಓ ಹನಿಪ್ ಸ್ವಾಗತಿಸಿ ವಂದಿಸಿದರು.
ವರದಿ :ನಿತೀಶಗೌಡ ತಡಸ ಪಾಟೀಲ್




