ಧಾರವಾಡ : ಅಂತರ್ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಪ್ರಯುಕ್ತ ಹಾಗೂ ಸೇವಾ ಭಾರತಿ ಟ್ರಷ್ಟನ ರಜತ ಮಹೋತ್ಸವ ದ ಅಂಗವಾಗಿ ಆದಂತಹ ಸಮಾಜ ಸೇವಕರು ಆದಂತಹ ಮಂಜುನಾಥ ಶಿವಪ್ಪ ಮಕ್ಕಳಗೇರಿ ಯವರ ನೇತೃತ್ವದಲ್ಲಿ, ಧಾರವಾಡ ನಗರದ ರಾಜನಗರ ಕಾಲೋನಿಯಲ್ಲಿ ಇಂದು ಸರ್ವ ಸೇವೆ ಮಾಡುತ್ತಿರುವ ಆಶಾ ಕಾರ್ಯಕರ್ತೆಯರಿಗೆ ವಿಶೇಷವಾಗಿ ಸನ್ಮಾನ ಮಾಡಲಾಯಿತು.

ಸೇವಾ ಭಾರತಿ ಟ್ರಸ್ಟ್ ವತಿಯಿಂದ ಭಾರತ ಮಾತೆಗೆ ಪೂಜಾ ಪುಷ್ಪರ್ಪಣೆಯ ಮೂಲಕ ಕಾರ್ಯಕ್ರಮ ನೆರವೇರಿಸಿದರು, ದೇಶದಲ್ಲಿ ಇರುವ ಹೆಣ್ಣುಮಕ್ಕಳು ದೇವತಾ ಸಮಾನ ಹಾಗೂ ಇಂದು ನಾವೆಲ್ಲರೂ ಭಾರತ ಮಾತೆಗೆ ಹೋಲಿಸುವದರಲ್ಲಿ ಸರಿಯಾಗಿದೆ ಹಾಗೂ, ಆಶಾ ಕಾರ್ಯಕರ್ತೆಯರು ಹಗಲಿರುಳು ಪಡುವ ಶ್ರಮವನ್ನು ನೋಡಿ ಮಂಜುನಾಥ ಮಕ್ಕಳಗೇರಿ ಬಳಗದ ವತಿಯಿಂದ ಅವರಿಗೆ ಗೌರವ ಸಲ್ಲಿಸಿದರು.

ಸಂಧರ್ಭದಲ್ಲಿ ನಗರರದ ಹಿರಿಯರು, ಶ್ರೀಧರ್ ನಾಡಿಗೇರ್, ಮಂಜುನಾಥ ಶಿವಪ್ಪ ಮಕ್ಕಳಗೇರಿ, ಸವಿತಾ ಅಮರ್ಶೆಟ್ಟಿ, ಗುರುನಾತ ವಾಲಿ, ಹಾಗೂ ನಗರದ ಯುವಕರು ಮಹಿಳೆಯರು, ಕಾರ್ಯಕರ್ತರು ಇದ್ದರು.
ವರದಿ: ವಿನಾಯಕ ಗುಡ್ಡದಕೇರಿ




