ಬೆಂಗಳೂರು: – ಅಂತರಾಷ್ಟ್ರೀಯ ಹಿಂದೂ ಪರಿಷತ್ ರಾಷ್ಟ್ರೀಯ ಬಜರಂಗದಳದ ರಾಜ್ಯಾಧ್ಯಕ್ಷ ವಿ ಆನಂದ್ ಡಾ. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ನಾವು ಸಮಾನತೆಯನ್ನು ಬೆಳೆಸಿಕೊಳ್ಳುವುದಾದರೆ ಮೊದಲು ಅಂಬೇಡ್ಕರ್ ಅವರ ಜ್ಞಾನ ತತ್ವ ಸಿದ್ಧಾಂತ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಅವರ ದಾರಿಯಲ್ಲಿ ನಡೆಯುವುದನ್ನು ಕಲಿತುಕೊಳ್ಳಬೇಕು ಅವರ ಹೆಸರನ್ನು ಬಳಸಿಕೊಂಡು ಅವರ ಹೆಸರಿಗೆ ಕಳಂಕ ಬಾರದ ಹಾಗೆ ಸರಿದಾರಿಯಲ್ಲಿ ನಡೆಯಬೇಕು ಅಂಬೇಡ್ಕರ್ ರವರು ಒಂದು ಕ್ಷಣವೂ ಸಹ ತಪ್ಪು ದಾರಿಯಲ್ಲಿ ನಡೆದವರಲ್ಲ ದೇಶದ ದೀನದಲಿತರ ಹಿಂದುಳಿದ ಅಲ್ಪಸಂಖ್ಯಾತರ ಪ್ರತಿ ಸಮುದಾಯದ ಬಡವರ ಬಗ್ಗೆ ಸದಾ ಚಿಂತಿಸಿದ ಮಹಾನ್ ನಾಯಕ ಅಂಬೇಡ್ಕರ್ ಅವರು ಹುತಾತ್ಮರಾದ ದಿನ ಆದ್ದರಿಂದ ಅವರ ಆತ್ಮಕ್ಕೆ ಕೋಟಿ ಕೋಟಿ ನಮನ ಸಲ್ಲಿಸೋಣ ಎಂದು ಅಂತಾರಾಷ್ಟ್ರೀಯ ಹಿಂದೂ ಪರಿಷತ್ ರಾಷ್ಟ್ರೀಯ ಬಜರಂಗದಳದ ರಾಜ್ಯಾಧ್ಯಕ್ಷ ಹಾಗೂ ಸಮಿತಿಯ ಗೌರವಾಧ್ಯಕ್ಷ ವಿ. ಆನಂದ್ ಹೇಳಿದರು.
ಅವರು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಪೀಣ್ಯ 2ನೇ ಹಂತದಲ್ಲಿರುವ ಅಂತರಾಷ್ಟ್ರೀಯ ಎಂದು ಪರಿಷತ್ ರಾಷ್ಟ್ರೀಯ ಬಜರಂಗದಳದ ಪ್ರದಾನ ಕಚೇರಿಯಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 68ನೇ ಪರಿನಿರ್ವಾಣ ದಿನದ ಅಂಗವಾಗಿ ನಮನ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ರಾಮಯ್ಯ ಬಡಾವಣೆಯ ಹಿರಿಯ ನಾಯಕ ಹಾಗೂ ಜೆಡಿಎಸ್ ಹಿಂದುಳಿದ ವರ್ಗದ ಅಧ್ಯಕ್ಷ ಶಿವಣ್ಣ ಮಾತನಾಡಿ ಅಂಬೇಡ್ಕರ್ ರವರು ಜಾತಿ ಭೇದವಿಲ್ಲದೆ ನಾವೆಲ್ಲರೂ ಸಮಾನರಾಗಿ ಬಾಳಬೇಕು ಎಂದು ಕನಸು ಕಂಡಿದ್ದರು ನಾವು ಸಹ ಅವರು ಹಾಕಿಕೊಟ್ಟಿರುವ ಮಾರ್ಗದರ್ಶನದಲ್ಲಿ ನಡೆಯಬೇಕು ಆದ್ದರಿಂದ ನಾವೆಲ್ಲರೂ ಅವರನ್ನು ಈ ದಿನ ಸ್ಮರಿಸೋಣ ಎಂದು ಹೇಳಿದರು.ಅರುಣ್ ಸಾಗರ್ ಟ್ರಾವೆಲ್ಸ್ ಮಾಲೀಕ ಕುಮಾರ್ ಭಾಗವಹಿಸಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.ಭೀಮ ಸಂದೇಶ ಪತ್ರಿಕೆಯ ಸಂಪಾದಕ ಹಾಗೂ ಅಹಿಂದಾ ರಕ್ಷಣಾ ಸಮಿತಿ ಸಂಸ್ಥಾಪಕ ರಾಜ್ಯಾಧ್ಯಕ್ಷ ನರಸಿಂಹಮೂರ್ತಿ ವೈ ಜಿ ಹಾಜರಿದ್ದು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವುದರೊಂದಿಗೆ ಪುಣ್ಯ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ, ಅಯ್ಯಣ್ಣ ಮಾಸ್ಟರ್. ಸಂಜೆ ಸಮಯ ವರದಿಗಾರ ಕೆಂಪರಾಜು. ರಾಜ್ಯ ಸಂಘಟನಾ ಕಾರ್ಯದರ್ಶಿ ನವೀನ್. ಲಕ್ಷ್ಮಿ ಇಂಜಿನಿಯರಿಂಗ್ ಇಂಡಸ್ಟ್ರೀಸ್ ಮಾಲೀಕ ಗೋವಿಂದ ಜಿ ಕೆ ಡಬ್ಲ್ಯೂ ಅಂತರಾಷ್ಟ್ರೀಯ ಹಿಂದೂ ಪರಿಷತ್ ಮುಖಂಡ ರವೀಂದ್ರ ಕುಮಾರ್ ಜಿಕೆಡಬ್ಲ್ಯ ಲೇಔಟ್, ಕಾಂತರಾಜು ಸೇರಿದಂತೆ ಅಂತಾರಾಷ್ಟ್ರೀಯ ಹಿಂದೂ ಪರಿಷತ್ ರಾಷ್ಟ್ರೀಯ ಬಜರಂಗದಳದ ಮುಖಂಡರು ಮಹಿಳೆಯರು ಕಾರ್ಯಕರ್ತರು ಹಾಗೂ ಅಹಿಂದಾ ರಕ್ಷಣಾ ಸಮಿತಿ ಪದಾಧಿಕಾರಿಗಳು ಸದಸ್ಯರು ಮುಂತಾದವರು ಉಪಸ್ಥಿತರಿದ್ದು ಡಾ. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ವರದಿ:- ಅಯ್ಯಣ್ಣ ಮಾಸ್ಟರ್