ಬಾಗಲಕೋಟ : ಜಿಲ್ಲೆಯ ಬಾದಾಮಿ ಯಲ್ಲಿ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಾಗಲಕೋಟ ವಿಭಾಗ ಬಾದಾಮಿ ಘಟಕ 24 ನೆ ಜನೆವರಿ 2025ಈ ಸಂಸ್ಥೆಯ ಎಲ್ಲ ಹೆಮ್ಮೆಯ ಚಾಲನ ಸಿಬ್ಬಂದಿಗಳ ಸನ್ಮಾನ ಮಾಡಿ ಚಾಲಕರಿಗೆ ಶುಭಾಶಯಗಳು ತಿಳಿಸುತ್ತಾ

ಅದರ ಜೊತೆ ಬಾಗಲಕೋಟ ಜಿಲ್ಲಾ ಪೊಲೀಸ್ ಬಾದಾಮಿ ಪೊಲೀಸ್ ಠಾಣಾ ಇವರು ಕೊಡ ರಸ್ತೆ ಸುರಕ್ಷತಾ ಸಪ್ತಾಹ ಮತ್ತು ರಾಷ್ಟ್ರಿಯ ಮತದಾರರ ದಿನ ಆಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಸಿ ಪಿ ಅಯ್ ಹಾಗೂ ವಿಭಾಗಿಯ ಸಾರಿಗೆ ಅಧಿಕಾರಿ ಮತ್ತು ಬಾದಾಮಿಯ ಡಿಪೋ ಮ್ಯಾನೆಜರ ಅಶೋಕ್ ಕೋರಿ ಈ ಸಭೆಗೆ ಶೋಭೆ ತಂದರು ಈ ದಿನ ಇನ್ನೊಂದು ವಿಶೇಷ ಕಾರ್ಯಕ್ರಮ ಎಲ್ಲಾ ಚಾಲಕರ ಮತ್ತು ಕಣ್ಣಿನ ತಪಾಸಣೆಯ ಶಿಬಿರ ವನ್ನು ಕೊಡಾ ಹಮ್ಮಿಕೊಳ್ಳಲಾಗಿದೆ

ಇದರ ಜೊತೆ ಬಸ್ ನಿಲ್ದಾಣ ವನ್ನು ಕೊಡ ಸ್ವಚ್ಚತೆ ಬಗ್ಗೆ ಅಷ್ಟೇ ಮತ್ತು ಬಸ್ ನಿಲ್ಲುವ ಸ್ಥಳದಲ್ಲಿ ಊರಿಗೆ ಹೋಗುವ ಸ್ಥಳದಲ್ಲಿ ಬೋರ್ಡ್ ಹಾಕಿದ್ದು ಒಟ್ಟಿನಲ್ಲಿ ಬಾದಾಮಿ ಬಸ್ ನಿಲ್ದಾಣ ಅಚ್ಚುಕಟ್ಟಾಗಿದೆ ಹಾಗೂ ಬಸ್ ನಿಲ್ದಾಣ ಸುತ್ತಲೂ ಗಿಡಗಳು ನೆಟ್ಟಿದ್ದು ಡಿಪೋ ಮ್ಯಾನೇಜರ್ ಇವರು ತುಂಬಾ ಒಳ್ಳೊಳ್ಳೆ ಕೆಲಸ ಮಾಡಿದ್ದು ಇವರ ಒಳ್ಳೆ ವ್ಯಕ್ತಿತ್ವ ಸಿಬ್ಬಂದಿಯನ್ನು ಬಹಳ ಪ್ರೀತಿಯಿಂದ ಕಾಣುತ್ತಾರೆ ಎಂದು ಸ್ವತಹ ಸಿಬ್ಬಂದಿ ಗಳ ಉತ್ತರ ಇನ್ನೂ ಹೆಚ್ಚು ಹೆಚ್ಚು ಕಾರ್ಯಕ್ರಮ ಮಾಡುತ್ತೇನೆಂದು ಕೋರಿ ಯವರ ಮಾತು

ವರದಿ. ಶಿವಾನಂದ




