Ad imageAd image

ಸಂವಿಧಾನ ರಚನಾಕಾರರನ್ನು ಸದಾ ಸ್ಮರಿಸಿ

Bharath Vaibhav
ಸಂವಿಧಾನ ರಚನಾಕಾರರನ್ನು ಸದಾ ಸ್ಮರಿಸಿ
WhatsApp Group Join Now
Telegram Group Join Now

ಕಲಘಟಗಿ: ಸ್ವಾತಂತ್ರ್ಯ, ಸಮಾನತೆ, ಏಕತೆ, ಭ್ರಾತೃತ್ವ, ಸಹೋದರತ್ವ ನಮ್ಮ ಸಂವಿಧಾನ ಪ್ರಮುಖ ಮೌಲ್ಯಗಳಾಗಿವೆ. ಸಂವಿಧಾನ ರಚನೆಗೆ ಮಹತ್ವದ ಕೊಡುಗೆ ನೀಡಿದ ಡಾ ಬಿ.ಆರ್‌.ಅಂಬೇಡ್ಕರ್‌ ಹಾಗೂ ಗಣ್ಯರನ್ನು ನಾವು ಸದಾ ಸ್ಮರಿಸಬೇಕು ಎಂದು ತಹಶೀಲ್ದಾರ್ ವೀರೇಶ ಮುಳುಗುಂದಮಠ ಹೇಳಿದರು.

ಪಟ್ಟಣದ ಶಾಸಕರ ಮಾದರಿ ಶಾಲೆಯಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಲಾಗಿದ್ದ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಸಂವಿಧಾದಿಂದ ಭಾರತ ಸದೃಢವಾಗಿ ಬೆಳೆದು ನಿಂತಿದೆ. ದೇಶದಲ್ಲಿ ಸ್ವಾತಂತ್ರ್ಯ, ಸಮಾನತೆ ಭ್ರಾತೃತ್ವ ಭಾವನೆಗಳು ನೆಲೆಯೂರಿವೆ ಎಂದಾದರೆ ಅದಕ್ಕೆ ಸಂವಿಧಾನವೇ ಮೂಲ ಕಾರಣವಾಗಿದೆ ಎಂದು ಹೇಳಿದರು.

ಸಾಧಕರಿಗೆ ಸನ್ಮಾನ:

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿವಿಧ ಇಲಾಖೆಯ ನೌಕರರು, ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶಾಲಾ ಮಕ್ಕಳಿಂದ ದೇಶ ಭಕ್ತಿ ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.

ಪಪಂ ಅಧ್ಯಕ್ಷೆ ಶಿಲ್ಪಾ ಪಾಲ್ಕರ್, ಉಪಾಧ್ಯಕ್ಷ ಗಂಗಾಧರ ಗೌಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಮುರಳ್ಳಿ, ಕೃಷಿಕ ಸಮಾಜದ ಅಧ್ಯಕ್ಷ ಮುಕುಂದಪ್ಪ ಅಂಚಟಗೇರಿ, ನೌಕರರ ಸಂಘದ ಅಧ್ಯಕ್ಷ ಜಗದೀಶ ವಿರಕ್ತಮಠ, ಉಪ ತಹಶೀಲ್ದಾರ್ ಬಸವರಾಜ ಹೊಂಕಣ್ಣವರ, ಬಸವರಾಜ ಅಂಗಡಿ, ಸಿಪಿಐ ಶ್ರೀಶೈಲ ಕೌಜಲಗಿ, ಆರ್.ಎಫ್.ಒ ಅರುಣಕುಮಾರ ಅಷ್ಟಗಿ, ಬಿಇಒ ಉಮಾದೇವಿ ಬಸಾಪುರ, ಕಾರ್ಮಿಕ ಇಲಾಖೆ ಅಧಿಕಾರಿ ಲತಾ ಟಿ.ಎಸ್., ಸಿಡಿಪಿಒ ವಿದ್ಯಾ ಬಡಿಗೇರ, ಶ್ರೀಧರ ಪಾಟೀಲ ಕುಲಕರ್ಣಿ, ಬಾಳು ಖಾನಾಪುರ, ಎಸ್.ಎ. ಚಿಕ್ಕನರ್ತಿ ಇತರರಿದ್ದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!