ನಂದವಾಡಗಿ : ಬಾಗಲಕೋಟೆ ಜಿಲ್ಲೆಯ ಹುನಗುಂದ /ಇಲಕಲ್ ತಾಲೂಕಿನ ಸರಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ನಂದವಾಡಗಿಯಲ್ಲಿ ೭೬ ನೇ ಗಣರಾಜ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು. ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರು ಜಯಶ್ರೀ ವಗ್ಗರ, ಶಾಲೆಯ ಮುಖ್ಯ ಗುರುಮಾತೆ ವಿ ಬಿ ಕುಂಬಾರರವರು ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು. ಶಾಲೆಯ ಎಸ್ ಡಿ ಎಮ್ ಸಿ ಸರ್ವ ಸದಸ್ಯರು, ಶಿಕ್ಷಕರ ವೃಂದ, ಊರಿನ ಗಣ್ಯರು, ಯುವಕರು, ಪಾಲಕರು, ಪೋಷಕರು ಹಾಗೂ ವಿದ್ಯಾರ್ಥಿನಿಯರು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಂತರ ಶಾಲೆಯ ಮುಖ್ಯ ಗುರುಮಾತೆ ವಿ ಬಿ ಕುಂಬಾರ ಸಂವಿಧಾನ ಜಾರಿಗೆ ಬಂದ ಹಿನ್ನಲೆ, ಅದರ ಮಹತ್ವ ನಮ್ಮ ಜವಾಬ್ದಾರಿ, ಕರ್ತವ್ಯ, ಶಿಕ್ಷಣ ಪಡೆದು ದೇಶದ ಪ್ರಗತಿಗೆ ನಾವೆಲ್ಲರೂ ಶ್ರಮಿಸಬೇಕು ಎಂದು ಹೇಳಿದರು. ಇದೆ ಸಂದರ್ಭದಲ್ಲಿ ಶಿಕ್ಷಕರಿಗೆ ಸನ್ಮಾನಿಸಿ ನಮ್ಮ ಶಾಲೆ ಶಿಕ್ಷಣದಲ್ಲಿ ಉತ್ತಮವಾಗಿ ಬೆಳವಣಿಗೆ ಹೊಂದಲಿಕ್ಕೆ ಎಸ್ ಡಿ ಎಮ್ ಸಿ ಪಾಲಕರ, ಪೋಷಕರ ಸಹಕಾರ, ಶಿಕ್ಷಕರ ಹಾಗೂ ವಿದ್ಯಾರ್ಥಿನಿಯರ ನಿರಂತರ ಶ್ರಮ, ಕರ್ತವ್ಯ ಕಾರಣವಾಗಿದೆ ಎಂದರು. ನಂತರ ವಿದ್ಯಾರ್ಥಿಗಳು ಗಣರಾಜ್ಯ ದಿನಾಚರಣೆಯ ಅನಿಸಿಕೆ ಹೇಳಿದರು. ಮಕ್ಕಳ ಹಾಡು, ನೃತ್ಯ, ನಾಟಕ, ಪಾತ್ರಾಭಿನಯಗಳು ಕಾರ್ಯಕ್ರಮಕ್ಕೆ ಮೆರುಗು ತಂದಿತು. ಗಣರಾಜ್ಯೋತ್ಸವ ನಿಮಿತ್ಯವಾಗಿ ಕಲಿಕಾ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಇದರಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಪದಕವನ್ನು ನೀಡಿ ಸನ್ಮಾನಿಸಲಾಯಿತು.

ಈ ದಿನಾಚರಣೆಯ ಕಾರ್ಯಕ್ರಮದಲ್ಲಿ ಶಾಲೆಯ ಎಸ್ ಡಿ ಎಮ್ ಸಿ ಸದಸ್ಯರು ಶಿವಪ್ಪ ಕಟಾoಬ್ಳಿ, ಮಲ್ಲಪ್ಪ ಲೆಕ್ಕಿಹಾಳ, ವೀರಭದ್ರಯ್ಯ ಮಠ, ನಂದಿನಿ ಗೌಡರ ಹಾಗೂ ಸರ್ವ ಸದಸ್ಯರು, ಸಹ ಶಿಕ್ಷಕರಾದ ಜ್ಯೋತಿ, ಜಿ ಆರ್, ನದಾಫ್, ಬಸವರಾಜ ಬಲಕುಂದಿ, ಡಾ ವಿಶ್ವನಾಥ ತೋಟಿ, ಚಂದ್ರಶೇಖರ ಹುತಗಣ್ಣ, ಅಶ್ವಿನಿ ಕಪ್ಪರದ, ಸ ಉ ಕಿ ಪ್ರಾ ಶಾಲೆ ನಂದವಾಡಗಿ ಎಸ್ ಡಿ ಎಮ್ ಸಿ ಅಧ್ಯಕ್ಷರು ಹುಸೇನಸಾಬ ಬಾಗವಾನ, ಮುಖ್ಯ ಗುರುಮಾತೆ ಗಂಗಾ, ಅತಿಥಿ ಶಿಕ್ಷಕಿ ವಿದ್ಯಾರ್ಥಿನಿಯರು, ಶಾಲಾ ಮಂತ್ರಿ ಮಂಡಲ, ಊರಿನ ಸಮಸ್ತ ಗುರು ಬಳಗ, ಶಿಕ್ಷಣ ಪ್ರೇಮಿ ಗೋಪಿ ಶಿಂಧೆ, ಪಾಲಕರು, ಯುವಕರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಬಸವರಾಜ ಬಲಕುಂದಿ ಕಾರ್ಯಕ್ರಮ ನಿರೂಪಿಸಿದರು, ಡಾ ವಿಶ್ವನಾಥ ತೋಟಿ ಸ್ವಾಗತಿಸಿದರು. ಚಂದ್ರಶೇಖರ ಹುತಗಣ್ಣ ವಂದಿಸಿದರು.




