ಮಾನ್ವಿ ತಾಲೂಕಿನ ಉಟಕನೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಈರಮ್ಮ ಸದಸ್ಯತ್ವ ರದ್ದು
ಹಾಲಿ ಸದಸ್ಯೆ ಕಾವೇರಿ ಗಂಡ ಗೋವಿಂದಪ್ಪ ಸದಸ್ಯತ್ವ ರದ್ದು
ಪಂಚಾಯತ್ ರಾಜ್ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಆದೇಶ
6 ವರ್ಷಗಳ ಕಾಲ ಚುನಾವಣೆಗೆ ನಿಲ್ಲದಂತೆ ಸದಸ್ಯರಿಗೆ ಆದೇಶ
ಹೈದರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ಜಯ ಎಂದ ಎಂ.ಬಿ.ನಾಯಕ
ಮಾನ್ವಿ : ಮಾನ್ವಿ ತಾಲೂಕಿನ ಉಟಕನೂರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಕಾವೇರಿ ಹಾಗು ಹಾಲಿ ಅಧ್ಯಕ್ಷೆ ಈರಮ್ಮ ಅವರು 15ನೆ ಹಣಕಾಸು ಯೋಜನೆಯ ಹಣವನ್ನು ದುರ್ಬಳಕೆ ಮಾಡಿಕೊಂಡ ಹಿನ್ನೆಲೆಯಲ್ಲಿ ದೂರಿನ ಆಧಾರದ ಮೇಲೆ ಪಂಚಾಯತ್ ರಾಜ್ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಅವರು ಸದಸ್ಯತ್ವ ರದ್ದು ಮಾಡಿ ಆದೇಶ ಹೊರಡಿಸಿದ್ದಾರೆಂದು ಹೈದರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ತಾಲೂಕ ಅಧ್ಯಕ್ಷ ಎಂ.ಬಿ.ನಾಯಕ ತಿಳಿಸಿದರು.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಉಟಕನೂರು ಗ್ರಾಮ ಪಂಚಾಯತಿ 2022-23 ನೆ ಸಾಲಿನ 15ನೆ ಹಣಕಾಸು ಯೋಜನೆಯ ಸರಕಾರದ ನಿಯಮಗಳಂತೆ ಕಾಮಗಾರಿ ಮಾಡದೆ ಉಲ್ಲಂಘನೆ ಮಾಡಿದ್ದರಿಂದ ನಾವು ಹೋರಾಟ ಮಾಡಲಾಗಿತ್ತು.ಸರಕಾರದ ಅಧಿಕಾರಿಗಳು ಕಾನೂನು ಬದ್ಧವಾಗಿ ವರದಿ ಸಲ್ಲಿಸಿದ್ದರಿಂದ ಪಂಚಾಯತ್ ರಾಜ್ ಇಲಾಖೆ ಅಪರ ಕಾರ್ಯದರ್ಶಿ ಉಮಾ ಮಹಾದೇವನ್ ಅವರು ಆದೇಶ ಹೊರಡಿಸಿದ್ದರಿಂದ ನಮಗೆ ಕಾನೂನು ಮೇಲೆ ನಂಬಿಕೆ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾವೇರಿ ಗಂಡ ಗೋವಿಂದಪ್ಪ ಹಾಲಿ ಸದಸ್ಯರು ಹಾಗು ಪ್ರಸ್ತುತ ಅಧ್ಯಕ್ಷೆ ಈರಮ್ಮ ಗಂಡ ಅಮರಪ್ಪ ಅವರ ಸದಸ್ಯತ್ವ ರದ್ದು ಮಾಡುವುದರ ಜೊತೆಗೆ 6 ವರ್ಷಗಳ ಕಾಲ ಚುನಾವಣೆಗೆ ನಿಲ್ಲದಂತೆ ಆದೇಶ ಹೊರಡಿಸಿದ್ದಾರೆ.ಯಾವುದೇ ಪಂಚಾಯತಿ ಅಧಿಕಾರಿಗಳು ಈ ರೀತಿ ಮಾಡಬಾರದು ಎಂ.ಬಿ.ನಾಯಕ ಬಸವರಾಜು ತಿಳಿಸಿದರು.




